More

    ಚಿರಂಜೀವಿಯಿಂದ 30 ಕೋಟಿ ಕಳ್ಕೊಂಡ್ರು ಶಿವ!

    ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಇಷ್ಟರಲ್ಲಿ ಚಿರಂಜೀವಿ ಅಭಿನಯದ ‘ಆಚಾರ್ಯ’ ಸಿನಿಮಾದ ಚಿತ್ರೀಕರಣವಾಗಬೇಕಿತ್ತು. ಲಾಕ್‌ಡೌನ್‌ನಿಂದಾಗಿ ಚಿತ್ರದ ಚಿತ್ರೀಕರಣ ಮುಂದಕ್ಕೆ ಹೋಗಿದೆ. ಯಾವಾಗ ಶುರುವಾಗುತ್ತದೆ ಎನ್ನುವುದೂ ಗೊತ್ತಿಲ್ಲ. ಎರಡ್ಮೂರು ತಿಂಗಳ ನಂತರ ಶುರುವಾದರೂ, ಬಿಡುಗಡೆ ಏನಿದ್ದರೂ ಮುಂದಿನ ವರ್ಷವೇ. ಇದೆಲ್ಲದರಿಂದ, ನಿರ್ದೇಶಕ ಕೊರಟಾಲ ಶಿವ ಎಷ್ಟು ಕಳೆದುಕೊಂಡಿದ್ದೆಷ್ಟು ಗೊತ್ತಾ? ಬರೋಬ್ಬರಿ 30 ಕೋಟಿ ಎಂಬ ಸುದ್ದಿ ಟಾಲಿವುಡ್ ಅಂಗಳಿದಿಂದ ಬಂದಿದೆ.

    ಚಿತ್ರ ತಡವಾದರೆ ನಿರ್ಮಾಪಕರಿಗೆ ಲಾಸ್ ಆಗಬೇಕು. ನಿರ್ದೇಶಕರಿಗೆ ಲಾಸ್ ಆಗುವುದು ಹೇಗೆ ಎಂಬ ಪ್ರಶ್ನೆ ಸಹಜವೇ. ವಿಷಯ ಏನೆಂದರೆ, ಕೊರಟಾಲ ಶಿವ ಎನ್ನುವವರು ಟಾಲಿವುಡ್‌ನ ಬಹಳ ಬೇಡಿಕೆಯ ಮತ್ತು ಅತೀ ಹೆಚ್ಚು ಸಂಭಾವನೆ ಪಡೆಯುವ ನಿರ್ದೇಶಕರು. ‘ಮಿರ್ಚಿ’, ‘ಶ್ರೀಮಂತುಡು’, ‘ಜನತಾ ಗ್ಯಾರೇಜ್’ ಮತ್ತು ‘ಭರತ್ ಅನೇ ನೇನು’ದಂಥ ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶನ ಮಾಡಿರುವ ಕೊರಟಾಲ ಶಿವ, ಒಂದು ಚಿತ್ರಕ್ಕೆ 15 ಕೋಟಿ ಸಂಭಾವನೆ ಪಡೆಯುತ್ತಾರಂತೆ. ‘ಭರತ್ ಅನೇ ನೇನು’ ನಂತರ ಕಳೆದ ಎರಡು ವರ್ಷದಿಂದ ‘ಆಚಾರ್ಯ’ ಸಿದ್ಧತೆಯಲ್ಲಿ ಶಿವ ತೊಡಗಿಸಿಕೊಂಡಿದ್ದಾರೆ. ಇದೇ ಸಮಯದಲ್ಲಿ ಅವರು ಮಿನಿಮಮ್ ಎರಡು ಚಿತ್ರಗಳನ್ನು ಮಾಡಬಹುದಿತ್ತು ಮತ್ತು ಏನಿಲ್ಲವೆಂದರೂ 30 ಕೋಟಿ ಸಂಪಾದಿಸಬಹುದಿತ್ತು ಎಂದು ಹೇಳಲಾಗುತ್ತಿದೆ. ಆದರೆ, ‘ಆಚಾರ್ಯ’ದಿಂದ ಸಂಪಾದನೆ ಮಿಸ್ ಆಯಿತು ಎನ್ನುವುದು ಟಾಲಿವುಡ್ ತಜ್ಞರ ಅಭಿಪ್ರಾಯ.

    ‘ಆಚಾರ್ಯ’ ಚಿತ್ರವನ್ನು ಶಿವ ಕಳೆದ ವರ್ಷವೇ ಮಾಡಬೇಕಿತ್ತು. ಆದರೆ, ‘ಸೈರಾ ನರಸಿಂಹರೆಡ್ಡಿ’ ಮುಗಿದು ಬಿಡಲಿ ಎಂದು ಚಿರಂಜೀವಿ ಹೇಳಿದರಂತೆ. ಅವರ ಮಾತಿಗೆ ಗಂಟುಬಿದ್ದು, ಶಿವ ಸುಮ್ಮನಾಗಿದ್ದಾರೆ. ‘ಸೈರಾ ನರಸಿಂಹರೆಡ್ಡಿ’ ಬಿಡುಗಡೆಯಾದರೂ, ‘ಆಚಾರ್ಯ’ ಪ್ರಾರಂಭಕ್ಕೆ ಕೆಲವು ಅಡೆತಡೆಗಳು ಎದುರಾಗಿವೆ. ಅವೆಲ್ಲಾ ಮುಗಿದು ಚಿತ್ರ ಶುರುವಾಗಬೇಕು ಎನ್ನುವಷ್ಟರಲ್ಲಿ ಲಾಕ್‌ಡೌನ್ ಆಗಿದೆ. ಇದೆಲ್ಲದರಿಂದ, ಶಿವ ತಮ್ಮ ಜೀವನದ ಎರಡು ಅಮೂಲ್ಯ ವರ್ಷಗಳನ್ನು ಕಳೆದುಕೊಂಡಿದ್ದಾರೆ. ಚಿತ್ರ ಮುಗಿದು ಬಿಡುಗಡೆಯಾಗುವಷ್ಟರಲ್ಲಿ ಆ ಸಂಖ್ಯೆ ಮೂರಕ್ಕೇರಿರುತ್ತದೆ ಎನ್ನುವುದು ವಿಪರ್ಯಾಸ.

    ಇಬ್ಬರು ಮಕ್ಕಳನ್ನು ಹೇಗೆ ಸಂಭಾಳಿಸುತ್ತಿದ್ದೀರಿ ಎಂದಿದ್ದಕ್ಕೆ ರಾಧಿಕಾ ಪಂಡಿತ್ ​ಕೊಟ್ಟ ಉತ್ತರ ಹೀಗಿದೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts