More

    ಪರೀಕ್ಷೆಗೆ ಹೋದ ವಿದ್ಯಾರ್ಥಿನಿಯ ಶವ ನದಿಯಲ್ಲಿ! ಸಾವಿನ ಹಿಂದೆ ನೂರೊಂದು ಪ್ರಶ್ನೆ

    ಕೊಟ್ಟಾಯಂ: ಅಂತಿಮ ವರ್ಷದ ಬಿ.ಕಾಂ ಪರೀಕ್ಷೆಗೆ ಹೋಗಿದ್ದ ಕೇರಳದ ಕೊಟ್ಟಾಯಂನ ವಿದ್ಯಾರ್ಥಿನಿಯ ಶವವೊಂದು ನದಿಯಲ್ಲಿ ಪತ್ತೆಯಾಗಿದ್ದು, ಇದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

    ಕಾಂಜಿರಪ್ಪಲ್ಲಿ ಸೇಂಟ್ ಆಂಟೋನಿಸ್ ಪ್ಯಾರೆಲಲ್ ಕಾಲೇಜಿನಲ್ಲಿ ಕಲಿಯುತ್ತಿದ್ದ ಅಂಜು ಪಿ ಶಾಜಿ ಶವವಾಗಿ ದೊರೆತಿದ್ದಾಳೆ. ಕೊಟ್ಟಾಯಂ ಜಿಲ್ಲೆಯ ಕಿಡಂಗೂರು ಬಳಿಯ ಮೀನಾಚಿಲ್ ನದಿಯಲ್ಲಿ ಈಕೆಯ ಶವ ದೊರೆತಿದೆ.

    ಪರೀಕ್ಷೆ ನಡೆಯುತ್ತಿದ್ದ ವೇಳೆ ಈಕೆ ನಕಲು ಮಾಡಿರುವ ಹಿನ್ನೆಲೆಯಲ್ಲಿ ಪರೀಕ್ಷಾ ಕೊಠಡಿಯಿಂದ ಹೊರಕ್ಕೆ ಹಾಕಲಾಗಿದ್ದರಿಂದ ಮನನೊಂದು ಈಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಸಿಸಿಟಿವಿ ಫೂಟೇಜ್​ನಲ್ಲಿ ಕೂಡ ಈಕೆಯ ಪತ್ರಿಕೆಯನ್ನು ಬಲವಂತವಾಗಿ ಮೇಲ್ವಿಚಾರಕರು ಕಸಿದುಕೊಂಡಿದ್ದು ಕಾಲೇಜಿನಿಂದ ಹೊರಕ್ಕೆ ಹಾಕಿರುವುದು ದಾಖಲಾಗಿದೆ.

    ಇದನ್ನೂ ಓದಿ: ಸೆಕ್ಸ್​ ತಪ್ಪು, ರೇಪ್​ ಓಕೆನಾ ಎಂದು ನಿರ್ಮಾಪಕಿ ಏಕ್ತಾ ಕಪೂರ್​ ಪ್ರಶ್ನಿಸಿದ್ಯಾಕೆ?

    ಅಂಜು ನಕಲು ಮಾಡುವ ಮೂಲಕ ಅನ್ಯಾಯ ಎಸಗಿದ್ದಾಳೆ. ಹಾಲ್ ಟಿಕೆಟ್‌ನಲ್ಲಿ ಲಿಖಿತ ಉತ್ತರಗಳನ್ನು ತಂದು ಪರೀಕ್ಷೆಯಲ್ಲಿ ನಕಲು ಮಾಡಿದ್ದಾಳೆ. ಈ ಹಿನ್ನೆಲೆಯಲ್ಲಿ ಲಿಖಿತವಾಗಿ ಈ ಕುರಿತು ಬರೆದುಕೊಡುವಂತೆ ಕೇಳಲಾಗಿತ್ತು ಅಷ್ಟೇ. ಇದರ ಹೊರತಾಗಿ ಏನೂ ನಡೆದಿಲ್ಲ ಎಂದು ಪ್ರಾಂಶುಪಾಲರು ಹೇಳಿದ್ದಾರೆ.

    ಆದರೆ ಕುಟುಂಬದ ಸದಸ್ಯರು ಅಂಜು ತುಂಬಾ ಬುದ್ಧಿವಂತೆಯಾಗಿದ್ದು, ನಕಲು ಮಾಡಲು ಸಾಧ್ಯವೇ ಇಲ್ಲ ಎಂದಿದ್ದಾರೆ. ಈ ಹಿಂದಿನ ಪರೀಕ್ಷೆಗಳಲ್ಲಿ ಆಕೆ ಅತ್ಯಧಿಕ ಅಂಕ ಗಳಿಸಿರುವುದಾಗಿ ಹೇಳಿದ್ದಾರೆ. ಈ ವಿದ್ಯಾರ್ಥಿನಿ ಬುದ್ಧಿವಂತೆ ಎಂದು ಕಾಲೇಜಿನ ಇತರ ಶಿಕ್ಷಕರೂ ಒಪ್ಪಿಕೊಂಡಿದ್ದಾರೆ. ಆದ್ದರಿಂದ ಸಾವಿನ ಬಗ್ಗೆ ಸಂಶಯ ಎಡೆ ಮಾಡಿಕೊಟ್ಟಿದೆ.

    ಇದನ್ನೂ ಓದಿ: ‘ಕರೊನಾ ಕಿಲ್ಲರ್’ ಸಾಧನ ಆವಿಷ್ಕರಿಸಿದ ರೋಬೋ ಮಂಜೇಗೌಡ!

    ಇದರ ಜತೆಗೆ, ವಿದ್ಯಾರ್ಥಿನಿಯ ಶವವನ್ನು ತಂದೆಗೆ ತಿಳಿಸದೇ ಸ್ಥಳಾಂತರ ಮಾಡಲಾಗಿದೆ ಎಂಬ ಆರೋಪವೂ ಇದ್ದು, ಈ ಬಗ್ಗೆಯೂ ಹಲವು ಗುಮಾನಿಗಳು ಶುರುವಾಗಿದೆ. ತನ್ನ ಮಗಳ ಸಾವಿಗೆ ಪ್ರಾಂಶುಪಾಲರೇ ನೇರ ಕಾರಣ ಎಂದು ವಿದ್ಯಾರ್ಥಿನಿಯ ತಂದೆ ದೂರಿದ್ದಾರೆ. (ಏಜೆನ್ಸೀಸ್​)

    ಹಿಂದಿನ ದಿನ ಸಮಾಧಿ ಮಾಡಿದ್ದ ‘ತಂದೆ’ಯ ಶವ ಮರುದಿನ ಆಸ್ಪತ್ರೆಯ ಶವಾಗಾರದಲ್ಲಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts