More

    ಜವಾಬ್ದಾರಿಯಿಂದ ಸ್ವತ್ತು ಕಾಪಾಡಿಕೊಳ್ಳಿ; ಎಸ್ಪಿ ಟಿ.ಶ್ರೀಧರ ಸಲಹೆ

    2.26 ಕೋಟಿ ರೂ. ಮೌಲ್ಯದ ವಸ್ತುಗಳ ಜಪ್ತಿ

    ಕೊಪ್ಪಳ: ನಮ್ಮ ಸ್ವತ್ತಿನ ಬಗ್ಗೆ ನಾವು ತೋರುವ ನಿರ್ಲಕ್ಷೃವೇ ಅಪರಾಧಕ್ಕೆ ಕಾರಣವಾಗುತ್ತದೆ. ಸ್ವತ್ತನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ನಮ್ಮದೇ ಆಗಿದೆ ಎಂದು ಎಸ್ಪಿ ಟಿ.ಶ್ರೀಧರ ಹೇಳಿದರು.

    ನಗರದ ಜಿಲ್ಲಾ ಪೊಲೀಸ್ ಕಚೇರಿ ಆವರಣದಲ್ಲಿ ಗುರುವಾರ ಆಯೋಜಿಸಿದ್ದ 2020 ಮತ್ತು 2021ನೇ ಸಾಲಿನ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಸ್ವತ್ತು ಹಿಂದಿರುಗಿಸುವಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಣ, ಬಂಗಾರ ಕಳೆದುಕೊಂಡ ಪ್ರಕರಣಗಳಲ್ಲಿ ಸ್ವತ್ತು ಮರಳಿ ಸಿಗುವುದು ಕಷ್ಟ. ಹೀಗಾಗಿ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು. ಎಸ್ಪಿಯಾಗಿ ನಾನೇ 10ರಿಂದ 20ಸಾವಿರ ರೂ.ಗಿಂತ ಹೆಚ್ಚಿನ ನಗದು ಮನೆಯಲ್ಲಿಟ್ಟುಕೊಳ್ಳುವುದಿಲ್ಲ. ಅಗತ್ಯಕ್ಕಿಂತ ಹೆಚ್ಚಿನ ಹಣ ಹಾಗೂ ಒಡವೆಗಳನ್ನು ಬ್ಯಾಂಕಿನಲ್ಲಿಡಿ. ಮನೆಯಿಂದ ತೆರಳುವಾಗ ಸಂಬಂಧಿಗಳು ಅಥವಾ ಪರಿಚಯಸ್ಥರಿಗೆ ತಿಳಿಸಿ ತೆರಳಬೇಕು. ಸುರಕ್ಷತಾ ಅಲಾರಾಂ ಹಾಗೂ ಸಿಸಿ ಕ್ಯಾಮರಾ ಅಳವಡಿಸಿಕೊಳ್ಳಿ. ಒಂದು ವಾರಕ್ಕಿಂತ ಹೆಚ್ಚು ದಿನ ಮನೆ ಬಿಟ್ಟು ತೆರಳಿದಾಗ ಸಂಬಂಧಿಗಳಿಗೆ ಒಡವೆ ನೀಡಬೇಕು ಅಥವಾ ಬೇರೆ ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

    21 ವರ್ಷ ಹಳೆಯದಾದ ಕಳ್ಳತನ ಪ್ರಕರಣ ಪತ್ತೆ ಹಚ್ಚಿ ಒಡವೆಗಳನ್ನು ಜಪ್ತಿ ಮಾಡಲಾಗಿದೆ. ಬೆರಳಚ್ಚು ತಜ್ಞ ಚಂದ್ರಶೇಖರ್ ಆಸಕ್ತಿ ವಹಿಸಿ ಈಗಾಗಲೇ ಮುಚ್ಚಿದ್ದ ಪ್ರಕರಣಗಳನ್ನು ತನಿಖೆ ಮಾಡಿ ಹಣ ಮತ್ತು ಒಡವೆ ಪತ್ತೆ ಹಚ್ಚಿದ್ದಾರೆ ಎಂದು ಎಸ್ಪಿ ಶ್ಲಾಘಿಸಿದರು. ಗಂಗಾವತಿ ಡಿವೈಎಸ್ಪಿ ಆರ್.ಎಸ್.ಉಜ್ಜನಕೊಪ್ಪ ಮಾತನಾಡಿ, ಪ್ರಕರಣಗಳ ಪತ್ತೆಗೆ ಸಾರ್ವಜನಿಕರ ಸಹಕಾರವೂ ಅಗತ್ಯ. ಬಸ್ಸಿನಲ್ಲಿ ಯಾಮಾರಿಸಿ ಹಣ ದೋಚುವ ಪ್ರಕರಣ ಹೆಚ್ಚುತ್ತಿದ್ದು, ಎಚ್ಚರಿಕೆಯಿಂದ ಇರಬೇಕು. ಅನುಮಾನಾಸ್ಪದ ವ್ಯಕ್ತಿಗಳು ಅಥವಾ ಚಟುವಟಿಕೆ ಕಂಡುಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕೆಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts