More

    ಜಿಲ್ಲೆಗೆ ಕೇರಳದ ಕ್ರಿಸ್ಪ್ ತಂಡ ಭೇಟಿ

    ಕೊಪ್ಪಳ: ಜಿಪಂ ವ್ಯಾಪ್ತಿಯ ಗ್ರಾಪಂಗಳಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಅನುಷ್ಠಾನಗೊಂಡ ಕಾರ್ಯಕ್ರಮಗಳನ್ನು ಅವಲೋಕಿಸಲು ಕೇರಳದ ಕ್ರಿಸ್ಪ್ ತಂಡ ಸೋಮವಾರ ಜಿಲ್ಲೆಗೆ ಭೇಟಿ ನೀಡಿತು.

    ಮೊದಲಿಗೆ ಜಿಲ್ಲಾಡಳಿತ ಭವನದ ಜಿಪಂ ಸಭಾಂಗಣದಲ್ಲಿ ಸಿಇಒ ಫೌಜಿಯಾ ತರನ್ನುಮ್‌ರಿಂದ ಮಾಹಿತಿ ಪಡೆಯಿತು. ಆರೋಗ್ಯ ಸೇವೆ ಒದಗಿಸುವಲ್ಲಿ ಗ್ರಾಪಂಗಳ ಪಾತ್ರ, ಗ್ರಾಮೀಣ ಗ್ರಂಥಾಲಯಗಳ ನಿರ್ವಹಣೆ, ಗ್ರಾಪಂ ಮತ್ತು ಸ್ವ-ಸಹಾಯ ಗುಂಪುಗಳ ಸಮನ್ವಯತೆ, ನರೇಗಾ ಯೋಜನೆಯಡಿ ಶಿಶು ಪಾಲನಾ ಕೇಂದ್ರ, ಗ್ರಾಮೀಣ ಕ್ರೀಡೆಗಳಲ್ಲಿ ಇಲಾಖೆ ಸಹಯೋಗದ ಕುರಿತು ಜಿಪಂ ಸಿಇಒ, ಪರಿಪೂರ್ಣ ವಿವರ ನೀಡಿತು. ಬಳಿಕ ಕ್ರಿಸ್ಪ್ ತಂಡವು ಕುಕನೂರು ತಾಲೂಕಿನ ಮಂಗಳೂರು, ಮಸಬಹಂಚಿನಾಳ, ಬೇವೂರ, ಕಿನ್ನಾಳ, ಇಟಗಿ ಗ್ರಾಪಂಗಳಿಗೆ ತೆರಳಿ ಸದಸ್ಯರೊಂದಿಗೆ ಸಂವಾದ ನಡೆಸಿತು.

    ಅನುಷ್ಠಾನಗೊಂಡ ಕಾಮಗಾರಿಗಳ ಸ್ಥಳಕ್ಕೆ ಭೇಟಿ ನೀಡಿ, ಮಾಹಿತಿ ಸಂಗ್ರಹಿಸಿತು. ಕ್ರಿಸ್ಪ್ ತಂಡದ ಜಗಜೀವನ್, ಕೇಶವ್ ನಾಯರ್, ಕರ್ನಾಟಕದ ಸದಸ್ಯರಾದ ಡಾ.ಲಲಿತಾ ಪುಲವರ್ತಿ, ಜಿಪಂ ಉಪಕಾರ್ಯದರ್ಶಿ ಸಮೀರ್ ಮುಲ್ಲಾ, ಯೋಜನಾ ನಿರ್ದೇಶಕ ಟಿ.ಕೃಷ್ಣಮೂರ್ತಿ, ಮುಖ್ಯ ಲೆಕ್ಕಾಧಿಕಾರಿ ಅಮೀನ್ ಅತ್ತಾರ, ಅಂದಾಜು ಮತ್ತು ಮೌಲ್ಯ ಮಾಪನಾಧಿಕಾರಿ ಕುಂಬಲಯ್ಯ, ಡಿಡಿಪಿಐ ಎಂ.ರೆಡ್ಡೇರ್, ಪಶು ಇಲಾಖೆ ಉಪನಿರ್ದೇಶಕ ಡಾ.ಎಚ್.ನಾಗರಾಜ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಪದ್ಮಾವತಿ ಜಿ., ಡಿಎಚ್‌ಒ ಡಾ.ಅಲಕಾನಂದ ಮಳಗಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts