More

    ಶಾಲೆಯ ಅಧ್ಯಯನಕ್ಕೆ ಬರುತ್ತಾರೆ ಬೇರೆ ರಾಜ್ಯದವರು

    ಕೊಟ್ಟೂರು: ನಮ್ಮ ಶಾಲೆಯ ಗುಣ ಮಟ್ಟದ ಶಿಕ್ಷಣ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಸೌಲಭ್ಯಗಳನ್ನು ಒದಗಿಸುವುದು ಸೇರಿ ವಿವಿಧ ಕಾರಣಗಳಿಗಾಗಿ ಬೇರೆ ರಾಜ್ಯಗಳ ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾಧಿಕಾರಿಗಳು ಪ್ರತಿ ವರ್ಷ ಅಧ್ಯಯನಕ್ಕೆ ಬರುತ್ತಿರುವುದು ಹೆಮ್ಮೆಯ ಸಂಗತಿ ಎಂದು ಮೌಲನಾ ಆಜಾದ್ ಆಂಗ್ಲಮಾಧ್ಯಮ ಮಾದರಿ ಶಾಲೆಯ ಪ್ರಾಚಾರ್ಯ ಚಂದ್ರಶೇಖರ್ ಹೇಳಿದರು.

    ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಂಗಳವಾರ ಮಾತನಾಡಿದರು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.95 ಅಂಕಗಳಿಸಿದವರಿಗೆ 10 ಸಾವಿರ ರೂ., ಎರಡನೇ ಸ್ಥಾನ ಪಡೆದವರಿಗೆ 7500 ಸಾವಿರ ರೂ., ಮೂರನೇ ಸ್ಥಾನ ಪಡೆದವರಿಗೆ 7 ಸಾವಿರ ರೂ. ನೀಡಲಾಗುತ್ತದೆ. ಈ ಸೌಲಭ್ಯ ಬೇರೆ ಯಾವುದೇ ಸರ್ಕಾರಿ ಶಾಲೆಯಲ್ಲೂ ಇಲ್ಲ. ಶಾಲೆಗೆ ಬಾಡಿಗೆ ಕಟ್ಟಡದ ಸಮಸ್ಯೆ ಉದ್ಭವವಾಗಿ ಇಲ್ಲಿಂದ ಶಾಲೆಯನ್ನು ಬೇರೆ ತಾಲೂಕಿಗೆ ವರ್ಗಾವಣೆ ಮಾಡಲು ಇಲಾಖೆ ಚಿಂತನೆ ನಡೆಸಿತ್ತು. ಆಗ ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ತೋಟದ ರಾಮಣ್ಣ, ಕೆಳಗೇರಿ ಆಂಜನೇಯ ದೇವಾಲಯದ ಆವರಣದಲ್ಲಿ ಕ್ಲಾಸ್ ರೂಂ ನಿರ್ಮಿಸಿ ಬಾಡಿಗೆ ಕೊಟ್ಟು, ಶಾಲೆ ಇಲ್ಲೇ ಉಳಿಯುವಂತೆ ಮಾಡಿದರು ಎಂದರು.

    ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ತೋಟದ ರಾಮಣ್ಣ ಮಾತನಾಡಿ, ಮಕ್ಕಳನ್ನು ಮುದ್ದುಮಾಡಿ ವಿದ್ಯೆಯಿಂದ ವಂಚಿತರನ್ನಾಗಿ ಮಾಡಬೇಡಿ. ಮಹಿಳೆಯರು ಧಾರಾವಾಹಿ ನೋಡುವುದನ್ನು ಬಿಟ್ಟು ಮಕ್ಕಳ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಹರಿಸಬೇಕು ಎಂದರು.ಲೇಖಕ ಉಜ್ಜಿನಿ ರುದ್ರಪ್ಪ ಮಾತನಾಡಿ, ಪಾಲಕರು ಪ್ರತಿದಿನ ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಗಮನಹರಿಸಬೇಕು ಎಂದರು. ಕೂಡ್ಲಿಗಿಯ ಮೌಲನಾ ಅಜಾದ್ ಆಂಗ್ಲ ಮಾದರಿ ಶಾಲೆಯ ರಾಮಕೃಷ್ಣ ಮಾತನಾಡಿದರು.

    ವಾಲ್ಮೀಕಿ ಸಮುದಾಯದ ಮುಖಂಡರಾದ ಬೆಣ್ಣಿಹಳ್ಳಿ ಆಂಜಿನಪ್ಪ, ರಂಗಪ್ಪ ಇದ್ದರು. ಸಹನಾ ಮತ್ತು ಅಭಿ ಪ್ರಾರ್ಥಿಸಿದರು. ನಂತರ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts