More

    ಒಳ ಮೀಸಲಾತಿಗೆ ಎಲ್ಲರ ಒಪ್ಪಿಗೆ ಇಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ

    ಕೊಪ್ಪಳ: ನ್ಯಾ.ಸದಾಶಿವ ಆಯೋಗ ವರದಿಯಂತೆ ಒಳ ಮೀಸಲಾತಿಗೆ ಎಲ್ಲರ ಒಮ್ಮತವಿಲ್ಲ. ಲಂಬಾಣಿ, ಭೋವಿ ಸಮುದಾಯಗಳು ವಿರೋಧ ಮಾಡುತ್ತಿದ್ದಾರೆ. ಹೀಗಾಗಿ ಒಳಮೀಸಲಾತಿ ನೀಡುವುದು ಕಷ್ಟವಾಗಲಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

    ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಂವಿಧಾನದಲ್ಲಿ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ನೀಡಲಾಗಿದೆ. ಶೇ.50 ನೀಡಬೇಕೆಂದಿದೆ. ತಮಗೆ ಬೇಕಾದವರಿಗೆ ಮೀಸಲಾತಿ ತೆಗೆಯುತ್ತೇವೆಂದು ಹೇಳಲು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಯಾರು ? ಅವರೇನು ಕೋರ್ಟಾ? ಬಿಜೆಪಿಗರು ಬಾಯಿ ಬಿಟ್ಟರೆ ಸುಳ್ಳು ಹೇಳುತ್ತಾರೆ. ಅವರ‌್ಯಾರೂ ಸ್ವಾತಂತ್ರೃಕ್ಕಾಗಿ ಹೋರಾಡಿದವರಲ್ಲ. ದೇಶ ವಿಭಜನೆಯಾಗಬೇಕೆಂದು 1937ರಲ್ಲಿ ಅಲಹಬಾದ್‌ನಲ್ಲಿ ನಡೆದ ಹಿಂದು ಮಹಾಸಭೆಯಲ್ಲಿ ಸಾವರ್ಕರ್ ಹೇಳಿದ್ದರು. ಗಾಂಧೀಜಿಯನ್ನು ಕೊಂದವರನ್ನು ಪೂಜಿಸುವವರಿಂದ ನಾವು ಬುದ್ಧಿ ಹೇಳಿಸಿಕೊಳ್ಳುವ ಅಗತ್ಯವಿಲ್ಲವೆಂದು ಟಾಂಗ್ ನೀಡಿದರು.

    ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಬಡ, ಮಧ್ಯಮ ವರ್ಗದ ಜನ ಜೀವನ ನಡೆಸಲಾಗುತ್ತಿಲ್ಲ. ರೂಪಾಯಿ ಮೌಲ್ಯ ಐತಿಹಾಸಿಕ ಕುಸಿತ ಕಂಡಿದೆ. ಶೇ.40 ಪರ್ಸೆಂಟ್ ಭ್ರಷ್ಟಾಚಾರ ನಡೆಯುತ್ತಿದೆ. ಸಿಎಂ ಬೊಮ್ಮಾಯಿ ದಾಖಲೆ ಕೇಳುತ್ತಾರೆ. ನ್ಯಾಯಾಂಗ ತನಿಖೆ ನಡೆಸಿದಲ್ಲಿ ಬಹಿರಂಗವಾಗಲಿದೆ. ನಾನು ಸಿಎಂ ಆಗಿದ್ದಾಗ ಡಿಸಿ ಡಿ.ಕೆ.ರವಿ, ಡಿವೈಎಸ್ಪಿ ಗಣಪತಿ, ಪರೇಶ್ ಮೆಸ್ತಾ, ಸೌಜನೃ ಅತ್ಯಾಚಾರ ಪ್ರಕರಣಗಳಲ್ಲಿ ಆರೋಪ ಕೇಳಿ ಬಂದಾಗ ದಾಖಲೆ ಕೇಳಲಿಲ್ಲ. ಸಿಬಿಐ ತನಿಖೆಗೆ ಒಪ್ಪಿಸಿದೆ. ಆಗ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ತನಿಖೆ ನಡೆದು ಸತ್ಯ ಹೊರ ಬಂತು. ಈಶ್ವರಪ್ಪ ವಿರುದ್ಧ ಗುತ್ತಿಗೆದಾರ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡ. ಅವರು ಸಚಿವಸ್ಥಾನಕ್ಕೆ ರಾಜೀನಾಮೆ ನೀಡಿದರು ಅಷ್ಟಕ್ಕೆ ಎಲ್ಲ ಮುಗಿಯಿತು ಎಂದು ಟೀಕಿಸಿದರು.

    ರಾಹುಲ್ ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3570 ಕಿಮೀ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ರಾಜ್ಯದಲ್ಲಿ 21 ದಿನ 510 ಕಿಮೀ ಯಾತ್ರೆ ನಡೆಯಲಿದೆ. ಅ.15ರಂದು ಬಳ್ಳಾರಿಯಲ್ಲಿ ಸಾರ್ವಜನಿಕರ ಸಮಾವೇಶ ನಡೆಯಲಿದೆ. ಐದು ಲಕ್ಷಕ್ಕೂ ಅಧಿಕ ಜನರು ಸೇರಿ ಸಮಾವೇಶ ಯಶಸ್ವಿಗೊಳಿಸಲಿದ್ದಾರೆ.
    | ಸಿದ್ದರಾಮಯ್ಯ, ಮಾಜಿ ಸಿಎಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts