More

    ಕ್ಷೇತ್ರದ ಜನರಿಗಾಗಿ ವ್ಯಾಕ್ಸಿನ್ ಖರೀದಿಸಲು ಜಿಲ್ಲಾಡಳಿತಕ್ಕೆ 1 ಕೋಟಿ ರೂ.: ಕೊಟ್ಟೂರಲ್ಲಿ ಶಾಸಕ ಎಸ್.ಭೀಮಾನಾಯ್ಕ ಹೇಳಿಕೆ

    ಕೊಟ್ಟೂರು: 20 ಕೋಟಿ ರೂ. ವೆಚ್ಚದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಪಟ್ಟಣದ ಕೆರೆ ಹತ್ತಿರ 5.95 ಎಕರೆ ಸರ್ಕಾರಿ ಜಾಗವನ್ನು ಗುರುತಿಸಲಾಗಿದೆ ಎಂದು ಶಾಸಕ ಭೀಮಾನಾಯ್ಕ ಹೇಳಿದರು.

    ಪಟ್ಟಣದಲ್ಲಿ ಗುರುವಾರ ಸ್ಥಳ ಪರಿಶೀಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಸಚಿವ ಸಂಪುಟ ಸಭೆಯಲ್ಲಿ ಆಸ್ಪತ್ರೆ ನಿರ್ಮಾಣದ ಅನುದಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅನುಮೊದನೆ ಕೊಡಿಸುವ ಭರವಸೆ ನೀಡಿದ್ದು, ಶೀಘ್ರದಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದರು. ಗಂಗಮ್ಮನಹಳ್ಳಿಯಿಂದ ಪಟ್ಟಣದ ಉಜ್ಜಿನಿ ಸರ್ಕಲ್ ತನಕ ಎಸ್‌ಟಿಪಿಎಸ್ ಯೋಜನೆಯಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ರಸ್ತೆ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗುವುದು ಎಂದು ತಿಳಿಸಿದರು.

    ಕರೊನಾ ವ್ಯಾಕ್ಸಿನ್ ನೀಡುವಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ನನ್ನ ಕ್ಷೇತ್ರದಲ್ಲಿ 45 ವರ್ಷ ಒಳಗಿರುವವರು 1.36 ಲಕ್ಷ ಜನರು ಇದ್ದು, ಕೇವಲ ಮೂರು ಸಾವಿರ ಜನರಿಗೆ ವ್ಯಾಕ್ಸಿನ್ ನೀಡಿದ್ದಾರೆ. ಆದ್ದರಿಂದ ವ್ಯಾಕ್ಸಿನ್ ಖರೀದಿಗೆ ಶಾಸಕರ ಅನುದಾನದಲ್ಲಿ ಒಂದು ಕೋಟಿ ರೂ. ಅನ್ನು ಜಿಲ್ಲಾಧಿಕಾರಿಗೆ ನೀಡುವುದಾಗಿ ಹೇಳಿದರು. ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಅಪೌಷ್ಟಿಕತೆ ಇರುವ 136 ಮಕ್ಕಳನ್ನು ಗುರುತಿಸಿದ್ದು, ಅವರನ್ನು ಒಂದೆಡೆ ಸೇರಿಸಿ 14 ದಿನ ಪೌಷ್ಟಿಕ ಆಹಾರ ನೀಡಲಾಗುವುದು. ಮಕ್ಕಳೊಂದಿಗೆ ಬರುವ ತಾಯಿಗೆ ಉದ್ಯೋಗ ಖಾತ್ರಿ ಕೂಲಿ ನೀಡಲಾಗುವುದು ಎಂದರು.

    ನಂತರ ಮುಜರಾಯಿ ಇಲಾಖೆ ಸಿದ್ಧಪಡಿಸಿದ 46 ಸಣ್ಣ ದೇವಾಲಯಗಳ ಪುರೋಹಿತರಿಗೆ ಫುಡ್ ಕಿಟ್ ವಿತರಿಸಿದರು. ಚಪ್ಪರದಹಳ್ಳಿ ಗ್ರಾಮದಲ್ಲಿ ಮಳೆಯಿಂದ ಬಿದ್ದ ಮನೆಗಳನ್ನು ಪರಿಶೀಲಿಸಿದರು. ಎಪಿಎಂಸಿ ಮಾಜಿ ಅಧ್ಯಕ್ಷ ಬೂದಿ ಶಿವಕುಮಾರ್, ಸದಸ್ಯ ತೋಟದ ರಾಮಣ್ಣ, ಜಗದೀಶ್, ಸುಧಾಕರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts