More

    ಸಕಾಲ ಅರ್ಜಿ ವಿಲೇವಾರಿ ವಿಳಂಬ ಸಲ್ಲ: ಅಧಿಕಾರಿಗಳಿಗೆ ಡಿಸಿ ಎಂ.ಸುಂದರೇಶ ಬಾಬು ಸೂಚನೆ

    ಕೊಪ್ಪಳ: ವಿವಿಧ ಇಲಾಖೆಗಳ ಸೇವೆಗಳಿಗಾಗಿ ಸಕಾಲದಲ್ಲಿ ಸಲ್ಲಿಕೆಯಾಗುವ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು, ಅಧಿಕಾರಿಗಳಿಗೆ ಸೂಚಿಸಿದರು.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸಕಾಲ ಹಾಗೂ ಐಪಿಜಿಆರ್‌ಎಸ್ ಸೇವೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಸಕಾಲ ಯೋಜನೆಯಡಿ ವಿವಿಧ ಇಲಾಖೆ, ನಿಗಮ, ಸಂಸ್ಥೆಗಳು ಸೇರಿ 45 ಕಚೇರಿಗಳು ಸಾರ್ವಜನಿಕರಿಗೆ ಹಲವು ಬಗೆಯ ಸೇವೆಗಳನ್ನು ಒದಗಿಸುತ್ತಿವೆ. ಪ್ರತಿ ಇಲಾಖೆಯ ಒಪ್ಪಿಗೆ ಹಾಗೂ ಕಾರ್ಯನಿರ್ವಹಣೆಯ ಅವಧಿಯನುಸಾರ ಪ್ರತಿ ಅರ್ಜಿ ವಿಲೇವಾರಿಗೂ ಕಾಲಮಿತಿ ನಿಗದಿಪಡಿಸಿದೆ. ಅರ್ಜಿ ವಿಲೇವಾರಿಗೆ ಅಥವಾ ತಿರಸ್ಕಾರಕ್ಕೆ ಕೊನೆಯ ದಿನಾಂಕದವರೆಗೆ ಕಾಯುವ ಬದಲಿಗೆ ತ್ವರಿತವಾಗಿ ವಿಲೇವಾರಿಗೊಳಿಸಬೇಕು. ಯಾವುದೇ ಅರ್ಜಿಗಳು ಬಾಕಿ ಉಳಿಯಬಾರದು. ಅರ್ಜಿಗಳು ಸಲ್ಲಿಕೆಯಾದ ತಿಂಗಳೇ ವಿಲೇವಾರಿ ಮಾಡಬೇಕು. ಒಂದು ವೇಳೆ ನಿಮ್ಮ ಕಚೇರಿಗೆ ಸಂಬಂಧಿಸದ ಅರ್ಜಿಗಳು ಬಂದರೆ, ಅದನ್ನು ಸಂಬಂಧಪಟ್ಟ ಇಲಾಖೆಗೆ ವರ್ಗಾವಣೆ ಮಾಡಬೇಕು ಎಂದು ತಿಳಿಸಿದರು.

    ಸಕಾಲದಂತೆಯೇ ಸಾರ್ವಜನಿಕರ ಅಹವಾಲು ಸ್ವೀಕಾರಕ್ಕಾಗಿ ಐ.ಪಿ.ಜಿ.ಆರ್.ಎಸ್. ತಂತ್ರಾಂಶವನ್ನು ಸರ್ಕಾರ ಜಾರಿಗೊಳಿಸಿದೆ. ಇದು ನೇರವಾಗಿ ಮುಖ್ಯಮಂತ್ರಿಗಳ ಡ್ಯಾಶ್‌ಬೋರ್ಡ್‌ನಲ್ಲಿ ಕಾರ್ಯನಿರ್ವಹಿಸುವುದರಿಂದ ಜಿಲ್ಲೆಯಲ್ಲಿ ಸ್ವೀಕೃತವಾಗುವ ಅರ್ಜಿಗಳು, ಅವುಗಳ ವಿಲೇವಾರಿ ಕುರಿತ ಮಾಹಿತಿ ಮುಖ್ಯಮಂತ್ರಿಗಳ ಗಮನಕ್ಕೆ ಬರುತ್ತದೆ. ಯೋಜನೆಯಡಿ ಸ್ವೀಕೃತವಾಗುವ ಅರ್ಜಿಗಳಿಗೆ ಸೂಕ್ತ ಹಿಂಬರಹದೊಂದಿಗೆ ಸಂಬಂಧಿಸಿದ ಇಲಾಖೆಗೆ ವರ್ಗಾಯಿಸಬೇಕು. ಸಕಾಲದಂತೆ ಇಲ್ಲಿಯೂ ಕಾಲಮಿತಿಯೊಳಗೆ ಕಾರ್ಯನಿರ್ವಹಿಸಬೇಕಾಗುವುದರಿಂದ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದರು.

    ಎಡಿಸಿ ಸಾವಿತ್ರಿ ಬಿ.ಕಡಿ ಮಾತನಾಡಿ, ನವೆಂಬರ್‌ನಲ್ಲಿ 58,266 ಅರ್ಜಿ ಸ್ವೀಕೃತಿಯಾಗಿವೆ. ಒಟ್ಟಾರೆ 62,512 ವಿಲೇವಾರಿಯಾಗಿವೆ. 2804 ಅರ್ಜಿಗಳು ವಿಳಂಬವಾಗಿ ವಿಲೇವಾರಿಯಾದರೆ, 3621 ತಿರಸ್ಕೃತಗೊಂಡಿವೆ. ಬಾಕಿ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದ್ದು, ಇದನ್ನು ಮುಂದುವರಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು. ಜಿಪಂ ಉಪಕಾರ್ಯದರ್ಶಿ ಸಮೀರ್ ಮುಲ್ಲಾ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಕಾವ್ಯಾರಾಣಿ, ಸಕಾಲ ಸಮಾಲೋಕ ವಿಶ್ವನಾಥ, ವಿವಿಧ ಇಲಾಖೆ ಅಧಿಕಾರಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts