More

    ಜ.3ರಂದು ಮಾಲ್ವಿ ಜಲಾಶಯದ ವಿಜಯೋತ್ಸವ: ಶಾಸಕ ಎಸ್.ಭೀಮಾನಾಯ್ಕ ಹೇಳಿಕೆ

    ಕೊಟ್ಟೂರು: ತಾಲೂಕಿನಲ್ಲಿ ನಡೆಯಲಿರುವ ತರಳುಬಾಳು ಹುಣ್ಣಿಮೆ ಮಹೋತ್ಸವಕ್ಕೆ ಬರುವ ಮೊದಲು ಸಿಎಂ ಬಸವರಾಜ ಬೊಮ್ಮಾಯಿ, ನೀರಾವರಿ ಸಚಿವ ಗೋವಿಂದ ಕಾರಜೋಳ ಕೊಟ್ಟೂರು ಕೆರೆ ಮತ್ತು ಹಗರಿಬೊಮ್ಮನಹಳ್ಳಿ ಕ್ಷೇತ್ರದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಟೆಂಡರ್ ಕರೆಯದಿದ್ದರೆ ಮಹೋತ್ಸವ ಕಾರ್ಯಕ್ರಮದಲ್ಲಿ ರೈತರೊಂದಿಗೆ ಕಪ್ಪುಬಾಹುಟ ಪ್ರದರ್ಶನ ಮಾಡಲಾಗುವುದು ಎಂದು ಶಾಸಕ ಎಸ್.ಭೀಮಾನಾಯ್ಕ ಎಚ್ಚರಿಕೆ ನೀಡಿದರು.

    ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಜೆಟ್‌ನಲ್ಲಿ ಹಗರಿಬೊಮ್ಮನಹಳ್ಳಿ ಕ್ಷೇತ್ರದ 22ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಅನುಮೋದನೆ ನೀಡಿದ ಮೇಲೆ ಯೋಜನೆಗೆ ಟೆಂಡರ್ ಕರೆಯದಿರುವುದು ಪಕ್ಷಪಾತ ಧೋರಣೆ ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದು ಕಿಡಿಕಾರಿದರು.

    ಈ ಯೋಜನೆಗಳಿಗೆ ಟೆಂಡರ್ ಕರೆಯುವುದಾಗಿ ಅಧಿವೇಶನದಲ್ಲಿ ಸುಳ್ಳು ಆಶ್ವಾಸನೆ ನೀಡುತ್ತಾ ಬಂದಿದ್ದಾರೆ. ಮಾಲ್ವಿ ಜಲಾಶಯಕ್ಕೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ,150 ಕೋಟಿ ರೂ. ಬಿಡುಗಡೆ ಮಾಡಿದ್ದರಿಂದ ಈ ಅನುದಾನದಲ್ಲಿ ರಾಜವಾಳದಿಂದ ಬೃಹತ್ ಪೈಪ್ ಮೂಲಕ ಮಾಲ್ವಿ ಜಲಾಶಯಕ್ಕೆ ನೀರು ತರಲಾಗಿದ್ದರಿಂದ ಜಲಾಶಯ 100 ದಿನಗಳಿಂದ ತುಂಬಿ ಹರಿಯುತ್ತಿರುವುದರಿಂದ ಭೀಮಾನಾಯ್ಕ ಅಭಿಮಾನಿ ಬಳಗದಿಂದ ಜ. 3ರಂದು ವಿಜಯೋತ್ಸವ ಹಮ್ಮಿಕೊಂಡಿದ್ದು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಹಾಜರಾಗುತ್ತಿದ್ದಾರೆ. ವಿಜಯೋತ್ಸವಕ್ಕೆ 60-70 ಸಾವಿರ ಜನ ಸೇರುವ ನಿರೀಕ್ಷೆ ಇದೆ. ಈ ವೇಳೆ 15 ಸಾವಿರ ಮಹಿಳೆಯರಿಗೆ ಹುಡಿ ತುಂಬಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

    ಮಾಲ್ವಿ ಜಲಾಶಯ ನಿರ್ಮಾಣದ ರೂವಾರಿ ಮಾಜಿ ಶಾಸಕ ಚನ್ನಬಸವನಗೌಡ ಹಾಗೂ ಸಿದ್ದರಾಮಯ್ಯ, ಎಂ.ಬಿ. ಪಾಟಿಲರ ಪ್ರತಿಮೆಯನ್ನು ಜಲಾಶಯದ ಪ್ರದೇಶದಲ್ಲಿ ಸ್ಥ್ವಾಪಿಸುವ ಚಿಂತನೆ ಇದೆ ಎಂದರು.
    ಸುದ್ದಿಗೋಷ್ಠಿಯಲ್ಲಿ ಜಿಪಂ ಮಾಜಿ ಸದಸ್ಯ ಹರ್ಷವರ್ಧನ್, ಕಾಂಗ್ರೆಸ್ ಮುಖಂಡ ಸುಧಾಕರ ಪಾಟೇಲ್, ಪಪಂ ಸದಸ್ಯ ಕೆಂಗರಾಜ್, ಜಗದೀಶ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಾರುಕೇಶ ಮುಂತಾದವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts