More

    ವೇಗ ಪಡೆದ ಎಡದಂಡೆ ಕಾಲುವೆ ದುರಸ್ತಿ ಕಾಮಗಾರಿ: ಇನ್ನೆರಡು ದಿನದಲ್ಲಿ ನೀರು ಬಿಡುವ ಸಾಧ್ಯತೆ

    ಕೊಪ್ಪಳ: ತಾಲೂಕಿನ ಮುನಿರಾಬಾದ್ ತುಂಗಭದ್ರಾ ಎಡದಂಡೆ ಕಾಲುವೆ ದುರಸ್ತಿ ಕಾರ್ಯ ವೇಗ ಪಡೆದಿದ್ದು, ಕೊಪ್ಪಳ ಹಾಗೂ ರಾಯಚೂರು ಭಾಗದ ಜನಪ್ರತಿನಿಧಿಗಳು, ರೈತ ಮುಖಂಡರು ಶುಕ್ರವಾರ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದರು.

    ಮರ ತೆರವುಗೊಳಿಸಿದ್ದು, ಕಾಲುವೆ ನೀರು ಖಾಲಿ ಮಾಡಲಾಗುತ್ತಿದೆ. ಕುಸಿದು ಸಡಿಲಗೊಂಡ ಮಣ್ಣನ್ನು ತೆಗೆದು ಹೊಸದಾಗಿ ಒಡ್ಡು ನಿರ್ಮಿಸಬೇಕಿದೆ. ನೆಲ ಒಣಗಬೇಕಿದ್ದು, ನೀರು ಸಂಪೂರ್ಣ ಖಾಲಿಯಾದ ನಂತರ ಕೆಲಸ ಆರಂಭಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಕೆಲಸಕ್ಕೆ ಬೇಕಾದ ಮರಳು, ಮಣ್ಣು, ಸಿಮೆಂಟ್ ಸಂಗ್ರಹಿಸಲಾಗುತ್ತಿದೆ. ಜಲಾಶಯ ನಿರ್ಮಾಣದ ವೇಳೆ ಕಾಲುವೆ ಕಟ್ಟಿದ್ದು, ಆಧುನಿಕ ತಂತ್ರಜ್ಞಾನ ಬಳಸಿಲ್ಲ. ಹೀಗಾಗಿ ಹಳೆಯ ಮಾದರಿಯಲ್ಲಿ ನಿರ್ಮಿಸಬೇಕಿದೆ. ಜಲಾಶಯದ ಮುಂಭಾಗದಲ್ಲೇ ಕಾಲುವೆ ಒಡೆದಿದ್ದು, ನೆಲಮಟ್ಟದಿಂದ ಮೇಲ್ಭಾಗದವರೆಗೆ ಮಣ್ಣಿನ ಗುಡ್ಡೆ ಹಾಕಿ ಆರ್‌ಸಿಸಿ ಕೆಲಸ ನಡೆಸಬೇಕಿದೆ.

    ಶಾಸಕರಾದ ರಾಘವೇಂದ್ರ ಹಿಟ್ನಾಳ್, ಬಸವರಾಜ ದಢೇಸುಗೂರು ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕೊನೇ ಭಾಗದ ರೈತರಿಗೆ ನೀರು ತಲುಪಲು ಎರಡು ದಿನ ಬೇಕಿದ್ದು, ಕೂಡಲೇ ಕಾಮಗಾರಿ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಕಾಡಾ ಅಧ್ಯಕ್ಷ ಬಿ.ಎಚ್.ಎಂ.ತಿಪ್ಪೇರುದ್ರಸ್ವಾಮಿ, ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಜಿಪಂ ಮಾಜಿ ಅಧ್ಯಕ್ಷ ಟಿ.ಜನಾರ್ದನ, ತಾಪಂ ಮಾಜಿ ಅಧ್ಯಕ್ಷ ಬಾಲಚಂದ್ರನ್ ಹಾಗೂ ಕೊಪ್ಪಳ, ರಾಯಚೂರು ಜಿಲ್ಲೆ ರೈತ ಮುಖಂಡರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts