ಕಳಸ: ಗಂಗನಕುಡಿಗೆ ಕುಂಬಳಡಿಕೆ ಸ್ವಾಮಿ ಕೊರಗಜ್ಜ ನೇಮೋತ್ಸವ ಶನಿವಾರ ರಾತ್ರಿ ವಿಜೃಂಭಣೆಯಿಂದ ನೆರವೇರಿತು.
ಬೆಳಗ್ಗೆ ಕುಂಬಳಡಿಕೆ ಕೊರಗಜ್ಜ ಕ್ಷೇತ್ರದಲ್ಲಿ ಪ್ರಥಮ ವಷರ್ದ ವರ್ಧಂತ್ಯುತ್ಸವ ಪ್ರಯುಕ್ತ ನಾರಾವಿ ಕೃಷ್ಣ ತಂತ್ರಿ ಅವರು ಸ್ವಾಮಿ ಕೊರಗಜ್ಜ ಹಾಗೂ ಗುಳಿಗ ದೈವಗಳಿಗೆ ಸಾನ್ನಿಧ್ಯ ಕಲಶಾಭಿಷೇಕ ನೆರವೇರಿಸಿದರು. ಮಧ್ಯಾಹ್ನ 1 ಗಂಟೆಗೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಸಂಜೆ ಗುಳಿಗ ದೈವದ ಕೋಲ ಹಾಗೂ ರಾತ್ರಿ ಸ್ವಾಮಿ ಕೊರಗಜ್ಜ ದೈವ ನರ್ತನ ಸೇವೆ ದೊಂದಿ ಬೆಳಕಿನೊಂದಿಗೆ ನಡೆಯಿತು. ತಾಲೂಕಿನ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿ ಹರಕೆ ತೀರಿಸಿ, ದೈವದ ಸಿರಿಮುಡಿ ಗಂಧಪ್ರಸಾದ ಸ್ವೀಕರಿಸಿದರು.