More

    ಭಾರತ ಮತ್ತು ನೇಪಾಳದ ನಡುವೆ ಸಾಂಸ್ಕೃತಿಕ ಭಿನ್ನಮತ ಸೃಷ್ಟಿಸುವ ಯತ್ನ

    ನವದೆಹಲಿ: ನಿಜವಾದ ಅಯೋಧ್ಯೆ ನೇಪಾಳದಲ್ಲಿದೆ. ಶ್ರೀರಾಮ ಹುಟ್ಟಿ ಬೆಳದದ್ದೆಲ್ಲಾ ಇಲ್ಲಿಯೇ ಎಂಬ ನೇಪಾಳ ಪ್ರಧಾನಿ ಕೆ.ಪಿ. ಶರ್ಮ ಓಲಿ ಅವರ ಹೇಳಿಕೆಗೆ ಅವರದ್ದೇ ರಾಷ್ಟ್ರದಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿದೆ.

    ಭಾರತ ಮತ್ತು ನೇಪಾಳದ ನಡುವಿನ ಸಾಂಸ್ಕೃತಿಕ ಸಂಬಂಧವನ್ನು ಹದಗೆಡೆಸಲು ಸಾಂಸ್ಕೃತಿಕ ಭಿನ್ನಮತ ಸೃಷ್ಟಿಸಲು ಪ್ರಧಾನಿ ಓಲಿ ಪ್ರಯತ್ನಿಸುತ್ತಿದ್ದಾರೆ. ಚೀನಾದ ನಿರ್ದೇಶನದ ಮೇರೆಗೆ ಅವರು ಈ ನಾಟಕ ಆರಂಭಿಸಿದ್ದಾರೆ ಎಂದು ನೇಪಾಳದ ಪ್ರಮುಖ ದಿನಪತ್ರಿಕೆಗಳು ಹೇಳಿವೆ.

    ಇದನ್ನೂ ಓದಿ: ಹಿಂದೂ ಯುವಕನ ಗಂಟಲು ಸೀಳಿ ನದಿಗೆ ಎಸೆದ ಪಾಕ್‌ ಪಾಪಿಗಳು!

    ಭಾರತದ ಪ್ರದೇಶಗಳನ್ನು ಸೇರಿಸಿಕೊಂಡು ನೇಪಾಳದ ಪರಿಷ್ಕೃತ ನಕ್ಷೆಯನ್ನು ಸಿದ್ಧಪಡಿಸಿ, ಸಂಸತ್​ನ ಅನುಮೋದನೆ ಪಡೆಯಲು ಓಲಿ ತರಾತುರಿ ತೋರಿದಾಗ ಹೇಳಿಕೆ ಬಿಡುಗಡೆ ಮಾಡಿದ್ದ ಭಾರತದ ವಿದೇಶಾಂಗ ಸಚಿವಾಲಯ, ಪರಿಷ್ಕೃತ ನಕ್ಷೆಯ ಕುರಿತು ನೇಪಾಳದೊಂದಿಗೆ ಯಾವುದೇ ಮಾತುಕತೆ ನಡೆಸುವುದಿಲ್ಲ. ಬದಲಿಗೆ ಉಭಯ ರಾಷ್ಟ್ರಗಳ ಜನರ ನಡುವಿನ ಸಂಬಂಧವನ್ನು ಉತ್ತಮಪಡಿಸಲು ಎಲ್ಲ ಪ್ರಯತ್ನಗಳನ್ನು ಮಾಡುವುದಾಗಿ ಹೇಳಿತ್ತು. ಈ ಹಿನ್ನೆಲೆಯಲ್ಲಿ ಓಲಿ, ಉಭಯ ರಾಷ್ಟ್ರಗಳ ನಡುವಿನ ಜನರ ನಡುವೆ ವೈಚಾರಿಕ ಭಿನ್ನಮತ ಸೃಷ್ಟಿಸುವಂಥ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎನ್ನಲಾಗಿದೆ.

    ಶ್ರೀ ರಾಮ ಜನಿಸಿದ ಅಯೋಧ್ಯೆ ನೇಪಾಳದಲ್ಲಿದೆ ಎಂಬ ಪ್ರಧಾನಿ ಓಲಿ ಅವರ ಹೇಳಿಕೆ ತೀರಾ ಹಾಸ್ಯಾಸ್ಪದ ಎಂದು ನೇಪಾಳಿ ಕಮ್ಯುನಿಸ್ಟ್​ ಪಾರ್ಟಿಯ ಸದಸ್ಯರೇ ಹೇಳಿದ್ದಾರೆ. ರಾಷ್ಟ್ರದಲ್ಲಿ ಭಾರತ ವಿರೋಧಿ ಮನೋಭಾವವನ್ನು ಗಾಢವಾಗಿ ಬೆಳೆಸುವ ಉದ್ದೇಶದಿಂದಲೇ ಅವರು ಇಂಥ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ತನ್ಮೂಲಕ ಅವರು ಸಾಂಸ್ಕೃತಿಕ ಅಂಶಗಳ ಮೇಲೂ ಅತಿಕ್ರಮ ಮಾಡುವ ಇರಾದೆ ತೋರುತ್ತಿದ್ದಾರೆ. ಇದರ ಹಿಂದೆ ಚೀನಾ ಇದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ನೇಪಾಳಿ ಜನತೆ ಕೂಡ ಹೇಳುತ್ತಿದ್ದಾರೆ.

    https://www.vijayavani.net/covid-positive-for-druva-sarja-family/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts