More

    ದತ್ತು ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಪ್ರತ್ಯೇಕ ಅನುದಾನ ನೀಡಲಿ; ಶಾಸಕ ಎಸ್.ಭೀಮಾನಾಯ್ಕ ಒತ್ತಾಯ

    ಕೊಟ್ಟೂರು: ಶಿಕ್ಷಣ ಸಚಿವ ಸುರೇಶ ಕುಮಾರ್ ಸಲಹೆಯಂತೆ ಕ್ಷೇತ್ರದ ಕೋಗಳಿ, ಪಿಂಜರ್ ಹೆಗ್ಡಾಳ್, ಹಗರಿಬೊಮ್ಮನಹಳ್ಳಿ ಹಳೇ ಊರಿನ 3ನೇ ವಾರ್ಡ್‌ನ ಸರ್ಕಾರಿ ಶಾಲೆಗಳನ್ನು ದತ್ತು ಪಡೆಯಲಾಗಿದೆ ಎಂದು ಶಾಸಕ ಎಸ್.ಭೀಮಾನಾಯ್ಕ ಹೇಳಿದರು.

    ಕೋಗಳಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ 15.75 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಕಟ್ಟಡ ಉದ್ಘಾಟಿಸಿ ಮಂಗಳವಾರ ಮಾತನಾಡಿದರು. ಶಾಲೆಗಳ ಅಭಿವೃದ್ಧಿ ಬಗ್ಗೆ ಶಿಕ್ಷಣ ಸಚಿವರ ಪರಿಕಲ್ಪನೆ ಸ್ವಾಗತಿಸುತ್ತೇನೆ. ದತ್ತು ಶಾಲೆಗಳ ಅಭಿವೃದ್ಧಿಗೆ ಪ್ರತ್ಯೇಕ ಅನುದಾನ ನೀಡಬೇಕೆಂದು ಒತ್ತಾಯಿಸಿದರು.

    ಈ ಭಾಗದಲ್ಲಿ ಕೆಕೆಆರ್‌ಡಿಬಿ ಯೋಜನೆಯಡಿ ದತ್ತು ಶಾಲೆಗಳ ಅಭಿವೃದ್ಧಿ ಮಾಡಲಾಗುವುದು. ರಾಜ್ಯದ ಉಳಿದ ಕ್ಷೇತ್ರದ ಶಾಸಕರು, ಯಾವ ಅನುದಾನದಲ್ಲಿ ಶಾಲೆಗಳ ಅಭಿವೃದ್ಧಿಗೊಳಿಸಬೇಕೆಂದು ಮುಂದಿನ ಅಧಿವೇಶನದಲ್ಲಿ ಪ್ರಶ್ನಿಸುವುದಾಗಿ ಹೇಳಿದರು.

    ದತ್ತು ಸ್ವೀಕರಿಸಿರುವ ಪಿಂಜರ್ ಹೆಗ್ಡಾಳ್ ಗ್ರಾಮದಲ್ಲಿ 56 ಲಕ್ಷ ರೂ. ವೆಚ್ಚದ ಕಟ್ಟಡ ಉದ್ಘಾಟಿಸಿದ್ದೇನೆ. ಹಳೇ ಹಗರಿಬೊಮ್ಮನಹಳ್ಳಿಯ 3ನೇ ವಾರ್ಡ್‌ನಲ್ಲಿ 4.59 ಕೋಟಿ ರು. ವೆಚ್ಚದಲ್ಲಿ 4 ಬಿಲ್ಡಿಂಗ್ ನಿರ್ಮಿಸಲಾಗಿದೆ. ಕೋಗಳಿ ಗ್ರಾಮದಲ್ಲಿ ಮುಂದಿನ ವರ್ಷ 25 ಲಕ್ಷ ರೂ. ವೆಚ್ಚದಲ್ಲಿ ಗ್ರಂಥಾಲಯ ಕಟ್ಟಡ ನಿರ್ಮಿಸಲಾಗುವುದು ಎಂದು ತಿಳಿಸಿದರು.

    ತಾಪಂ ಇಒ ವಿಶ್ವನಾಥ್, ತಹಸೀಲ್ದಾರ್ ಜಿ.ಅನಿಲ್ ಕುಮಾರ್, ಕಾಂಗ್ರೆಸ್ ಮುಖಂಡ ಮುಟುಗನಹಳ್ಳಿ ಕೊಟ್ರೇಶಪ್ಪ, ಕಾಲೇಜ್ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮಂಜುನಾಥ್ ಗೌಡ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts