More

    ಇ-ಆಡಳಿತಕ್ಕೆ ಕಂಪ್ಯೂಟರ್ ಸಾಕ್ಷರತೆ ಅವಶ್ಯ: ಕೊಪ್ಪಳ ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ.ಕಡಿ ಹೇಳಿಕೆ

    ಕೊಪ್ಪಳ: ಇ-ಆಡಳಿತ ಅಥವಾ ಇ-ಸರ್ಕಾರಕ್ಕಾಗಿ ಕಂಪ್ಯೂಟರ್ ಸಾಕ್ಷರತೆ ಅವಶ್ಯವಿದ್ದು, ಎಲ್ಲ ನೌಕರರು ಕಂಪ್ಯೂಟರ್ ಸಾಕ್ಷರತೆ ಪರಿಕ್ಷೆಯಲ್ಲಿ ತೇರ್ಗಡೆಯಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ.ಕಡಿ ಹೇಳಿದರು.

    ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಜಿಲ್ಲಾ ತರಬೇತಿ ಸಂಸ್ಥೆ ಗುರುವಾರ ಸರ್ಕಾರಿ ನೌಕರರಿಗೆ ಆಯೋಜಿಸಿದ್ದ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಕಾಗದ ರಹಿತ ಮತ್ತು ವೇಗವಾಗಿ ಸೇವೆ ನೀಡುವ ದೃಷ್ಟಿಯಿಂದ ಇ-ಆಡಳಿತ ಪರಿಚಯಿಸಲಾಗುತ್ತಿದೆ. ಬಹುಪಾಲು ಸರ್ಕಾರಿ ಸೇವೆಗಳು ಆನ್‌ಲೈನ್‌ನಲ್ಲಿ ದೊರೆಯುತ್ತಿವೆ. ಇ-ಆಡಳಿತಕ್ಕಾಗಿ ನಿಮಗೆಲ್ಲ ಕಂಪ್ಯೂಟರ್ ಸಾಕ್ಷರತೆ ಅವಶ್ಯ. ಕಂಪ್ಯೂಟರ್ ಜ್ಞಾನವಿದ್ದಲ್ಲಿ ಸುಲಭವಾಗಿ ಸೇವೆ ನೀಡಲು ಅನುಕೂಲವಾಗಲಿದೆ.

    ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಪಾಸಾಗಿ ನಿಮ್ಮ ಒತ್ತಡ ಕಡಿಮೆ ಮಾಡಿಕೊಳ್ಳಬೇಕು. ಹಿರಿಯ ನೌಕರರು ನಿಮ್ಮ ಜ್ಞಾನದೊಂದಿಗೆ ಸರ್ಕಾರಿ ಸಾಫ್ಟವೇರ್ ಬಳಸುವುದನ್ನು ಕಲಿತುಕೊಂಡು ಸಾರ್ವಜನಿಕರಿಗೆ ಸೇವೆ ನೀಡಬೇಕು. ಜಿಲ್ಲೆಯಲ್ಲಿ ಕಂಪ್ಯೂಟರ್ ಸಾಕ್ಷರತಾ ತರಬೇತಿ ಕೇಂದ್ರದ ಅವಶ್ಯಕತೆ ಇದ್ದು, ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗುವುದು ಎಂದರು.

    ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಕೃಷ್ಣಮೂರ್ತಿ ದೇಸಾಯಿ ಮಾತನಾಡಿ, ಕಂಪ್ಯೂಟರ್ ಸಾಕ್ಷರತೆಯಲ್ಲಿ ನಮ್ಮ ಜಿಲ್ಲೆಯನ್ನು ಶೇ.100 ಸಾಕ್ಷರ ಜಿಲ್ಲೆಯನ್ನಾಗಿ ಮಾಡುವ ಉದ್ದೇಶವಿದೆ. ನೌಕರರು ಶ್ರದ್ಧೆಯಿಂದ ತರಬೇತಿ ಕಾರ್ಯಾಗಾರದ ಸದುಪಯೋಗಪಡೆದುಕೊಳ್ಳಬೇಕು. ಸೇವಾ ಅವಧಿಯಲ್ಲಿನ ಬಡ್ತಿ ಪಡೆಯಿರಿ ಎಂದು ಸಲಹೆ ನೀಡಿದರು. ಜಿಲ್ಲಾ ತರಬೇತಿ ಸಂಸ್ಥೆಯ ಉಪ ಪ್ರಾಚಾರ್ಯ ಎಂ.ಗುರುರಾಜ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts