More

    ಆಕಾಶವನ್ನೇ ಅಲುಗಾಡಿಸಲು ಬಂದ ಕಿಚ್ಚ ಸುದೀಪ್; ‘ಕೋಟಿಗೊಬ್ಬ 3’ ಚಿತ್ರದ ಟೈಟಲ್​ ಟ್ರ್ಯಾಕ್​ ಬಿಡುಗಡೆ

    ಬೆಂಗಳೂರು: ಇತ್ತೀಚಿನ ಕೆಲ ದಿನಗಳಿಂದ ಟೀಸರ್​ ಬಳಿಕ ‘ಕೋಟಿಗೊಬ್ಬ 3’ ಚಿತ್ರದ ಯಾವುದೇ ಸದ್ದಾಗಲಿ, ಸುದ್ದಿಯಾಗಲಿ ಇರಲಿಲ್ಲ. ಇದೀಗ ಲಾಕ್​ಡೌನ್​ ಹೊತ್ತಲ್ಲಿ ಚಿತ್ರದ ಟೈಟಲ್​ ಟ್ರ್ಯಾಕ್​ ಮೂಲಕ ಕೋಟಿಗೊಬ್ಬನ ಆಗಮನವಾಗಿದೆ. ಹೌದು, ‘ಆಕಾಶವನ್ನು ಅದರಿಸುವ.. ಈ ಭೂಮಿನ ಪಳಗಿಸುವ.. ಕೋಟಿ ಕೋಟಿ ನೋಟುಗಳ ಕೋಟೆಗಳ ಮೇಲೆ ಕುಳಿತಿರುವ ನಾಲ್ಕು ತಲೆ ಬ್ರಹ್ಮನಿಗೂ ಕನ್​ಫ್ಯೂಸ್​ ಮಾಡೋವ್ನಿವಾ… ’ ಎಂಬ ಸಾಹಿತ್ಯವುಳ್ಳ ಹಾಡಿನ ಲಿರಿಕಲ್ ವಿಡಿಯೋ ಸೋಮವಾರ ಬಿಡುಗಡೆ ಆಗಿದೆ.
    ಡಾ. ವಿ. ನಾಗೇಂದ್ರ ಪ್ರಸಾದ್​ ಸಾಹಿತ್ಯದಲ್ಲಿ ಮೂಡಿ ಬಂದ ಸಾಲುಗಳು, ಕಥಾನಾಯಕನನ್ನು ವರ್ಣಿಸುತ್ತವೆ. ಆತನ ಶಕ್ತಿ ಮತ್ತು ಚಾಣಾಕ್ಷತನವನ್ನು ಬಿಂಬಿಸುತ್ತವೆ. ಹಾಡಿನ ಮತ್ತೊಂದು ಹೈಲೈಟ್​ ಅಂದರೆ ಅದು ಅರ್ಜುನ್​ ಜನ್ಯ ಸಂಗೀತ. ಇನ್ನುಳಿದಂತೆ ಶಿವಕಾರ್ತಿಕ್ ನಿರ್ದೇಶನದಲ್ಲಿ ‘ಕೋಟಿಗೊಬ್ಬ 3’ ಸಿನಿಮಾ ಮೂಡಿಬಂದಿದ್ದು, ಸೂರಪ್ಪ ಬಾಬು ನಿರ್ಮಾಣ ಮಾಡಿದ್ದಾರೆ. ಬಹುಭಾಷಾ ನಟಿ ಮಡೊನಾ ಸೆನಾಸ್ಟಿಯನ್​ ನಾಯಕಿಯಾಗಿದ್ದು, ಖಳನಾಯಕನಾಗಿ ರವಿಶಂಕರ್​ ನಟಿಸಿದ್ದಾರೆ.
    ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಿಕೊಂಡಿರುವ ಈ ಸಿನಿಮಾ, ಹಾಡು ಮತ್ತು ಸಣ್ಣ ಪುಟ್ಟ ಪ್ಯಾಚ್​ವರ್ಕ್​ ಕೆಲಸಗಳನ್ನು ಬಾಕಿ ಉಳಿಸಿಕೊಂಡಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಶೀಘ್ರದಲ್ಲಿ ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ, ಕರೊನಾದಿಂದ ಮುಂದೂಡಲ್ಪಟ್ಟಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts