More

    ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಏ.26 ಮತದಾನ

    ನಿರ್ಧಾರವಾಗಲಿದೆ ಇಪ್ಪತ್ತು ಅಭ್ಯರ್ಥಿಗಳ ಹಣೆಬರಹ
    ಮತದಾನ ಹೆಚ್ಚಿಸಲು ೫೪ ವಿಶೇಷ ಮತಗಟ್ಟೆಗಳ ಸ್ಥಾಪನೆ
    ವೆಬ್‌ಕಾಸ್ಟಿಂಗ್,ಮೈಕ್ರೋ ಅಬ್ಸರ್‌ವರ್ ಕಣ್ಗಾವಲು

    ವಿಜಯವಾಣಿ ಸುದ್ದಿಜಾಲ ಚಿತ್ರದುರ್ಗ
    ಚಿತ್ರದುರ್ಗ ಎಸ್‌ಸಿ ಮೀಸಲು ಲೋಕಸಭಾ ಕ್ಷೇತ್ರದ ಚುನಾವಣೆ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಏ.26ರಂದು ಬೆಳಗ್ಗೆ೭ರಿಂದ ಸಂಜೆ ೬ ಗಂಟೆ ವರೆಗೆ ಮತಾದನ ಜರುಗಲಿದೆ. ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಸ್ಟರಿಂಗ್ ಕಾರ್ಯ ನಗರದ ಸರ್ಕಾರಿ ಕಲಾ ಕಾಲೇಜಿನ ಹೊಸ ಕಟ್ಟಡದಲ್ಲಿ ಗುರುವಾರ ಜರುಗಿತು. ಜಿಲ್ಲೆಯ ಇನ್ನುಳಿದ ವಿಧಾನಸಭಾ ಕ್ಷೇತ್ರಗಳ(ಆಯಾ ತಾಲೂಕು ಕೇಂದ್ರಗಳಲ್ಲಿ) ವ್ಯಾಪ್ತಿ ಯಲ್ಲೂ ಮಸ್ಟರಿಂಗ್ ಜರುಗಿತು.
    ಚಿತ್ರದುರ್ಗದಲ್ಲಿ ಸಹಾಯಕ ಚುನಾವಣಾಧಿಕಾರಿ ಎಂ.ಕಾರ್ತಿಕ್,ತಹಸೀಲ್ದಾರ್ ಡಾ.ನಾಗವೇಣಿ ಅವರು ಉಸ್ತುವಾರಿ ವಹಿಸಿದ್ದರು. ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ೨೮೮ ಮತಗಟ್ಟೆಗಳಿಗೆ೧೩೨೦ ಅಧಿಕಾರಿ,ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಶೇ.೨೦ ಹೆಚ್ಚುವರಿ ಸೇರಿ,೩೩೦ ಪಿಆರ್‌ಒ,೩೩೦ ಎಪಿಆರ್‌ಒ ಹಾಗೂ ೬೬೦ ಪಿಒ.ಗಳಿಗೆ ಎರಡು ಹಂತದಲ್ಲಿ ತರಬೇತಿ ನೀಡಲಾಗಿದೆ. ಪ್ರತಿ ಮತಗಟ್ಟೆಯಲ್ಲಿ ಪಿ ಆರ್‌ಒ,ಎಪಿಆರ್‌ಒ ಹಾಗೂ ಇಬ್ಬರು ಪಿಒಗಳು ಮತದಾನದ ಕಾರ್ಯನಿರ್ವಹಿಸಲಿದ್ದಾರೆ.
    ಮತದಾನದ ದಿನದಂದು ಬೆಳಗ್ಗೆ ೫.೪೫ಕ್ಕೆ ಕಲ್ಪಿತ ಮತದಾನ ನಡೆಸಲಾಗುತ್ತದೆ. ಬಳಿಕ ಏಳು ಗಂಟೆಗೆ ಮತದಾನ ಆರಂಭವಾಗಲಿದೆ. ಸಂಜೆ ೬ಗಂಟೆಯೊಳಗೆ ಯಾರು ಮತಗಟ್ಟೆ ಆವರಣದಲ್ಲಿ ಇರುತ್ತಾರೋ ಅಂಥವರಿಗೆ ಟೋಕನ್ ಕೊಡುವ ಮೂಲಕ ಸಮಯ ಮೀರಿದರೂ ಮತದಾನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಆದರೆ ಮತದಾರರು ಮತದಾನ ಮುಕ್ತಾಯವಾಗುವ ಸಂಜೆ ೬ರೊಳಗೆ ಮತಗಟ್ಟೆ ಆವರಣದೊಳಗೆ ಇರಬೇಕು,ಆನಂತರ ಬಂದವರಿಗೆ ಅವಕಾಶ ಸಿಗದು.
    ನಗರದ ಮಸ್ಟರಿಂಗ್ ಕೇಂದ್ರಕ್ಕೆ ಜಿಲ್ಲಾ ಚುನಾವಣಾಧಿಕಾರಿ ಡಿಸಿ ಟಿ.ವೆಂಕಟೇಶ್ ಪರಿಶೀಲನೆ ನಡೆಸಿದರು. ಚುನಾವಣೆ ಆಯೋಗದ ಕೈಪಿಡಿಯ ಚೆಕ್‌ಲೀಸ್ಟ್ನಂತಯೇ ಮತಗಟ್ಟೆಗಳಿಗೆ ತೆರಳುವ ಅಧಿಕಾರಿ ಹಾಗೂ ಸಿಬ್ಬಂದಿಗೆ ಇವಿಎಂ,ಮತದಾರಪಟ್ಟಿ,ಉಮೇದುವಾರರ ಪಟ್ಟಿ,ಪಿಆರ್‌ಒ ದಿನಚರಿ,ವರದಿ ನಮೂನೆ,ಶಾಯಿ,ಕಂಪಾರ್ಟ್ಮೆAಟ್,ಭಾವುಟ ಮತ್ತಿತರ ಸ್ಟೇಷನರಿ ಕಿಟ್‌ಗಳನ್ನು ಒದಗಿಸಲಾಯಿತು.
    ೨೦ ಅಭ್ಯರ್ಥಿಗಳು
    ಈ ಬಾರಿಯ ಚುನಾವಣೆ ಕಣದಲ್ಲಿ ಇಬ್ಬರು ಮಹಿಳೆಯರ ಸಹಿತ ೨೦ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇದರೊಂದಿಗೆ ನೋಟಾವೂ ಇರುತ್ತದೆ. ಹಾಗಾಗಿ ಮತಗಟ್ಟೆ ಸಿಬ್ಬಂದಿಗೆ ೨ ಬ್ಯಾಲೆಟ್‌ಯೂನಿಟ್,ಒಂದು ಕಂಟ್ರೋಲ್‌ಯೂನಿನಿಟ್ ಹಾಗೂ ಒಂದು ವಿವಿಪ್ಯಾಟ್‌ನ್ನು ಒದಗಿಸಲಾಗಿತ್ತು. ಮತದಾನ ಪ್ರಕ್ರಿಯೆ ಮುಗಿದ ನಂತರ ಏ.೨೬ ರಂದು ಸಂಜೆ ನಗರದ ಸರ್ಕಾರಿ ಕಲಾ ಕಾಲೇಜಿನ ಹೊಸ ಕಟ್ಟಡದ ಡಿ ಮಸ್ಟರಿಂಗ್ ನಡೆಯಲಿದೆ. ಮಸ್ಟರಿಂಗ್ ವೇಳೆ ಅಧಿಕಾ ರಿ,ಸಿಬ್ಬಂದಿಗಾಗಿ ಉಪಹಾರ,ಊಟದ ವ್ಯವಸ್ಥೆ ಮಾಡಲಾಗಿತ್ತು. ಮತಗಟ್ಟೆಗಳಿಗೆ ತೆರಳಲು ೪೪ ಕೆಎಸ್‌ಆರ್‌ಟಿಸಿ ಬಸ್,೯ ಮಿನಿ ಹಾಗೂ ೫ ಜೀಪುಗಳನ್ನು ಸಿದ್ಧಪಡಿಸಲಾಗಿತ್ತು.

    ವೆಬ್‌ಕಾಸ್ಟಿಂಗ್
    ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯ ೧೬೬೧ ಮತಗಟ್ಟೆಗಳ ಪೈಕಿ ೯೧೩ ವೆಬ್‌ಕಾಸ್ಟಿಂಗ್ ಹಾಗೂ ೩೩೯ ಮೈಕ್ರೋ ಅಬ್ಸರ್‌ವರ್‌ಗಳನ್ನು ನೇಮಕ ಮಾಡಲಾಗಿದೆ. ಕ್ಷೇತ್ರ ವ್ಯಾಪ್ತಿಯ ಒಟ್ಟು ೨೧೬೮ ಮತಗಟ್ಟೆಗಳ ಪೈಕಿ ೧೧೬೭ರಲ್ಲಿ ವೆಬ್‌ಕಾಸ್ಟಿಂಗ್,೩೮೬ರಲ್ಲಿ ಮೈಕ್ರೋ ಅಬ್ಸರ್‌ವರ್‌ಗಳನ್ನು ನೇಮಕ ಮಾಡಲಾಗಿದೆ.

    ಮಹಿಳೆಯರೇಅಧಿಕ
    ಕ್ಷೇತ್ರ ವ್ಯಾಪ್ತಿಯ ೧೮೫೬೮೭೬ ಮತದಾರರು ಇದ್ದಾರೆ. ಇವರಲ್ಲಿ ಪುರುಷರು ೯೨೫೫೪೩ ಹಾಗೂ ೯೩೧೨೨೯ ಮಹಿಳಾ ಹಾಗೂ ೧೦೪ ಇತರೆ ಮತದಾರರು ಇದ್ದಾರೆ.

    ೫೪ ವಿಶೇಷ ಮತಗಟ್ಟೆಗಳು
    ಮತದಾನದ ಪ್ರಮಾಣ ಹೆಚ್ಚಿಸಲು ಜಿಲ್ಲಾದ್ಯಂತ ೫೪ ಮತಗಟ್ಟೆ ಕೇಂದ್ರಗಳನ್ನುವಿವಿಧ ಮಾದರಿಗಳಲ್ಲಿ ಸಿಂಗರಿಸಲಾಗಿದೆ. ಒಂದು ವಿಧಾನಸಭಾ ಕ್ಷೇತ್ರಕ್ಕೆ ತಲಾ ಐದರಂತೆ ಸಖಿ ಮತಗಟ್ಟೆಗಳು, ತಲಾಒಂದೊA ದರಂತೆ ಅಂಗವಿಕಲ,ಯುವ,ಎಥ್ನಿಕ್ ಹಾಗೂ ಥೀಮ್ ಬೇಸ್ ಮತಗಟ್ಟೆಗಳನ್ನು ಸಜ್ಜಗೊಳಿಸಲಾಗಿದೆ. ಚಿತ್ರದುರ್ಗ ನಗರದ ಸರಸ್ವತಿ ಕಾನೂನು ಕಾಲೇಜು ಮತಗಟ್ಟೆಗೆ ಕೋಟೆ ಮಾದರಿಯ ಮೆರಗನ್ನುನೀಡಲಾಗಿದೆ.

    ನೆರಳಿನ ವ್ಯವಸ್ಥೆ
    ಬೇಸಿಗೆ ತಾಪಮಾನ ತೀವ್ರವಾಗಿರುವ ಹಿನ್ನೆಲೆಯಲ್ಲಿ ಮತದಾರರಿಗೆ ನೆರಳಿನ ವ್ಯವಸ್ಥೆ ಹಾಗೂ ಅಗತ್ಯ ಮೂಲ ಸೌಕರ್ಯಗಳನ್ನೂ ಕಲ್ಪಿಸಲಾಗಿದೆ. ಮತಗಟ್ಟೆಗಳ ಹೊರಗೆ ಶಾಮಿಯಾನ/ತೆಂಗಿನಗರಿಯ ಚಪ್ಪರಕ್ಕೆ ವ್ಯವಸ್ಥೆ ಮಾಡಲಾಗಿದೆ.

    ಮೊಬೈಲ್‌ಗೆ ನಿರ್ಬಂಧ
    ಮತದಾರರು ಮತಗಟ್ಟೆಯೊಳಗೆ ತಮ್ಮ ಮೊಬೈಲ್‌ಪೋನ್‌ಗಳನ್ನು ತೆಗೆದುಕೊಂಡು ಹೋಗುವಂತಿಲ್ಲ. ಮತದಾರರ ಗುರುತಿನ ಚೀಟಿ ಅಥವಾ ಪೋಟೊಇರುವ ವಿವಿಧ ದಾಖಲೆಗಳನ್ನು ಮತದಾನ ಮಾಡಲು ಪರ್ಯಾಯವಾಗಿಬಳಸಬಹುದು.
    ಮತದಾನ ಪೂರ್ಣಬಳಿಕ ಈಗಾಗಲೇ ನಿಗದಿ ಪಡಿಸಿರುವ ಜಿಲ್ಲೆಯ ಆರು ತಾಲೂಕು ಕೇಂದ್ರಗಳ ಸ್ಥಳಗಳಲ್ಲಿ ಡಿ-ಮಸ್ಟರಿಂಗ್ ನಡೆಯಲಿದೆ. ಬಳಿಕ ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜು ಹೊಸ ಕಟ್ಟಡದಲ್ಲಿರುವ ಸ್ಟಾçಂಗ್‌ರೂAಗಳಲ್ಲಿ ಮತಯಂತ್ರಗಳನ್ನು ಭದ್ರಪಡಿಸಲಾಗುತ್ತದೆ. ಈ ಕೇಂದ್ರಕ್ಕೆ ಸಿಆರ್‌ಪಿಎಫ್ ಸಹಿತ ಪೊಲೀಸ್ ಸರ್ಪಗಾವಲು ಇರುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts