More

    ಭಾರತೀಯರಿಂದ ವಿಶ್ವಕ್ಕೆ ರಂಗಭೂಮಿ ಪರಿಚಯ

    ಕೊಟ್ಟೂರು: ವೇದ, ಉಪನಿಷತ್‌ನಲ್ಲಿ ರಂಗಕಲೆ ಬಗ್ಗೆ ಉಲ್ಲೇಖವಿದ್ದು, ವಿಶ್ವಕ್ಕೆ ರಂಗಭೂಮಿ ಪರಿಚಯಿಸಿದ ಕೀರ್ತಿ ಭಾರತೀಯರಿಗೆ ಸಲ್ಲುತ್ತದೆ ಎಂದು ಡೋಣೂರು ಚಾನುಕೋಟಿ ಮಠದ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

    ಕೊಟ್ಟೂರಿನ ಕಲ್ಪತರು ಕಲಾಟ್ರಸ್ಟ್ ಹಾಗೂ ವಿಜಯನಗರ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜೇವರ್ಗಿ ರಾಜಣ್ಣ ನಾಟಕ ಕಂಪನಿಯಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವರಂಗಭೂಮಿ ದಿನಾಚರಣೆ ಸಾನ್ನಿಧ್ಯವಹಿಸಿ ಮಾತನಾಡಿದರು.

    ರಂಗಭೂಮಿ ರೂವಾರಿ ಭರತಮುನಿ ಎನ್ನಲಾಗುತ್ತದೆ. ಅಲೆಗ್ಜೆಂಡರ್ ಭಾರತದ ಮೇಲೆ ದಂಡೆತ್ತಿ ಬಂದಾಗ ಇಲ್ಲಿನ ರಂಗಭೂಮಿಯನ್ನು ನೋಡಿ ಗ್ರೀಕ್‌ನಲ್ಲಿ ರಂಗಕಲೆ ಅಭಿವೃದ್ಧಿಯಾಯಿತು ಎಂಬ ವಾದವೂ ಇದೆ ಎಂದರು.

    ವಿಟಿಎಸ್ ಫೌಂಡೇಷನ್ ಅಧ್ಯಕ್ಷ ಡಾ. ವೆಂಕಟೇಶ ತಿಪ್ಪೇಸ್ವಾಮಿ ಮಾತನಾಡಿ, ಕಿರುತೆರೆ, ಹಿರಿತೆರೆ ಕಲಾವಿದರ ಬದುಕು ಭದ್ರವಾಗಿರುತ್ತದೆ. ಆದರೆ ರಂಗಭೂಮಿ ಕಲಾವಿದರು ಸದಾ ಸಂಕಷ್ಟದಲ್ಲಿದ್ದರೂ ತಮ್ಮ ಬದುಕನ್ನು ರಂಗಭೂಮಿಯಲ್ಲಿ ಸವೆಸುತ್ತಾರೆ. ಸರ್ಕಾರ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ರಂಗಭೂಮಿ ಕಲಾವಿದರಿಗೆ ನೀಡಬೇಕು ಎಂದ ಅವರು, ಜೀವರ್ಗಿ ನಾಟಕ ಕಂಪನಿ ಮಾಲೀಕರಿಗೆ 10 ಸಾವಿರ ರೂ. ಕಾಣಿಕೆ ನೀಡಿ ಶುಭ ಹಾರೈಸಿದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಲ್ಪತರು ಕಲಾ ಟ್ರಸ್ಟ್ ಅಧ್ಯಕ್ಷ ಚಿಗಟೇರಿ ಕೊಟ್ರೇಶ ಮಾತನಾಡಿ, ಕೊಟ್ಟೂರಿನಲ್ಲಿ ವಿಶ್ವರಂಗಭೂಮಿ ದಿನಾಚರಣೆ ಮಾಡಬೇಕೆಂಬ ಒಂದು ವರ್ಷದ ಕನಸು ಈಗ ನೆನಸಾಗಿದೆ. ಕೊಟ್ಟೂರು ಉತ್ಸವವನ್ನು ನಮ್ಮ ಟ್ರಸ್ಟ್‌ನಿಂದ ಆಚರಿಸುವ ಚಿಂತನೆಯೂ ಇದೆ. ಆಚರಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಾಟಕ ಕಂಪನಿ ಮಾಲೀಕ ಜೇವರ್ಗಿ ರಾಜಣ್ಣ, ಕೊಟ್ಟೂರಿನಲ್ಲಿ ರಂಗಕಲೆ ಪ್ರೋತ್ಸಾಹಿಸುವ ಕಲಾಪ್ರೇಮಿಗಳಿಗೆ ಎಂದೂ ಕೊರತೆ ಕಂಡುಂಬದಿಲ್ಲ. ನಾಟಕ ಕಂಪನಿಗೆ 10 ಸಾವಿರ ರೂ. ನೀಡಿದ ಡಾ. ತಿಪ್ಪೇಸ್ವಾಮಿ ವೆಂಕಟೇಶ ಅವರ ಕಲಾಪ್ರೀತಿಯನ್ನು ಮೆಚ್ಚಿಕೊಂಡರು.

    ಇದೇ ಸಂದರ್ಭದಲ್ಲಿ ಕಲ್ಪತರು ಕಲಾ ಟ್ರಸ್ಟ್‌ನಿಂದ 2023ನೇ ಕಲ್ಪತರು ಕಲಾ ಪ್ರಶಸ್ತಿ ಪ್ರಶಸ್ತಿಯನ್ನು ಹಿರಿಯ ಕಲಾವಿದರಾದ ಸಾವಿತ್ರಿ ರಿತ್ತಿ, ಕು. ಶೀಲಾ ಜೇವರ್ಗಿ, ಡಿ. ಹನುಮಂತಪ್ಪ ಬಂಡ್ರಿ, ಗೆಜ್ಜಗಟ್ಟೆ ಎನ್. ಬಸಪ್ಪ, ಜಂಬೂರು ಮರುಳಸಿದ್ದಪ್ಪ ಇವರುಗಳಿಗೆ ನೀಡಲಾಯಿತು. ರೈತ ಸಂಘದ ಅಧ್ಯಕ್ಷ ಪ್ರಕಾಶ, ಸಿನಿಮಾ ನಿರ್ದೇಶಕ ಯೋಗಿ, ಕಿರುತೆರೆ ಕಲಾವಿದೆ ನಂದಿನಿ, ಕೆ. ಸೋಮನಾಥ ಪಾಟೇಲ್, ಮೋರಗೇರೆ ಮಂಜುನಾಥ, ಹೊಸಪೇಟೆ ಅಂಜಲಿ ಭರತನಾಟ್ಯ ಕಲಾ ಕೇಂದ್ರದ ಅಧ್ಯಕ್ಷೆ ಎಸ್. ಅಂಜಲಿ, ಶೀಲಾ ಮಹಾದೇವ, ಎಸ್. ಹನುಮಂತರೆಡ್ಡಿ, ನಟರಾಜ್ ಮಠದ್ ಮುಂತಾದವರಿದ್ದರು.

    ಅಂಜಲಿ ಭರತನಾಟ್ಯ ಕಲಾಕೇಂದ್ರದಿಂದ ಸಾಂಸ್ಕೃತಿ ಕಾರ್ಯಕ್ರಮ ನಡೆಯಿತು. ಗಿರೀಶ, ರಂಗಭೂಮಿ ಸಂದೇಶವನ್ನು ವಾಚನ ಮಾಡಿದರು. ಕಲಾವಿದ ಮರುಳಸಿದ್ದಪ್ಪ ಸ್ವಾಗತಿಸಿದರು. ಶ್ವೇತಾ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts