More

    ಧರಣಿಗೆ ಮಣಿದ ಅಧಿಕಾರಿಗಳು

    ಕೊಪ್ಪಳ: ತಾಲೂಕಿನ ಹಿರೇಬಗನಾಳ, ಕಾಸನಕಂಡಿ, ಹಾಲವರ್ತಿ, ಅಲ್ಲಾನಗರ, ಚಿಕ್ಕಬಗನಾಳ ರಸ್ತೆ ರಿಪೇರಿಗೆ ಆಗ್ರಹಿಸಿ ಸೋಮವಾರ ಗ್ರಾಮಸ್ಥರು ಹಮ್ಮಿಕೊಂಡಿದ್ದ ಧರಣಿ ಸ್ಥಳಕ್ಕೆ ಅಧಿಕಾರಿಗಳು ಆಗಮಿಸಿ ಕಾಮಗಾರಿ ನಡೆಸುವ ಭರವಸೆ ನೀಡಿದರು. ಇದರ ಬೆನ್ನಲ್ಲೇ ಧರಣಿ ವಾಪಸ್ ಪಡೆದ ಜನರು ಕಾಮಗಾರಿ ಆರಂಭಿಸಲು ಒತ್ತಾಯಿಸಿದರು.

    ಇದನ್ನೂ ಓದಿರಿ: ರಸ್ತೆ ರಿಪೇರಿಯಾಗುವವರೆಗೂ ಮದ್ವೆಯಾಗಲ್ಲ ಎಂದು ಶಿಕ್ಷಕಿ ಶಪಥ: ಓಡೋಡಿ ಬಂದ ದಾವಣಗೆರೆ ಜಿಲ್ಲಾಧಿಕಾರಿ

    ಕೊಪ್ಪಳದಿಂದ ಹಾಲವರ್ತಿ, ಅಲ್ಲಾನಗರ, ಬಗನಾಳ, ಕಾಸನಕಂಡಿ ಮಾರ್ಗವಾಗಿ ಹೊಸಪೇಟೆ ಸಂಪರ್ಕಿಸುವ ರಸ್ತೆ ಹಲವು ವರ್ಷಗಳಿಂದ ಹದಗೆಟ್ಟಿದೆ. ರಿಪೇರಿ ಮಾಡುವುದಾಗಿ ಅಧಿಕಾರಿಗಳು ತಿಳಿಸುತ್ತಿದ್ದು, ಮಾಡುವ ಗೋಜಿಗೆ ಹೋಗಿಲ್ಲ. ಈ ಭಾಗದಲ್ಲಿ ಕಾರ್ಖಾನೆಗಳು ಅಧಿಕ ಸಂಖ್ಯೆಯಲ್ಲಿದ್ದು, ನಿತ್ಯ ಭಾರಿ ವಾಹನಗಳ ಓಡಾಟದಿಂದ ರಸ್ತೆ ಹಾಳಾಗಿದೆ. ಕಳೆದ 10 ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ರಸ್ತೆ ಕೆಸರು ಗದ್ದೆಯಂತಾಗಿದೆ. ಅಲ್ಲಲ್ಲಿ ದೊಡ್ಡ ಗುಂಡಿಗಳು ಬಿದ್ದಿವೆ. ಸಾರ್ವಜನಿಕರು ಜೀವ ಕೈಯಲ್ಲಿ ಹಿಡಿದು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಕಾಮಗಾರಿ ಆರಂಭಿಸಲು ಒತ್ತಾಯಿಸಿ ಸಾರ್ವಜನಿಕರು ಧರಣಿ ನಡೆಸಿದರು.

    ಸಮಸ್ಯೆ ಅರಿತ ಪೊಲೀಸರು, ಕೆಲ ಹೊತ್ತಿನಲ್ಲೇ ಸಂಬಂಧಿಸಿದ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿದರು. ಲೋಕೋಪಯೋಗಿ ಇಲಾಖೆ ಇಇ ಶಂಕರ ನಾಯಕ ಮಾತನಾಡಿ, ಹಿರೇಬಗನಾಳ ಗ್ರಾಮಸ್ಥರ ಬಹುದಿನಗಳ ಹೋರಾಟ ಇದಾಗಿದ್ದು, ಸಂಬಂಧಿಸಿದ ಗುತ್ತಿಗೆದಾರರಿಗೆ ಕಾಮಗಾರಿ ಸೋಮವಾರದಿಂದಲೇ ಆರಂಭಿಸಲು ಸೂಚಿಸಿರುವೆ. ಕಾಮಗಾರಿ ಮುಗಿವವರೆಗೆ ಜನರು ಗುತ್ತಿಗೆದಾರರು ಹಾಗೂ ಅಧಿಕಾರಿಗಳೊಡನೆ ಸಹಕರಿಸಬೇಕೆಂದು ಮನವಿ ಮಾಡಿದರು.

    ಬಗನಾಳ ಗ್ರಾಮದ ಮುಖಂಡ ಗವಿಸಿದ್ದಪ್ಪ ಬೋರಿನ್, ಗವಿಸಿದ್ದಪ್ಪ ಹೂಗಾರ, ಸಿಪಿಐ ಮಹಾಂತೇಶ ಸಜ್ಜನ್, ಎಇಇ ಶ್ಯಾಮಣ್ಣ, ಪಿಎಸ್‌ಐ ಅಮರೇಗೌಡ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts