More

    ಮಾತೃಭಾಷೆ ಪರೀಕ್ಷೆ ಸೂಸುತ್ರ

    ಕೊಪ್ಪಳ: ನಗರ ಹಾಗೂ ಜಿಲ್ಲಾದ್ಯಂತ ಶುಕ್ರವಾರ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಸುಗಮವಾಗಿ ನಡೆಯಿತು. 79 ಪರೀಕ್ಷಾ ಕೇಂದ್ರಗಳಲ್ಲಿ ಮೊದಲ ದಿನದ ಪ್ರಥಮ ಭಾಷಾ ವಿಷಯಕ್ಕೆ 22210 ವಿದ್ಯಾರ್ಥಿಗಳ ಪೈಕಿ 22154 ಮಕ್ಕಳು ಹಾಜರಾದರೆ, 330 ಮಂದಿ ಗೈರಾಗಿದ್ದರು.

    ಪರೀಕ್ಷಾ ಕೇಂದ್ರಗಳಿಗೆ ನಿಗದಿತ ಅವಧಿಗಿಂತ ಮುಂಚೆ ಬಂದ ವಿದ್ಯಾರ್ಥಿಗಳು ತಮ ಕೊಠಡಿ, ನೋಂದಣಿ ಸಂಖ್ಯೆ ಪರಿಶೀಲಿಸಿಕೊಂಡರು. ಕೆಲವೆಡೆ ಕೇಂದ್ರದ ಸಿಬ್ಬಂದಿ ಮಕ್ಕಳಿಗೆ ಹೂ ನೀಡಿ ಸ್ವಾಗತಿಸಿದರು. ಡಿಡಿಪಿಐ ಎಂ.ಎ.ರಡ್ಡೇರ ವಿವಿಧ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಮಕ್ಕಳಿಗೆ ಧೈರ್ಯ ಹೇಳಿ ವಿಶ್ವಾಸ ತುಂಬಿದರು. ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸಿ ಒಳ ಬಿಡಲಾಯಿತು.

    15 ಮಕ್ಕಳಿಗೆ ಸಿಕ್ಕಿಲ್ಲ ಹಾಲ್‌ಟಿಕೆಟ್: ಕೊಪ್ಪಳ ಸಮೀಪದ ಭಾಗ್ಯನಗರದ ಸರ್ಕಾರಿ ಪಿಯು ಕಾಲೇಜಿನ ಪ್ರೌಢಶಾಲೆ ವಿಭಾಗದ 15 ವಿದ್ಯಾರ್ಥಿಗಳು ಹಾಲ್‌ಟಿಕೆಟ್ ಸಿಗದೆ ಪರೀಕ್ಷೆಯಿಂದ ವಂಚಿತರಾದರು. ಕಡಿಮೆ ಹಾಜರಾತಿ, ಆಂತರಿಕ ಪರೀಕ್ಷೆಗೆ ಗೈರಾಗಿದ್ದು, ಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸದ ಕಾರಣ ಭಾಗ್ಯನಗರ, ಯತ್ನಟ್ಟಿ, ಓಜನಳ್ಳಿ ಗ್ರಾಮದ 15 ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲಿ ಹಾಲ್‌ಟಿಕೆಟ್ ಜನರೇಟ್ ಆಗಿಲ್ಲ. ಇದರಿಂದ ಸಮಸ್ಯೆಯಾಗಿದೆ ಎಂದು ಶಾಲೆಯ ಮುಖ್ಯಶಿಕ್ಷಕ ಮಾರ್ಕಸ್ ನ್ಯೂಟನ್ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts