More

    ಸಮಸ್ಯಾತ್ಮಕ ಗ್ರಾಮಗಳನ್ನು ಪಟ್ಟಿ ಮಾಡಿ

    ಕೊಪ್ಪಳ: ಮೇ ಮಾಸಾಂತ್ಯದವರೆಗೆ ಕುಡಿವ ನೀರು ಸಮಸ್ಯೆ ಎದುರಿಸುವ ಗ್ರಾಮಗಳ ಪಟ್ಟಿ ರಚಿಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು, ಅಧಿಕಾರಿಗಳಿಗೆ ಸೂಚಿಸಿದರು.

    ನಗರದ ಜಿಲ್ಲಾಡಳಿತ ಭವನದ ಕೆ-ಸ್ವಾನ್ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
    ಈಗಾಗಲೇ ಕೈಗೊಂಡಿರುವ ಕುಡಿವ ನೀರಿನ ಕಾಮಗಾರಿಗಳನ್ನು ವಾರದೊಳಗೆ ಪೂರ್ಣಗೊಳಿಸಬೇಕು. ಬೋರ್‌ವೆಲ್ ಮೇಲೆ ಅವಲಂಬಿತವಾಗಿರುವ ಗ್ರಾಮ, ವಾರ್ಡ್ ಮೇ ಅಂತ್ಯದವರೆಗೆ ಸಮಸ್ಯೆ ಎದುರಿಸುವ ಗ್ರಾಮಗಳ ಪಟ್ಟಿ ಮಾಡಬೇಕು. ಗ್ರಾಪಂ, ತಾಪಂ, ತಹಸೀಲ್ದಾರ್, ನಗರ, ಸ್ಥಳೀಯ ಸಂಸ್ಥೆ ಮುಖ್ಯಸ್ಥರು ಟಾಸ್ಕ್‌ಫೋರ್ಸ್ ಸಮಿತಿ ಸಭೆ ನಡೆಸಿ ಪರಿಹಾರ ಕೈಗೊಳ್ಳಬೇಕು. ಕುಡಿವ ನೀರಿನ ಮೂಲ ಪರಿಶೀಲಿಸಿ ಪೂರೈಕೆಗೆ ಅಡಚಣೆ ಇದ್ದಲ್ಲಿ ಸರಿಪಡಿಸಬೇಕು. ಶುದ್ಧ ನೀರು ಮಾತ್ರ ಕುಡಿಯಲು ಪೂರೈಸಬೇಕು. ಬೇಜವಾಬ್ದಾರಿ ತೋರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಸಿದರು.

    ಕನಕಗಿರಿ ಪಪಂ ಮುಖ್ಯಾಧಿಕಾರಿ, ಪಟ್ಟಣದ ಕೆರೆ ತುಂಬಿದ್ದು ಸಮಸ್ಯೆ ಇಲ್ಲವೆಂದರು. ತಾಪಂ ಇಒ ಈ ತಿಂಗಳಲ್ಲಿ ಐದು, ಮೇನಲ್ಲಿ 9 ಗ್ರಾಮಗಳಲ್ಲಿ ಸಮಸ್ಯೆಯಾಗಬಹು ಎಂದರು. ಗಂಗಾವತಿ ನಗರಕ್ಕೆ ತುಂಗಭದ್ರಾ ನದಿಯಿಂದ ಸಿದ್ದಿಕೇರಿ ಜಾಕ್‌ವೆಲ್ ಮೂಲಕ ನೀರು ಪೂರೈಕೆಯಾಗುತ್ತಿದೆ ಎಂದು ಗಂಗಾವತಿ ನಗರಸಭೆ ಪೌರಾಯುಕ್ತರು ತಿಳಿಸಿದರು. ಗ್ರಾಮೀಣ ಭಾಗದಲ್ಲಿ 7 ಗ್ರಾಮಗಳಲ್ಲಿ ಸಮಸ್ಯೆಯಾಗುವುದೆಂದರು. ಕುಷ್ಟಗಿ ತಾಲೂಕಿನಲ್ಲಿ 8, ಕಾರಟಗಿ 4, ಕುಕನೂರು ತಾಲೂಕಿನ 5 ಗ್ರಾಮಗಳಲ್ಲಿ ಸಮಸ್ಯೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದರು. ಪರ್ಯಾಯ ಕ್ರಮ ಕೈಗೊಳ್ಳಲು ಡಿಸಿ ತಿಳಿಸಿದರು. ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ. ಕಡಿ, ಸಹಾಯಕ ಆಯುಕ್ತ ಬಸವಣ್ಣಪ್ಪ ಕಲಶೆಟ್ಟಿ ಇತರರಿದ್ದರು.

    ಅಧಿಕಾರಿಗಳು ದುರಸ್ತಿಯಲ್ಲಿರುವ ಶುದ್ಧ ಕುಡಿವ ನೀರು ಘಟಕಗಳನ್ನು ರಿಪೇರಿ ಮಾಡಿಸಬೇಕು. ಬೋರ್‌ವೆಲ್ ಮೇಲೆ ಅವಲಂಬನೆಯಾಗಿರುವ ಗ್ರಾಮಗಳಲ್ಲಿ ಪರ್ಯಾಯ ಕ್ರಮಕೈಗೊಳ್ಳಬೇಕು.
    ರಾಹಲ್ ರತ್ನಂ ಪಾಂಡೆಯ ಜಿಪಂ ಸಿಇಒ, ಕೊಪ್ಪಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts