ಬೆಂಗಳೂರು: ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’ ಚಿತ್ರವು ಬಿಡುಗಡೆಯಾಗಿ ಎಂಟು ತಿಂಗಳುಗಳಾಗಿವೆ. ಈ ಎಂಟು ತಿಂಗಳುಗಳಲ್ಲಿ ಅವರು ಯಾವೊಂದು ಹೊಸ ಚಿತ್ರವನ್ನೂ ಒಪ್ಪಿಕೊಂಡಿಲ್ಲ. ‘ಬಿಗ್ ಬಾಸ್’, ಸಿಸಿಎಲ್, ಕೆಸಿಸಿ ಎಂದು ಬಿಜಿಯಾಗಿದ್ದ ಸುದೀಪ್, ಯಾವ ಚಿತ್ರವನ್ನು ಒಪ್ಪುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇತ್ತು. ಈಗ ಆ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ.
ಇದನ್ನೂ ಓದಿ: ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಬೇರೆಯಾಗಲು ಈ ನಟ ಕಾರಣವಂತೆ!?
ಸುದೀಪ್ ಈಗ ಒಂದಲ್ಲ, ಎರಡಲ್ಲ, ಮೂರು ಚಿತ್ರಗಳನ್ನು ಒಪ್ಪಿಕೊಂಡಿದ್ದಾರಂತೆ. ಹಾಗಂತ ಅವರೇ ಹೇಳಿಕೊಂಡಿದ್ದಾರೆ. ತಮ್ಮ ಮುಂದಿನ ಹೆಜ್ಜೆಯ ಬಗ್ಗೆ ಇದ್ದ ಹಲವು ಗೊಂದಲಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ಪತ್ರ ಬರೆಯುವ ಮೂಲಕ ತೆರೆ ಎಳೆದಿರುವ ಅವರು, ಆ ಪತ್ರದಲ್ಲಿ ಮೂರು ಚಿತ್ರಗಳಿಗೆ ಗ್ರೀನ್ ಸಿಗ್ನಲ್ ನೀಡಿರುವುದಾಗಿ ಹೇಳಿಕೊಂಡಿದ್ದಾರೆ.
ಈ ಕುರಿತು ಬರೆದುಕೊಂಡಿರುವ ಅವರು, ”ವಿಕ್ರಾಂತ್ ರೋಣ’ ನಂತರ ಒಂದು ದೊಡ್ಡ ಬ್ರೇಕ್ ತೆಗೆದುಕೊಂಡಿದ್ದೆ ಮತ್ತು ಇದು ನನ್ನ ಮೊದಲ ದೊಡ್ಡ ಬ್ರೇಕ್ ಆಗಿತ್ತು. ಕೋವಿಡ್ ಸಮಯದಲ್ಲಿ ‘ವಿಕ್ರಾಂತ್ ರೋಣ’ ಚಿತ್ರದ ಚಿತ್ರೀಕರಣ ಮಾಡುವುದು ಅಷ್ಟು ಸುಲಭವಾಗಿರಲಿಲ್ಲ. ಆ ನಂತರ ಓಟಿಟಿ ಮತ್ತು ಟಿವಿಯಲ್ಲಿ ಪ್ರಸಾರವಾದ ‘ಬಿಗ್ ಬಾಸ್’ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದೆ. ಸತತ ಕೆಲಸಗಳಿಂದ ಸುಸ್ತಾಗಿದ್ದರಿಂದ ಒಂದು ಬ್ರೇಕ್ ಪಡೆಯುವುದಕ್ಕೆ ಯೋಚಿಸಿದೆ. ಕ್ರಿಕೆಟ್ ನನಗೆ ಅಂಥದ್ದೊಂದು ವಿಶ್ರಾಂತಿ ಮತ್ತು ಖುಷಿ ನೀಡುತ್ತದೆ. ಕೆಸಿಸಿ ಮತ್ತು ಕರ್ನಾಟಕ ಬುಲ್ಡೋಜರ್ಸ್ ಜತೆಗೆ ಒಂದಿಷ್ಟು ಸಮಯ ಕಳೆಯುವ ಅವಕಾಶ ಸಿಕ್ಕಿದ್ದು, ಈ ಸಮಯವನ್ನು ಬಹಳ ಎಂಜಾಯ್ ಮಾಡಿದೆ’ ಎಂದು ಹೇಳಿಕೊಂಡಿದ್ದಾರೆ.
ತಮ್ಮ ಯೋಜನೆಗಳ ಕುರಿತು ಬರೆದುಕೊಂಡಿರುವ ಅವರು, ‘ಈ ಮಧ್ಯೆ, ನನ್ನ ಮುಂದಿನ ಚಿತ್ರಗಳ ಕುರಿತಾದ ಚರ್ಚೆಗಳು ನಡೆಯುತ್ತಲೇ ಇತ್ತು ಮತ್ತು ಒಂದಿಷ್ಟು ಕಥೆಗಳನ್ನು ಕೇಳಿದ್ದೇನೆ. ಈ ಪೈಕಿ ಮೂರು ಕಥೆಗಳನ್ನು ಓಕೆ ಮಾಡಿದ್ದೇನೆ. ಈ ಚಿತ್ರಕ್ಕೆ ಸಾಕಷ್ಟು ಹೋಂವರ್ಕ್ನ ಅವಶ್ಯಕತೆಗಳಿದ್ದು, ಸಾಕಷ್ಟು ತಯಾರಿಗಳು ನಡೆಯುತ್ತಿವೆ. ಈ ಮೂರೂ ತಂಡಗಳು ಹಗಲು-ರಾತ್ರಿ ಕೆಲಸ ಮಾಡುತ್ತಿದ್ದು, ಸದ್ಯದಲ್ಲೇ ಚಿತ್ರಗಳನ್ನು ಘೋಷಿಸಲಿವೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಟಿ ನಗ್ಮಾ ಜತೆ ವಿವಾಹೇತರ ಸಂಬಂಧ ವದಂತಿ: ಕೊನೆಗೂ ಮೌನ ಮುರಿದ ನಟ ರವಿಕಿಶನ್
ಸುದೀಪ್ ಅವರು ಮೂರು ಚಿತ್ರಗಳನ್ನು ಒಪ್ಪಿದ್ದು ಕೇಳಿ ಅವರ ಅಭಿಮಾನಿಗಳು ಸಂತೋಷಗೊಂಡಿದ್ದು, ಆ ಚಿತ್ರಗಳ ಘೋಷಣೆ ಯಾವಾಗ ಎಂದು ಕುತೂಹಲದಿಂದ ಕಾಯುತ್ತಿದ್ದಾರೆ.
About my Next
❤️🥂 pic.twitter.com/3vkCmS6FBF— Kichcha Sudeepa (@KicchaSudeep) April 2, 2023
ಬೋಲ್ಡ್ ಆಗಿ ನಟಿಸಿದ ಮಾತ್ರಕ್ಕೆ… ಅಸಭ್ಯ ಪ್ರಶ್ನೆ ಕೇಳಿದ ಯೂಟ್ಯೂಬರ್ಗೆ ನಟಿ ತನಿಶಾ ಕುಪ್ಪಂಡ ಕ್ಲಾಸ್