More

    ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸೇಡಂ ಮುಂಚೂಣಿ

    ಸೇಡಂ: ಪ್ರತಿ ವರ್ಷ ನಡೆಯುವ ಸೇಡಂ ಉತ್ಸವವನ್ನು ಎಲ್ಲರೂ ಸಂಭ್ರಮದಿಂದ ಆಚರಿಸಬೇಕು, ಬೇರೆ ಊರುಗಳಲ್ಲಿ ನೆಲೆಸಿರುವ ನಮ್ಮವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು. ಅಂದಾಗಲೇ ಉತ್ಸವಕ್ಕೆ ಕಳೆ ಬರುತ್ತದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು.

    ಕೊತ್ತಲ ಬಸವೇಶ್ವರ ದೇವಾಲಯದ ಆವರಣದಲ್ಲಿ ಕೊತ್ತಲ ಬಸವೇಶ್ವರ ದೇವಾಲಯ, ಪುರಸಭೆ, ನಾಗರಿಕ ಸಮಿತಿ, ಸೇಡಂ ಪರಿವಾರ ಹಾಗೂ ಸೇಡಂ ಉತ್ಸವ ಸಮಿತಿಯಿಂದ ಸೋಮವಾರ ಆಯೋಜಿಸಿದ್ದ ೧೬ನೇ ಸೇಡಂ ಉತ್ಸವದಲ್ಲಿ ಮಾತನಾಡಿದ ಅವರು, ಕಲೆ, ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಚಟುವಟಿಕೆಗಳಲ್ಲಿ ಸೇಡಂ ಜಿಲ್ಲೆಯಲ್ಲಿಯೇ ಸಾಕಷ್ಟು ಖ್ಯಾತಿ ಪಡೆದಿದೆ. ಪ್ರತಿವರ್ಷವೂ ಅಚ್ಚಕಟ್ಟಾಗಿ ಉತ್ಸವ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.
    ಸೇಡಂನ ಕೆಲ ಬಡಾವಣೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಬವಿಸಿರುವುದು ನನ್ನ ಗಮನಕ್ಕೆ ಬಂದಿದ್ದು, ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ವಿಶೇಷ ಯೋಜನೆ ಹಾಕಿಕೊಳ್ಳಲಾಗಿದೆ. ಇದಕ್ಕಾಗಿ ೪೫ ಕೋಟಿ ರೂ. ಮೀಸಲಿಡಲಾಗಿದೆ. ಯುವಕರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಸರ್ಕಾರ ಗಂಭೀರ ಚಿಂತನೆ ನಡೆಸಿ, ಸರ್ಕಾರದಿಂದಲೇ ಕೌಶಲ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.

    ಕೊತ್ತಲ ಬಸವೇಶ್ವರ ದೇವಾಲಯದ ಶ್ರೀ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

    ಸೇಡಂ ಪರಿವಾರ ಸಮಿತಿ ಅಧ್ಯಕ್ಷ ಅನಂತಯ್ಯ ಮುಸ್ತಾಜರ್, ಮಾಜಿ ಸಂಸದ ಡಾ.ಬಸವರಾಜ ಪಾಟೀಲï ಸೇಡಂ, ತೋಟಗಾರಿಕೆ ಮಹಾಮಂಡಳಿ ಮಾಜಿ ಅಧ್ಯಕ್ಷ ಬಸವರಾಜ ಪಾಟೀಲ್ ಊಡಗಿ, ಪ್ರಮುಖರಾದ ಸಿದ್ದಪ್ಪ ತಳ್ಳಳ್ಳಿ, ನಾಗೇಶ್ವರಾವ ಮಾಲಿಪಾಟೀಲï, ಡಾ.ಸದಾನಂದ ಬೂದಿ, ಸಂತೋಷ ಕುಲಕರ್ಣಿ, ನರೇಂದ್ರ ರುದ್ನೂರ, ಭಾಗ್ಯಲಕ್ಷ್ಮೀ ನಾಯ್ಕೋಡಿ, ಮಲ್ಲಮ್ಮ ಪತ್ರಿ, ಆರತಿ ಕಡಗಂಚಿ, ಚನ್ನಬಸಪ್ಪ ಗವಿ ಇತರರಿದ್ದರು.

    ಶಾರದಾ ಸಂಗೀತ ಶಾಲೆ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ನಾಗರಿಕ ಸಮಿತಿ ಅಧ್ಯಕ್ಷ ಬಸವರಾಜ ರೇವಗೊಂಡ ಸ್ವಾಗತಿಸಿದರು. ಉತ್ಸವ ಸಮಿತಿ ಕಾರ್ಯದರ್ಶಿ ನಾಗೇಂದ್ರಪ್ಪ ಡೊಳ್ಳ ಪ್ರಾಸ್ತಾವಿಕ ಮಾತನಾಡಿದರು. ಪ್ರದೀಪ ಪಾಟೀಲ್​ ನಿರೂಪಣೆ ಮಾಡಿದರು. ಪುರಸಭೆ ಕಚೇರಿಯಿಂದ ದೇವಸ್ಥಾನದವರೆಗೆ ಸಂಭ್ರಮದಿಂದ ಮೆರವಣಿಗೆ ನಡೆಯಿತು.

    ಸಾಧಕರಿಗೆ ಸತ್ಕಾರ: ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸೂರ್ಯಕಾಂತ ಹಂಗನಹಳ್ಳಿ (ಚಿತ್ರಕಲೆ), ಶೇಖರ ನಾಟೀಕಾರ (ಚಿತ್ರರಂಗ), ಹಣಮಂತ ತವಧಿ, ಭೀಮರಾವ ಕುಂಬಾರ (ಕೃಷಿ) ಅವರನ್ನು ಸತ್ಕರಿಸಲಾಯಿತು. ವಿವಿಧ ಸ್ಪರ್ದೆಗಳಲ್ಲಿನ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

    ಸೇಡಂನಲ್ಲಿ ಪ್ಯಾರಾ ಮೆಡಿಕಲ್ ಕಾಲೇಜು ಆರಂಭಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದ್ದು, ಶೀಘ್ರದಲ್ಲಿಯೇ ನಿರ್ಧಾರ ಕೈಗೊಳ್ಳಲಾಗುವುದು. ಪ್ರಗತಿಯಲ್ಲಿರುವ ಒಳಾಂಗಣ ಕ್ರೀಡಾಂಗಣವನ್ನು ಕೆಲ ತಿಂಗಳಲ್ಲಿ ಉದ್ಘಾಟಿಸಿ, ಆಟೋಟಗಳಿಗೆ ಅವಕಾಶ ಕಲ್ಪಿಸಲಾಗುವದು.
    | ಡಾ.ಶರಣಪ್ರಕಾಶ ಪಾಟೀಲ್​, ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts