More

    ಆತ್ಮವಿಶ್ವಾಸದಿಂದ ಗುರಿ ತಲುಪಲು ಸಾಧ್ಯ: ಕನ್ನಡ ಪ್ರಾಧ್ಯಾಪಕಿ ಕಾವೇರಿ ಬೋಲ ಅಭಿಪ್ರಾಯ

    ಅಳವಂಡಿ: ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಇದರಿಂದ ನಾಯಕತ್ವ ಗುಣ ಬೆಳೆಯುತ್ತದೆ ಎಂದು ಮುಂಡರಗಿ ಸರ್ಕಾರಿ ಪದವಿ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಕಾವೇರಿ ಬೋಲ ತಿಳಿಸಿದರು.
    ಗ್ರಾಮದ ಶ್ರೀಸಿದ್ಧೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾಲೇಜು ವಿದ್ಯಾರ್ಥಿಗಳ ಸಂಘ ಹಾಗೂ ಶಾಲಾ ಸಂಸತ್ ಉದ್ಘಾಟಿಸಿ ಮಾತನಾಡಿದರು. ನಿರ್ದಿಷ್ಟ ಗುರಿ ತಲುಪಲು ಆತ್ಮವಿಶ್ವಾಸ, ಶ್ರದ್ಧ, ಪ್ರಯತ್ನ, ಪ್ರಾಮಾಣಿಕತೆ ಅವಶ್ಯ. ಅಂಕ ಗಳಿಕೆ ಬದಲು ಮುಂದಿನ ಭವಿಷ್ಯಕ್ಕಾಗಿ ಓದಬೇಕು ಎಂದು ಸಲಹೆ ನೀಡಿದರು. ಬಳಿಕ ವಿದ್ಯಾರ್ಥಿ ಸಂಘ ಹಾಗೂ ಶಾಲಾ ಸಂಸತ್‌ಗೆ ಆಯ್ಕೆಯಾದ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ನಿವೃತ್ತ ಪ್ರಾಚಾರ್ಯ ಕೆ.ಎಚ್.ಬೇಲೂರ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಭಾರತಿ ಬೆಣಕಲ್, ಉಪಾಧ್ಯಕ್ಷೆ ಶಂಕ್ರಮ್ಮ ಜೋಗಿನ, ಪ್ರಾಚಾರ್ಯ ಚಂದ್ರಶೇಖರ ದೊಡ್ಡಮನಿ, ನಿವೃತ್ತ ಪ್ರಾಚಾರ್ಯ ಡಿ.ಜಿ.ಲಕ್ಕನಗೌಡರ, ಪ್ರಮುಖರಾದ ಭುಜಂಗಸ್ವಾಮಿ ಇನಾಮದಾರ, ವಿಜಯಲಕ್ಷ್ಮೀ ಹಿರೇಮಠ, ಎಂ.ಎಸ್.ಹೊಟ್ಟಿನ, ವಿ.ಎಚ್.ಪುಲಾಶಿ, ವಿಜಯಕುಮಾರ, ಮಹಾನಂದಿ, ನವೀನ ಇನಾಮದಾರ, ಶಿಕ್ಷಕರಾದ ಸಿದ್ದು ಅಂಗಡಿ, ಶಕುಂತಲಾ, ವಾಸವಿ, ಮಹೇಶ, ವಿಜಯ, ಗಾಯತ್ರಿ, ಅಂಬರೇಶ, ರಾಚಯ್ಯ, ರಾಜಶೇಖರ, ನೀಲಪ್ಪ, ಚನ್ನಯ್ಯಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts