More

    ಕಂಗೊಳಿಸಲಿದೆ ಕೋಟೆ ಹೊಂಡ

    ಅಕ್ಕಿಆಲೂರ: 3 ದಶಕಗಳಿಂದ ತಾಜ್ಯ ಪದಾರ್ಥಗಳು ಸಂಗ್ರಹವಾಗಿ ದುರ್ವಾಸನೆಯಿಂದ ನಾರುತ್ತಿದ್ದ ಕೋಟೆ ಹೊಂಡದ ಅಭಿವೃದ್ಧಿ ಕಾರ್ಯ ಆರಂಭವಾಗಿದ್ದು, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘ ಮತ್ತು ಸ್ಥಳೀಯ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಹೊಂಡಕ್ಕೆ ಹೊಸ ಸ್ವರೂಪ ನೀಡಲಾಗುತ್ತಿದೆ.

    ಸ್ವಾತಂತ್ರ್ಯ ಪೂರ್ವದಿಂದಲ್ಲೂ ಅಕ್ಕಿಆಲೂರ ಹಾಗೂ ಸೂತ್ತಲಿನ ಹತ್ತಾರು ಹಳ್ಳಿಗಳ ಜನತೆಗೆ ಕುಡಿಯುವ ನೀರು ಒದಗಿಸುತ್ತಿದ್ದ ಪಟ್ಟಣದ ಮಧ್ಯಭಾಗದಲ್ಲಿರುವ ಕೋಟೆ ಹೊಂಡ ಕಾಲಕ್ರಮೇಣ ತನ್ನ ಮೂಲ ಸ್ವರೂಪ ಕಳೆದುಕೊಂಡಿತ್ತು. ಹೊಂಡದ ಸುತ್ತಲೂ ಪ್ರತಿ ಮಂಗಳವಾರ ವಾರದ ಸಾಲುಸಂತೆ ನಡೆಯುತ್ತಿದ್ದರಿಂದ ತಾಜ್ಯ ಪದಾರ್ಥಗಳನ್ನು ಇಲ್ಲಿಯೇ ಎಸೆಯಲಾಗುತ್ತಿತ್ತು. ಹೊಂಡಕ್ಕೆ ಚರಂಡಿ ನೀರು ಹರಿಯುತ್ತಿದ್ದರಿಂದ ಕೊಳಚೆ ನೀರು ಸಂಗ್ರಹವಾಗಿ ಗಬ್ಬು ವಾಸನೆ ನಾರುತ್ತಿದ್ದು, ಹೊಂಡದ ಸುತ್ತಲೂ ಅನುಪಯುಕ್ತ ಗಿಡಗಂಟಿಗಳು ಬೆಳೆದು ಭಯಾನಕ ವಾತಾವರಣ ನಿರ್ವಣವಾಗಿತ್ತು. ಹೊಂಡಕ್ಕೆ ಅಭಿವೃದ್ಧಿ ಕಾಯಕಲ್ಪ ನೀಡಬೇಕೆಂಬ ಕೂಗಿಗೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಸ್ಪಂದಿಸಿದ್ದು, ಇದೀಗ ಕಾಮಗಾರಿ ಆರಂಭವಾಗಿದೆ.

    ಅನೇಕ ಬಾರಿ ಅಪೂರ್ಣಗೊಂಡಿದ್ದ ಅಭಿವೃದ್ಧಿ:

    ಪಟ್ಟಣದ ಹೃದಯಭಾಗದಲ್ಲಿದ್ದ ಕೋಟೆ ಹೊಂಡದ ಅಭಿವೃದ್ಧಿ ಮಾಡಬೇಕೆಂಬ ಜನತೆಯ ಒತ್ತಾಯಕ್ಕೆ ಮಣಿದ ಗ್ರಾಪಂ ಹೊಂಡದ ಅಭಿವೃದ್ಧಿಗೆ ಮುಂದಾಗಿತ್ತು. ಆದರೆ, ಕಾಮಗಾರಿ ನಡೆಸಿದಾಗಲೆಲ್ಲ ಸಾಕಷ್ಟು ಅಪೂರ್ಣಗೊಂಡಿತ್ತು. ಮಹತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ, ಶಾಸಕರ ಅನುದಾನ ಬಳಕೆಯಾಗದೆ, ಅಧಿಕಾರಿಗಳು ಮತ್ತು ಜನಪ್ರನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಇದೀಗ ಧರ್ಮಸ್ಥಳ ಯೋಜನೆ ಕೆರೆ ಕಾಮಗಾರಿಗೆ ಮುಂದಾಗಿರುವುದು ಸಾರ್ವಜನಿಕರ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

    ಸುಮಾರು 30 ವರ್ಷಗಳ ಅಧಿಕ ಕಾಲ ತಾಜ್ಯ ಸಂಗ್ರಹ ಕೇಂದ್ರವಾಗಿದ್ದ ಕೋಟೆ ಹೊಂಡ ಇನ್ನು ಮುಂದೆ ಹೊಸ ಸ್ವರೂಪ ಪಡೆದು ಕಂಗೊಳಿಸಲಿದೆ. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ, ಸ್ಥಳೀಯ ಗ್ರಾಪಂ ಮತ್ತು ಪಟ್ಟಣದ ಹಿರಿಯರ ಸಹಾಯದಿಂದ ಯೋಜನೆಗೆ ಸುಮಾರು 6 ಲಕ್ಷ ರೂ. ಗಿಂತ ಹೆಚ್ಚಿನ ಹಣ ಮೀಸಲಿಡಲಾಗಿದೆ. ಇದಕ್ಕಾಗಿ ಕೋಟೆ ಹೊಂಡ ಅಭಿವೃದ್ಧಿ ಸಮಿತಿ ರಚಿಸಲಾಗಿದೆ. ಈಗಾಗಲೇ ಗ್ರಾಪಂ ಸಹಾಯದಿಂದ ಹೊಂಡದ ಹೂಳು ತೆಗೆದಿರುವ ಧರ್ಮಸ್ಥಳ ಸಂಘವು, ಅಚ್ಚುಕಟ್ಟು ಪ್ರದೇಶವನ್ನು ರಚಿಸಿಕೊಂಡು ಸುತ್ತಲೂ ಕಲ್ಲು, ತಂತಿಬಲೆ, ಪಾದಚಾರಿ ರಸ್ತೆ ಮತ್ತು ಸುಂದರ ಗಿಡಗಳನ್ನು ನೆಡುವ ಉದ್ದೇಶ ಹೊಂದಿದೆ.

    ಧರ್ಮಸ್ಥಳ ಸಂಘದ ಸಹಾಯದಿಂದ ಗ್ರಾಪಂ ಸಹಕಾರದೊಂದಿಗೆ ಕೋಟೆ ಹೊಂಡದ ಅಭಿವೃದ್ಧಿಗೆ ಮುಂದಾಗಿದ್ದೇವೆ. ಈಗಾಗಲೇ ಗ್ರಾಪಂ ನಿಂದ ಅಗತ್ಯ ಸಹಕಾರ ನೀಡಲಾಗಿದೆ. ವಸೂಲಿಯಾದ ತೆರಿಗೆ ಹಣದಲ್ಲಿ 85 ಸಾವಿರ ರೂಪಾಯಿ ಬಳಿಸಿಕೊಂಡು ಮಣ್ಣು ತೆಗೆಯಲಾಗಿದೆ. ಹೊಂಡ ಸಂಪೂರ್ಣ ಅಭಿವೃದ್ಧಿಯಾಗುವರೆಗೂ ಧರ್ಮಸ್ಥಳ ಸಂಘದ ಜತೆಗೆ ನಿಲುತ್ತೇವೆ.

    | ಕುಮಾರ ಕಮರೊಳ್ಳಿ, ಪಿಡಿಒ ಅಕ್ಕಿಆಲೂರ

    ಧರ್ಮಸ್ಥಳ ಯೋಜನೆಯಲ್ಲಿರುವ ಸಾಮಾಜಿಕ ಕಾರ್ಯಗಳನ್ನು ಅಕ್ಕಿಆಲೂರಿನಲ್ಲಿ ಅನುಷ್ಠಾನ ಮಾಡುತ್ತಿದ್ದೇವೆ. 5.80 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸಬೇಕೆಂಬುದು ನಮ್ಮ ಗುರಿ. ಪಟ್ಟಣದ ಜನತೆ ಮತ್ತು ಗ್ರಾಪಂನ ಸಂಪೂರ್ಣ ಸಹಕಾರ ದೊರೆಯುತ್ತಿದೆ. ಮಳೆಗಾಲ ಮುಗಿಯುತ್ತಿದ್ದಂತೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸುತ್ತೇವೆ.

    | ಮಹಾಂತೇಶ ವೈ. ಎಚ್, ಧರ್ವಸ್ಥಳ ಯೋಜನೆಯ ಕೃಷಿ ಮೇಲ್ಚಿಚಾರಕರು, ಹಾನಗಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts