More

    ಗಂಗಾವತಿಯ ಈರಣ್ಣ ದೇವಸ್ಥಾನದ ವಾರ್ಷಿಕೋತ್ಸವ; ಗಮನ ಸೆಳೆದ ವೀರಗಾಸೆ-ಖಡ್ಗಮೇಳ

    ಗಂಗಾವತಿ: ನಗರದ ಆರಾಧ್ಯ ದೈವ ಶ್ರೀ ಈರಣ್ಣ ದೇವರ ದೇವಾಲಯದ 28ನೇ ವರ್ಷದ ಕುಂಭ ಮಹೋತ್ಸವ ಗುರುವಾರ ಜರುಗಿತು.

    ದೇಗುಲದಲ್ಲಿ ಪ್ರತಿಷ್ಠಾಪಿಸಿರುವ ಗಣೇಶ, ಈರಣ್ಣ ಮತ್ತು ವೀರಭದ್ರೇಶ್ವರ ಮೂರ್ತಿಗಳ 6ನೇ ವರ್ಷದ ಪ್ರತಿಷ್ಠಾಪನೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು. ಮೂರ್ತಿಗಳಿಗೆ ರುದ್ರಾಭಿಷೇಕ, ಹೂವಿನ ಅಲಂಕಾರ ಮತ್ತು ಭಜನಾ ಸೇವೆ ನಡೆಯಿತು.

    ಇದಕ್ಕೂ ಮುನ್ನ 108 ಕುಂಭ, ಕಲಶದೊಂದಿಗೆ ನಗರದ ಕೊಟ್ಟೂರುಬಸವೇಶ್ವರ ದೇವಾಲಯದಿಂದ ಈರಣ್ಣ ದೇವರ ದೇವಾಲಯದವರೆಗೆ ಶ್ರೀ ವೀರಭದ್ರೇಶ್ವರ ಭಾವಚಿತ್ರ ಮೆರವಣಿಗೆ ನೆರವೇರಿಸಲಾಯಿತು. ವಾಸುಕೊಳಗದ್, ಪರಗಿ ನಾಗರಾಜ್ ತಂಡದ ಖಡ್ಗಮೇಳ, ವೀರಗಾಸೆ ಪುರವಂತಿಕೆ ಜನರ ಗಮನ ಸೆಳೆಯಿತು. ಇದೇ ಸಂದರ್ಭದಲ್ಲಿ ಭಕ್ತರು ಶಸ ಹಾಕಿಸಿಕೊಳ್ಳುವ ಮೂಲಕ ಹರಕೆ ತೀರಿಸಿದರು.

    ರೇವಣಸಿದ್ದಯ್ಯಸ್ವಾಮಿ ಪೌರೋಹಿತ್ಯದಲ್ಲಿ ಸಂಪ್ರದಾಯಬದ್ಧ ಧಾರ್ಮಿಕ ಕಾರ್ಯಕ್ರಮ ಜರುಗಿದವು. ಟ್ರಸ್ಟ್ ಕಮಿಟಿ ಅಧ್ಯಕ್ಷ ಶರಣಪ್ಪ ಓಲಿ, ಪದಾಧಿಕಾರಿಗಳಾದ ವೀರಭದ್ರಪ್ಪ ಸಾಲಗುಂದಾ, ಅಕ್ಕಿ ಕೊಟ್ರಪ್ಪ, ಸುಪುತ್ರಪ್ಪ ಹಂಚಿನಾಳ್, ಪಂಪಾಪತಿ, ಮಹಾಂತೇಶ ಶಾಸಿಮಠ, ಮಂಜುನಾಥ, ಅಕ್ಕಿ ಶಿವಪ್ರಕಾಶ, ಗುರುಶಾಂತಪ್ಪ, ಕವಿತಾ ಗುರುಮೂರ್ತಿ, ದೊಡ್ಡಬಸಮ್ಮ ಗುರುವಿನಮಠ, ಅಕ್ಕಮ್ಮ ಸಿಂಗಾಪುರ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ಘಟಕದ ಸದಸ್ಯರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts