More

    ಮೂರರ ನಂತರ ನಾಲ್ಕು; ‘ಕೋಟಿಗೊಬ್ಬ’ನ ಸಾಹಸ ಇನ್ನೂ ಮುಗಿದಿಲ್ಲ 

    ಬೆಂಗಳೂರು:  ಕಿಚ್ಚ ಸುದೀಪ್ ನಟನೆಯ ‘ಕೋಟಿಗೊಬ್ಬ-3’ ಚಿತ್ರದ ಟೀಸರ್ ಯೂ ಟ್ಯೂಬ್​ನಿಂದ ಡಿಲೀಟ್ ಆಗಿ ರಾದ್ಧಾಂತ ಸೃಷ್ಟಿಯಾಗಿರುವ ಹೊತ್ತಿನಲ್ಲಿ, ಆ ಚಿತ್ರದ ಮುಂದುವರೆದ ಭಾಗ ತೆರೆಗೆ ಬರುತ್ತದೆ ಎಂದಿದ್ದಾರೆ ನಿರ್ವಪಕ ಸೂರಪ್ಪ ಬಾಬು.

    ಟೀಸರ್ ಡಿಲೀಟ್ ಆಗಿರುವುದರ ಬಗ್ಗೆ ಸ್ಪಷ್ಟನೆ ನೀಡಲು ಸೋಮವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದಾರೆ. ‘‘ಕೋಟಿಗೊಬ್ಬ-3 ಟೀಸರ್ ಡಿಲೀಟ್ ಆಗಿರುವ ಬಗ್ಗೆ ಈಗಾಗಲೇ ಎಲ್ಲರಿಗೂ ಗೊತ್ತಿದೆ. ಇದು ನನ್ನನ್ನು ಮತ್ತು ನನ್ನ ಸಿನಿಮಾದ ಬಿಝಿನೆಸ್ ಹಾಳು ಮಾಡಲು ಮಾಡುತ್ತಿರುವ ಕೆಲಸ.

    ಸದ್ಯದಲ್ಲೆ ಎಲ್ಲವೂ ಸರಿಯಾಗಲಿದ್ದು, ಟೀಸರ್ ಆದಷ್ಟು ಬೇಗ ಯೂಟ್ಯೂಬ್​ನಲ್ಲಿ ಸಿಗಲಿದೆ. ಇನ್ನು ‘ಕೋಟಿಗೊಬ್ಬ-4’ ಚಿತ್ರಕ್ಕಾಗಿ ಈಗಾಗಲೇ ಕಥೆ ರೆಡಿಯಾಗಿದ್ದು, ಅದನ್ನು ತೆರೆಗೆ ತರುತ್ತೇವೆ’ ಎಂದು ಹೇಳಿದರು ಸೂರಪ್ಪ ಬಾಬು. ಈಗಾಗಲೇ ‘ಕೆ3’ಯ ಕೆಲಸಗಳು ಕೊನೆಯ ಹಂತದಲ್ಲಿದ್ದು, ಸದ್ಯದಲ್ಲೆ ರಿಲೀಸ್ ದಿನಾಂಕವನ್ನು ನಿರ್ವಪಕರು ಅನೌನ್ಸ್ ಮಾಡಲಿದ್ದಾರಂತೆ.

    “ಮಾನವಕುಲ ಎದುರಿಸುತ್ತಿರುವ ತೊಂದರೆಗಿಂತ ಇದೇನು ದೊಡ್ಡ ಟ್ರಬಲ್ ಅಲ್ಲ’; ಹೀಗೆಂದು ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದು ಏಕೆ ಗೊತ್ತಾ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts