More

    ‘ಕರೊನಾ ಕಿಲ್ಲರ್’ ಸಾಧನ ಆವಿಷ್ಕರಿಸಿದ ರೋಬೋ ಮಂಜೇಗೌಡ!

    ಕೆ.ಆರ್.ಪೇಟೆ: ರೈತರಿಗೆ ಪೂರಕವಾದ ಸಾಧನಗಳನ್ನು ಕಂಡು ಹಿಡಿದು ‘ರೈತ ವಿಜ್ಞಾನಿ’ ಎಂದೇ ಖ್ಯಾತಿ ಪಡೆದಿರುವ ರೋಬೋ ಮಂಜೇಗೌಡ, ಈಗ ಕರೊನಾ ಸೋಂಕನ್ನು ನಿವಾರಿಸಬಲ್ಲ ‘ಕರೊನಾ ಕಿಲ್ಲರ್’ ಎಂಬ ಸಾಧನವನ್ನು ಆವಿಷ್ಕರಿಸಿದ್ದಾರೆ.

    ಈ ಸಾಧನದಲ್ಲಿ ನೈಸರ್ಗಿಕ ಗಾಳಿ ಸಂಗ್ರಹಕ್ಕೆ ಏಳು ಪದರದಲ್ಲಿ ಫಿಲ್ಟರ್ ಅಳವಡಿಸಲಾಗಿದೆ. ಇದರಲ್ಲಿ ಆಯುರ್ವೇದ ಲಿಕ್ವಿಡ್ ಶೇಖರಣೆ ಮಾಡಬಹುದು. ಗಾಳಿ-ಲಿಕ್ವಿಡ್ ಮಿಶ್ರಣ ಮಾಡಲು ಪ್ರೊಸೆಸರ್ ಸಹ ಇದೆ. ಬಳಿಕ ಕಂಪ್ರೆಸರ್ ಅದನ್ನು ಮಾಸ್ಕ್‌ಗೆ ಪೂರೈಸುತ್ತದೆ. ಲಿಕ್ವಿಡ್ ಬೆರೆಸಿದ ಗಾಳಿಯನ್ನು ಸೇವಿಸುವುದರಿಂದ ಕರೊನಾ ಸೋಂಕು ನಾಶವಾಗುತ್ತದೆ. ಈ ಸಾಧನ ಆರೋಗ್ಯವಂತರು ಮತ್ತು ಕರೊನಾ ರೋಗ ಲಕ್ಷಣ ಹೊಂದಿರುವವರಿಗೆ ಅನುಕೂಲವಾಗುತ್ತದೆ.

    ಆರೋಗ್ಯವಂತರು ಪುದಿನಾ ಸೊಪ್ಪು, ಕೊಬ್ಬರಿ ಎಣ್ಣೆ ತಲಾ 5 ಎಂಎಲ್ ಮಿಶ್ರಣವನ್ನು ಹಾಕಿಕೊಂಡು ಉಸಿರಾಡಬೇಕು. ಕರೊನಾ ಸೋಂಕಿನ ಶಂಕಿತರು ಅಥವಾ ಶೀತ, ನೆಗಡಿ, ಕೆಮ್ಮು, ಗಂಟಲು ನೋವು ಹೊಂದಿರುವವರು ಪುದಿನಾ ಸೊಪ್ಪು, ಕೊಬ್ಬರಿಎಣ್ಣೆ, ತುಳಸಿ, ಒಣ ಶುಂಠಿ ಪೌಡರ್ ತಲಾ 5 ಎಂಎಲ್ ಮಿಶ್ರಣ ಹಾಕಿಕೊಂಡು ಉಸಿರಾಡಿದರೆ ಸೋಂಕು ನಿವಾರಣೆಯಾಗುತ್ತದೆ.

    ಇದನ್ನೂ ಓದಿ: ಮುಸ್ಲಿಂ ವ್ಯಕ್ತಿ ಕೆರೆಗೆ ಕಲ್ಲೆಸೆದಿದ್ದಕ್ಕೆ ಪೂರ್ತಿ ಕೆರೆ ನೀರನ್ನೇ ಖಾಲಿ ಮಾಡಿಸಿದ ಗ್ರಾಮಸ್ಥರು!

    ಸಾಧನ ತಯಾರಿಕಾ ವೆಚ್ಚ ಸುಮಾರು 350 ರಿಂದ 500 ರೂ.ಗಳಾಗುತ್ತದೆ. ಲಿಕ್ವಿಡ್ ತಯಾರಿಕೆಗೆ ಹೆಚ್ಚು ಖರ್ಚಾಗುವುದಿಲ್ಲ. ನೈಸರ್ಗಿಕ ಸಂಪನ್ಮೂಲವನ್ನು ಬಳಸಿಕೊಂಡು ಆಯುರ್ವೇದ ಲಿಕ್ವಿಡ್ ತಯಾರಿಸಬಹುದಾಗಿದೆ ಎನ್ನುತ್ತಾರೆ ರೋಬೋ ಮಂಜೇಗೌಡ.

    ತಮ್ಮ ಈ ಸಾಧನದ ಬಗ್ಗೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಅವರಿಗೆ ಪ್ರಾತ್ಯಕ್ಷಿಕೆ ಮೂಲಕ ತೋರಿಸಿಕೊಟ್ಟರು.
    ಸಾಧನವನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿ ವರದಿ ಬಂದ ನಂತರ ಸರ್ಕಾರದ ಅನುಮತಿ ಕೊಡಿಸಲು ಪ್ರಯತ್ನಿಸುತ್ತೇನೆ ಎಂದು ಸಚಿವರು ಭರವಸೆ ನೀಡಿದರು.

    ಗಿಳಿ ಹಾರಿಹೋದುದಕ್ಕೆ ಕೆಲಸದ ಬಾಲಕಿಯನ್ನು ಹೊಡೆದು ಸಾಯಿಸಿದ ದಂಪತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts