More

    ತೈಲ ಬೆಲೆ ತಗ್ಗಿಸುವಂತೆ ಪ್ರಧಾನಿ ಬಳಿ ಸಂಸದರ ನಿಯೋಗ: ಕೊಟ್ಟೂರಲ್ಲಿ ಎಂಪಿ ವೈ.ದೇವೇಂದ್ರಪ್ಪ ಮಾಹಿತಿ

    ಕೊಟ್ಟೂರು: ಪೆಟ್ರೋಲ್-ಡೀಸೆಲ್ ಬೆಲೆ ತಗ್ಗಿಸುವಂತೆ ಸಂಸದರ ನಿಯೋಗವು ಪ್ರಧಾನಿ ಬಳಿ ತೆರಳಿ ಮನವಿ ಮಾಡಲಾಗುವುದು ಎಂದು ಸಂಸದ ವೈ.ದೇವೇಂದ್ರಪ್ಪ ಹೇಳಿದರು.

    ಪಟ್ಟಣದಲ್ಲಿ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಈಶ್ವರಗೌಡರು ತನ್ನ ಅಜ್ಜ ಮತ್ತು ಸ್ವಾತಂತ್ರ್ಯ ಹೋರಾಟಗಾರ, ಶಿಕ್ಷಣ ಪ್ರೇಮಿ ಕೆ.ಎಸ್.ಈಶ್ವರಗೌಡರ ಸ್ಮರಣಾರ್ಥ ಏರ್ಪಡಿಸಿದ್ದ ಹತ್ತು ರೈತರಿಗೆ ಉಚಿತ ಗೊಬ್ಬರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ದಿನೇದಿನೆ ಪೆಟ್ರೋಲ್-ಡೀಸೆಲ್ ದರ ಏರಿಕೆ ಆಗುತ್ತಿರುವುದರಿಂದ ಕೇಂದ್ರಕ್ಕೆ ಮುಜುಗರವಾಗುತ್ತಿದೆ. ಆದ್ದರಿಂದ ಪ್ರಧಾನಿಯನ್ನು ಭೇಟಿಯಾಗಿ ಬೆಲೆ ಏರಿಕೆಗೆ ಕಡಿವಾಣ ಹಾಕುವಂತೆ ವಿನಂತಿಸಲಾಗುವುದು ಎಂದರು.

    ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಹಕಾರ ಸಂಘವು ಗೊಬ್ಬರ ಮಾರಾಟ ಆರಂಭಿಸಿದೆ. ಮುಂದಿನ ದಿನಗಳಲ್ಲಿ ಬಿತ್ತನೆ ಬೀಜ, ಕ್ರಿಮಿನಾಶಕಗಳನ್ನು ಹೆಚ್ಚಿನ ಲಾಭಾಂಶವಿಲ್ಲದೆ ಮಾರಾಟ ಮಾಡಲಿದೆ. ರೈತರು ತಮ್ಮ ಉತ್ಪನ್ನಗಳನ್ನು ಸಂಘದ ಮೂಲಕ ಮಾರಾಟ ಮಾಡಿದರೆ ಶೇ.3 ಹೆಚ್ಚಿನ ಲಾಭವಾಗಲಿದೆ. ಬೆಲೆ ಕುಸಿದಾಗ ರೈತ ಉತ್ಪನ್ನವನ್ನು ಸಂಘದಲ್ಲಿ ಪ್ಲೆಡ್ಜ್ ಮಾಡಿ ಶೇ.60 ಸಾಲ ಪಡೆವ ಸೌಲಭ್ಯವೂ ಇದೆ ಎಂದರು.

    ಮಾಜಿ ಶಾಸಕ ನೇಮಿರಾಜ ನಾಯ್ಕ, ಪಪಂ ಸದಸ್ಯ ಸಿದ್ದಯ್ಯ, ಸಂಘದ ಅಧ್ಯಕ್ಷ ಕೆ.ಎಸ್.ಈಶ್ವರಗೌಡ ಮಾತನಾಡಿದರು. ಸಂಘದ ಸದಸ್ಯರಾದ ನಾಗರಾಜ್ ಗೌಡ, ಕರ್ಣಕುಮಾರ, ನಾಗರಾಜ ಗೌಡ, ಹೂಗಾರ ನಾಗರಾಜ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts