More

    ರಾಮನಗರದಲ್ಲಿ ಸೋಂಕಿತರ ನಿರ್ವಹಣೆಗೆ ಕೋವಿಡ್ ವಾರ್​ರೂಂ

    ರಾಮನಗರ: ಜಿಲ್ಲಾ ಕೋವಿಡ್-19ರ ವಾರ್ ರೂಂ ಮೂಲಕ ಕರೊನಾ ರೋಗಿಗಳ ನಿರ್ವಹಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಟಿ. ಜವರೇಗೌಡ ತಿಳಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ತರಬೇತಿ ಕೇಂದ್ರದ ಆವರಣದಲ್ಲಿ ಶುಕ್ರವಾರ ಜಿಲ್ಲಾ ಕೋವಿಡ್-19ರ ವಾರ್ ರೂಂ ಉದ್ಘಾಟಿಸಿ ಮಾತನಾಡಿ, ಮುಂದಿನ ದಿನಗಳಲ್ಲಿ ಕರೊನಾ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದ್ದು, ಅಂತಹ ಸಂದರ್ಭದಲ್ಲಿ ದತ್ತಾಂಶ ನಿರ್ವಹಣೆ ಮತ್ತು ಸೋಂಕಿತರಿಗೆ ಉಚಿತ ಸೇವೆ ನೀಡಲು ವಾರ್ ರೂಂ ಸಜ್ಜುಗೊಳಿಸಲಾಗಿದೆ ಎಂದರು.

    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಿರಂಜನ್ ಮಾತನಾಡಿ, ಕರೊನಾ ರೋಗಿಗಳ ವಿಳಾಸ ಪತ್ತೆಮಾಡಿ, ಅವರನ್ನು ಆಸ್ಪತ್ರೆಗಳಿಗೆ ದಾಖಲಿಸುವ ಕಾರ್ಯ ಹಾಗೂ ತುರ್ತು ಸಂದರ್ಭಗಳಲ್ಲಿ ನಿರ್ವಿುತಿ ಕೇಂದ್ರದಿಂದ ನೀಡಲಾಗಿರುವ 4 ಆಂಬುಲೆನ್ಸ್​ಗಳ ಮೂಲಕ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸುವ ಕೆಲಸವನ್ನು ವಾರ್ ರೂಂ ಮೂಲಕ ನಿರ್ವಹಿಸಲಾಗುವುದು ಎಂದರು.

    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ತರಬೇತಿ ಕೇಂದ್ರದ ಪ್ರಾಂಶುಪಾಲೆ ಡಾ. ಮಂಜುಳಾ, ಡಿಎಸ್​ಒ ಡಾ. ಕಿರಣ್ ಶಂಕರ್, ಎಪಿಡಮಾಲಾಜಿಸ್ಟ್ ಡಾ.ಸ್ವಾತಿ, ವಾರ್ ರೂಂ ಮೇಲ್ವಿಚಾರಕಿ ಶ್ವೇತಾಬಾಯಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಎಸ್ ಗಂಗಾಧರ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts