More

    ಕೊನೆಯುಸಿರೆಳೆದ ಉಜ್ಜಿನಿ ಪೀಠದ ಪಟ್ಟದ ಆನೆ: ‘ಲಕ್ಷ್ಮೀ’ಯನ್ನು ನೋಡಿ ಕಣ್ಣೀರು ಹಾಕಿದ ಜನ

    ಕೊಟ್ಟೂರು (ವಿಜಯನಗರ): ಉಜ್ಜಿನಿ ಸದ್ಧರ್ಮ ಪೀಠದ ಪಟ್ಟದ ಆನೆ ‘ಲಕ್ಷ್ಮೀ’ (70) ಸೋಮವಾರ ಮಧ್ಯಾಹ್ನ ಅನಾರೋಗ್ಯದಿಂದ ಸಾವಿಗೀಡಾಗಿದೆ. ರಕ್ತಹೀನತೆ, ಮೂಳೆ ಸವೆತದಿಂದ ನರಳುತ್ತಿದ್ದ ಲಕ್ಷ್ಮೀ, ಕಳೆದ ಮೂರು ವರ್ಷಗಳಿಂದ ಒಂದು ದಿನವೂ ಮಲಗಿರಲಿಲ್ಲ ಎಂದು ಜಗದ್ಗುರು ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಮಾಹಿತಿ ನೀಡಿದ್ದಾರೆ.

    ಕಳೆದ ನಾಲ್ಕೈದು ದಿನಗಳಿಂದ ಪಶು ವೈದ್ಯ ಡಾ.ಕೊಟ್ರೇಶ, ಸಕ್ರೆಬೈಲುವಿನ ಆನೆ ತಜ್ಞ ಡಾ. ವಿನಯ, ಶಿವಮೊಗ್ಗದ ಡಾ. ಕಲ್ಪಪ್ಪ ಹಾಗೂ ಹೊಸಪೇಟೆ ಪ್ರಾಣಿ ಸಂಗ್ರಹಾಲಯದ ವೈದ್ಯರ ಮಾರ್ಗದರ್ಶನದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಸೋಮವಾರ ಬೆಳಗ್ಗೆ ಚೇತರಿಕೆ ಕಂಡು ಬಂದಿತ್ತು. ಆದರೆ, ಮಧ್ಯಾಹ್ನಕ್ಕೆ ಉಸಿರು ನಿಲ್ಲಿಸಿತು. ಮಂಗಳವಾರ ಊರೊಳಗಿನ ಪಾದಗಟ್ಟೆ ಸನಿಹ ಲಕ್ಷ್ಮೀ ಅಂತ್ಯಸಂಸ್ಕಾರ ನಡೆಯಲಿದೆ.

    ’ಲಕ್ಷ್ಮೀ’ ಸಾವಿನ ಸುದ್ದಿ ಹರಡುತ್ತಿದ್ದಂತೆ ಉಜ್ಜಿನಿ ಮತ್ತು ಸುತ್ತಲಿನ ಗ್ರಾಮಸ್ಥರು ಆಗಮಿಸಿ ಕಂಬನಿ ಮಿಡಿದರು. ಲಕ್ಷ್ಮೀಯನ್ನು ಲಿಂಗೈಕ್ಯ ಜಗದ್ಗುರು ಮರುಳಸಿದ್ದ ರಾಜದೇಶಿ ಕೇಂದ್ರ ಶಿವಾಚಾರ್ಯರರು 4.5 ಲಕ್ಷ ರೂ. ಕೊಟ್ಟು ಭಾರತ್ ಸರ್ಕಸ್ ನಿಂದ ಖರೀದಿಸಿದ್ದರು ಎಂದು ನೆನಪಿಸಿಕೊಳ್ಳುತ್ತ ಮಾವುತ ಸೈಪುಲ್ಲಾ ಕಣ್ಣೀರು ಹಾಕಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts