More

    ತಿಂಗಳೊಳಗೆ ಬೀದಿ ಸುತ್ತುವಂತೆ ಮಾಡುವೆ!; ಮಂಗಳೂರಿನ ಅತ್ತಾವರದಲ್ಲಿ ಕೊರಗಜ್ಜ ದೈವದ ನುಡಿ..

    ಬೆಂಗಳೂರು: ಒಂದೆಡೆ ಕೊರಗಜ್ಜನನ್ನು ಹೋಲುವ ವೇಷ ಹಾಕಿ ಅನ್ಯಮತೀಯ ಕೆಲ ಯುವಕರು ಲೇವಡಿ ಮಾಡಿರುವುದು ಭಾರಿ ಜನಾಕ್ರೋಶಕ್ಕೆ ಕಾರಣವಾಗಿದ್ದರೆ, ಇನ್ನೊಂದೆಡೆ ಕೊರಗಜ್ಜ ದೈವವೇ ಅಭಯದ ನುಡಿ ಮೂಲಕ ಅವರನ್ನು ಸಮಾಧಾನಪಡಿಸಿದೆ.

    ಈ ಮಣ್ಣಿನಲ್ಲಿ ನಾನಿರುವುದು ಹೌದಾದರೆ ನನ್ನನ್ನು ಲೇವಡಿ ಮಾಡಿದವರನ್ನು ಮಂಕು ಮರುಳರಂತೆ ಬೀದಿಯಲ್ಲಿ ಸುತ್ತಾಡಿಸುವೆ ಎಂದು ಕೊರಗಜ್ಜ ನುಡಿ ಹೇಳುತ್ತಿರುವ ವಿಡಿಯೋ ಕ್ಲಿಪ್ಪಿಂಗ್ ಹೊರಬಂದಿದೆ. ಇದು ಅತ್ತಾವರದ ಕೊರಗಜ್ಜನ ಕಟ್ಟೆಯಲ್ಲಿ ಶುಕ್ರವಾರ ನಡೆದಿದೆ.

    ಭಕ್ತಾದಿಗಳು ಕೊರಗಜ್ಜನ ಮುಂದೆ ಆಗಿರುವ ವಿಚಾರವನ್ನು ಅರುಹುತ್ತಿರುವುದು, ಅದಕ್ಕೆ ಕೊರಗಜ್ಜ ಅಭಯ ನೀಡುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಭಯ ಪಡಬೇಡಿ, ನನ್ನನ್ನು ಮಂಕು ಮರುಳನಂತೆ ನಿಲ್ಲಿಸಿದರಲ್ಲವೇ? ಅವರು ಹುಚ್ಚರಂತೆ ಬೀದಿ ಸುತ್ತುವಂತೆ ಮಾಡುತ್ತೇನೆ, ಅದಕ್ಕೆ ಒಂದು ತಿಂಗಳು ಮೀರದು. ಈ ಮಣ್ಣಿನಲ್ಲಿ ಅಜ್ಜ ಇರುವುದಾದರೆ ಇದು ನಡೆದೇ ನಡೆಯುತ್ತದೆ ಎಂದು ಕೊರಗಜ್ಜ ದೈವ ನುಡಿ ಹೇಳಿದೆ.

    ವಿಟ್ಲದ ಸಾಲೆತ್ತೂರಿನಲ್ಲಿರುವ ಮದುಮಗಳ ಮನೆಗೆ ಬಂದ ಕಾಸರಗೋಡು ಜಿಲ್ಲೆ ಉಪ್ಪಳದ ನಿವಾಸಿ ಯುವಕ ತನ್ನ ಸಹಚರರೊಂದಿಗೆ ಕೊರಗಜ್ಜನನ್ನು ಹೋಲುವಂತೆ ವೇಷ ಧರಿಸಿ ಹೋಗಿರುವುದು ಕರಾವಳಿಯಾದ್ಯಂತ ಭಕ್ತಾದಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲಲ್ಲಿ ಪ್ರತಿಭಟನೆಗಳೂ ನಡೆಯುತ್ತಿವೆ. ಈ ಕುರಿತು ಶುಕ್ರವಾರ ಅತ್ತಾವರದ ಕೊರಗಜ್ಜನ ಕಟ್ಟೆಯಲ್ಲಿ ಹರಕೆ ಸೇವೆ ವೇಳೆ ಭಕ್ತಾದಿಗಳು ಕೊರಗಜ್ಜ ದೈವದ ಮುಂದೆ ಅಪಚಾರವನ್ನು ಬಿಚ್ಚಿಟ್ಟಿದ್ದರು. ನಿನಗೆ ಅಪಚಾರ ಮಾಡಿದ್ದಾರೆ, ನಿನ್ನ ವೇಷಭೂಷಣ ಧರಿಸಿ ಲೇವಡಿ ಮಾಡಿದ್ದಾರೆ, ಅವರಿಗೆ ತಕ್ಕ ಶಿಕ್ಷೆಯಾಗುವಂತೆ ಮಾಡಬೇಕು ಎಂದು ಅರಿಕೆ ಮಾಡಿಕೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts