More

    ಒಕ್ಕೂಟಗಳ ಸಾಮರ್ಥ್ಯ ಬಲವರ್ಧನೆಗೆ ಒತ್ತು

    ಅಳವಂಡಿ: ಕೊಪ್ಪಳ ತಾಲೂಕಿನ 38 ಒಕ್ಕೂಟಗಳಿಗೆ ದೂರದೃಷ್ಟಿ ಮತ್ತು ವ್ಯಾಪಾರ ಅಭಿವೃದ್ದಿ ಯೋಜನೆ ಹಾಗೂ ಹಣಕಾಸು ನಿರ್ವಹಣೆ ತರಬೇತಿ ನೀಡುವ ಮೂಲಕ ಸಾಮರ್ಥ್ಯ ಬಲವರ್ಧನೆ ಮಾಡಲಾಗುತ್ತಿದೆ ಎಂದು ಸಂಜೀವಿನಿ ಒಕ್ಕೂಟದ ತಾಲೂಕಾ ಕಾರ್ಯಕ್ರಮ ವ್ಯವಸ್ಥಾಪಕ ಎಚ್.ಕೆ.ಸುನೀಲ ಹೇಳಿದರು.

    ದೂರದೃಷ್ಟಿ ಮತ್ತು ವ್ಯಾಪಾರ ಅಭಿವೃದ್ದಿ ಯೋಜನೆಯ ನಾಲ್ಕು ದಿನಗಳ ತಯಾರಿಕಾ ಕಾರ್ಯಾಗಾರ

    ಹಲಗೇರಿಯಲ್ಲಿ ಗ್ರಾಪಂ ವ್ಯಾಪ್ತಿಯ ಶ್ರೀಸುರಕ್ಷ ಸಂಜೀವಿನಿ ಒಕ್ಕೂಟ ಹಮ್ಮಿಕೊಂಡಿದ್ದ ದೂರದೃಷ್ಟಿ ಮತ್ತು ವ್ಯಾಪಾರ ಅಭಿವೃದ್ದಿ ಯೋಜನೆಯ ನಾಲ್ಕು ದಿನಗಳ ತಯಾರಿಕಾ ಕಾರ್ಯಾಗಾರದಲ್ಲಿ ಸೋಮವಾರ ಮಾತನಾಡಿದರು. ಮೊದಲು ಜಿಲ್ಲಾ, ತಾಲೂಕು ಸಂಪನ್ಮೂಲ ವ್ಯಕ್ತಿಗಳಿಗೆ ತರಬೇತಿ ನೀಡಲಾಗುತ್ತದೆ. ಬಳಿ ಅವರು ಒಕ್ಕೂಟಗಳಿಗೆ ತರಬೇತಿ ನೀಡಲಿದ್ದಾರೆ ಎಂದರು.

    ಇದನ್ನೂ ಓದಿ: ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿ ನಗರ ಪ್ರದಕ್ಷಿಣೆ ಮೆರವಣಿಗೆ ಕಾರ್ಯಕ್ರಮ ರದ್ದು!

    ಗ್ರಾಪಂ ಪಿಡಿಒ ಅಶೋಕ ಕಾರ್ಯಾಗಾರಕ್ಕೆ ಚಾಲನೆ ನೀಡಿದರು. ಗ್ರಾಪಂ ಕಾರ್ಯದರ್ಶಿ ದೊಡ್ಡನಗೌಡ್ರ, ರಾಜ್ಯ ಸಂಪನ್ಮೂಲ ವ್ಯಕ್ತಿ ತ್ರಿಭುವನೇಶ್ವರಿ, ಒಕ್ಕೂಟದ ಅಧ್ಯಕ್ಷೆ ಪಾರ್ವತಿ, ಕಾರ್ಯದರ್ಶಿ ಭಾಗ್ಯಮ್ಮ, ಖಜಾಂಚಿ ಲಲಿತಮ್ಮ, ಸಂಜೀವಿನಿ ಯೋಜನೆಯ ಜಿಲ್ಲಾ ವ್ಯವಸ್ಥಾಪಕ ವೆಂಕೋಬ, ವಲಯ ಮೇಲ್ವಿಚಾರಕ ವೆಂಕಟೇಶ ಇನ್ನಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts