More

    ದ.ಕ ಹೊಸ ಕೊವಿಡ್ ಪ್ರಕರಣ ಇಲ್ಲ

    ಮಂಗಳೂರು: ಸತತ ನಾಲ್ಕು ದಿನದಿಂದ ದಕ್ಷಿಣ ಕನ್ನಡ ಜಿಲ್ಲೆಯ ಕರೊನಾ ಪಾಸಿಟಿವ್ ವಿಭಾಗಕ್ಕೆ ಯಾವುದೇ ಹೊಸ ಸೇರ್ಪಡೆಯಾಗಿಲ್ಲ.
    ಈವರೆಗೆ 38,279 ಮಂದಿಯ ಸ್ಕ್ರೀನಿಂಗ್ ನಡೆಸಲಾಗಿದ್ದು 5875 ಮಂದಿ ಮನೆಯ ಕ್ವಾರಂಟೈನ್‌ನಲ್ಲಿದ್ದಾರೆ. ಇಎಸ್‌ಐಯಲ್ಲಿ 28 ಮಂದಿ ಕ್ವಾರಂಟೈನ್ ಆಗಿದ್ದಾರೆ. 169 ಮಂದಿ ಈಗಾಗಲೇ 28 ದಿನಗಳ ಕ್ವಾರಂಟೈನ್ ಪೂರೈಸಿದ್ದಾರೆ. ಸೋಮವಾರ ಪರೀಕ್ಷೆಗೆ 8 ಮಾದರಿ ಕಳುಹಿಸಿದ್ದು, ಸಿಕ್ಕಿರುವ ಎಲ್ಲ ವರದಿಯೂ ನೆಗೆಟಿವ್ ಆಗಿದೆ. 4 ಪ್ರಕರಣಗಳ ಮೇಲೆ ನಿಗಾ ಇರಿಸಲಾಗಿದೆ.

    ಒಂದೇ ದಿನ 17 ಪಾಸಿಟಿವ್: ಕೊವಿಡ್-19 ವೈರಸ್ ಕಾಸರಗೋಡು ಜಿಲ್ಲೆಯಲ್ಲಿ ತನ್ನ ರೌದ್ರಾವತಾರ ಮುಂದುವರಿಸಿದ್ದು, ಜನರು ಆತಂಕದಿಂದಿದ್ದಾರೆ. ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ಶತಕ (106) ದಾಟಿದೆ.
    ಕೇರಳದಲ್ಲಿ ಸೋಮವಾರ ಪತ್ತೆಯಾಗಿರುವ 32 ಕರೊನಾ ಸೋಂಕು ಪೀಡಿತರಲ್ಲಿ 17 ಮಂದಿ ಕಾಸರಗೋಡಿನವರು. ಕಣ್ಣೂರಿನ 11 ಮಂದಿ, ವಯನಾಡ್ ಮತ್ತು ಇಡುಕ್ಕಿಯಲ್ಲಿ ತಲಾ ಇಬ್ಬರಲ್ಲಿ ವೈರಸ್ ಪತ್ತೆಯಾಗಿದೆ. ಒಟ್ಟು 32ರಲ್ಲಿ 17 ಮಂದಿ ವಿದೇಶದಿಂದ ಆಗಮಿಸಿದವರಲ್ಲಿ ವೈರಸ್ ಕಾಣಿಸಿಕೊಂಡಿದ್ದರೆ, 15 ಮಂದಿಗೆ ಸಂಪರ್ಕದಿಂದ ವೈರಸ್ ತಗುಲಿದೆ. ರಾಜ್ಯದಲ್ಲಿ ಒಟ್ಟು ವೈರಸ್ ಪೀಡಿತರ ಸಂಖ್ಯೆ 213ಕ್ಕೇರಿದೆ. ಒಟ್ಟು 7,447ಮಂದಿ ನಿಗಾದಲ್ಲಿದ್ದಾರೆ. 7,313 ಮಂದಿ ಮನೆಗಳಲ್ಲಿ ಹಾಗೂ 134 ಮಂದಿ ಆಸ್ಪತ್ರೆಗಳಲ್ಲಿದ್ದಾರೆ.

    ಸೋಂಕಿತ ಮಗುವಿನ ಆರೋಗ್ಯ ಸ್ಥಿರ
    ಬಂಟ್ವಾಳ: ಸಜೀಪನಡು ಗ್ರಾಮದಲ್ಲಿ ಕರೊನಾ ಪಾಸಿಟಿವ್ ಮಗುವಿನ ಆರೋಗ್ಯ ಸ್ಥಿರವಾಗಿದೆ. ಗ್ರಾಮದ ಮೇಲೆ ಜಿಲ್ಲಾಡಳಿತ ಕಣ್ಗಾವಲು ಇರಿಸಿದ್ದು, 918 ಮನೆಮಂದಿಯ ಆರೋಗ್ಯದ ಮೇಲೆ ನಿಗಾ ಇರಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
    ಗ್ರಾಮವನ್ನು ಸಂಪೂರ್ಣ ಲಾಕ್‌ಡೌನ್ ಮಾಡಿರುವುದರಿಂದ ಜನರಿಗೆ ದಿನಸಿ ಸಾಮಗ್ರಿಗಳನ್ನು ಮನೆ-ಮನೆಗೆ ತಲುಪಿಸುವ ಕಾರ್ಯವನ್ನು ಜಿಲ್ಲಾಡಳಿತ ಮತ್ತು ಗ್ರಾಪಂ ಟಾಸ್ಕ್‌ಫೋರ್ಸ್ ಸಮಿತಿ ಮಾಡುತ್ತದೆ. ದೇವಸ್ಥಾನಗಳ ಮೂಲಕ ನಿರಾಶ್ರಿತರು, ವಲಸೆ ಕಾರ್ಮಿಕರಿಗೆ ಊಟದ ವ್ಯವಸ್ಥೆ ಮಾಡಲಾಗುತ್ತದೆ ಎಂದು ಸೋಮವಾರ ಬಿ.ಸಿ.ರೋಡಿನಲ್ಲಿರುವ ಶಾಸಕರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸಂಸದ ನಳಿನ್ ಕುಮಾರ್ ಕಟೀಲು, ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು, ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ ಸುದ್ದಿಗೋಷ್ಠಿಯಲ್ಲಿದ್ದರು.

    ಜಿಲ್ಲಾಡಳಿತ ನೀಡುತ್ತಿರುವ ಸೂಚನೆಗಳನ್ನು ಬಂಟ್ವಾಳ ತಾಲೂಕಿನಲ್ಲಿ ತಹಸೀಲ್ದಾರ್, ಆರೋಗ್ಯ ಇಲಾಖೆ, ಪುರಸಭೆ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಅಚ್ಚುಕಟ್ಟಾಗಿ ಅನುಷ್ಠಾನಗೊಳಿಸುತ್ತಿದ್ದಾರೆ. ಜನರಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಆರೋಗ್ಯ ಇಲಾಖೆಯ 345 ಕಾರ್ಯಕರ್ತೆಯರು 6000 ಮನೆಗಳಿಗೆ ಭೇಟಿ ಮಾಡಿ ಜಾಗೃತಿ ಮೂಡಿಸಿದ್ದಾರೆ.
    ರಾಜೇಶ್ ನಾಕ್, ಬಂಟ್ವಾಳ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts