More

    ಕೆರೆ ಭರ್ತಿ ಮಾಡದಿದ್ದರೆ ಹೋರಾಟ ಎಂದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ

    ಕೊಪ್ಪಳ: ಸಮಾನಾಂತರ ಜಲಾಶಯ ನಿರ್ಮಿಸುವುದರ ಜತೆಗೆ 15 ಕರೆಗಳ ಭರ್ತಿ ಮಾಡಬೇಕು. ಇದರಿಂದ 42 ಟಿಎಂಸಿ ನೀರು ಸಂಗ್ರಹವಾಗುವಷ್ಟು ಸಾಮರ್ಥ್ಯ ವೃದ್ಧಿಯಾಗುತ್ತದೆ ಎಂದು ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ ಹೇಳಿದರು.

    ಒಣ ಬೇಸಾಯ ಪ್ರದೇಶವಾದ ಕೊಪ್ಪಳ, ಭಾಗಶಃ ಗಂಗಾವತಿ, ಕನಕಗಿರಿ ಮಸ್ಕಿ ಹಾಗೂ ಲಿಂಗಸುಗೂರು ವ್ಯಾಪ್ತಿಗೆ ಅನುಕೂಲವಾಗುತ್ತದೆ. ಕೊಪ್ಪಳ ವಿಧಾನಸಭಾ ಕ್ಷೇತ್ರದ ಹಿರೇಬಗನಾಳದಿಂದ ಪ್ರಾರಂಭವಾಗಿ ಗಿಣಿಗೇರಾ, ಗಬ್ಬೂರು, ಗುಡದಳ್ಳಿ, ಬೂದಗುಂಪಾ ಹಾಗೂ ಕೆರೆಹಳ್ಳಿ ಟ್ಯಾಂಕ್, ಗಂಗಾವತಿ ಕ್ಷೇತ್ರದ ಚಿಕ್ಕಬೆಣಕಲ್, ವಿಠಲಾಪುರ, ಕನಕಗಿರಿ ಕ್ಷೇತ್ರದ ಕನಕಗಿರಿ-1, ಕನಕಗಿರಿ-2, ನವಲಿ, ಬಂಕಾಪುರ ಹಾಗೂ ಕನಕನಾಳ, ಹೊಕ್ರಾಣಿ, ಯರದಡ್ಡಿ ಹಾಗೂ ಮಸ್ಕಿ ನಾಲಾ ಸೇರಿ ಒಟ್ಟು 15 ಸಮಾನಾಂತರ ಜಲಾಶಯ ಆಗಲೇಬೇಕು. ಇದರ ಉದ್ದ 55 ಕಿ.ಮೀ ಆಗಿದೆ. ಇವುಗಳ ನಿರ್ಮಾಣದಿಂದ ಅಂದಾಜು 4 ಲಕ್ಷ ಹೆಕ್ಟೇರ್‌ಗೆ ನೀರಾವರಿ ಲಭಿಸುತ್ತದೆ. ನೀರಿನ ಒಳ ಹರಿವು 12,500 ಕ್ಯೂಸೆಕ್ ಆಗುತ್ತದೆ. ಕನಕಗಿರಿ ಭಾಗದಲ್ಲಿ ರೈತರು ಹೆಚ್ಚು ಭೂಮಿ ಕಳೆದುಕೊಳ್ಳುವುದರಿಂದ 1 ಲಕ್ಷ ಹೆಕ್ಟೇರ್ ನೀರಾವರಿ ಪ್ರದೇಶ ಆಗಲೇಬೇಕು ಎಂದು ಒತ್ತಾಯಿಸಿದರು.

    ನಾನು ಸಚಿವನಿದ್ದಾಗ 2009ರ ಫೆ.19 ರಂದು ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣದ ಮಂಜೂರಾತಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. 2009ರ ಫೆ.28 ರಂದು ಜಲ ಸಂಪಪ್ಮೂಲ ಇಲಾಖೆಯಿಂದ ಯೋಜನೆ ಸರ್ವೇ ಪ್ರಾರಂಭಿಸಲು ಅನುದಾನ ನೀಡಿತ್ತು. ಅಂದಿನ ಬಜೆಟ್‌ನಲ್ಲಿ 5800 ಕೋಟಿ ರೂ. ಬೇಡಿಕೆ ಸಲ್ಲಿಸಲಾಗಿತ್ತು. ಡಿಪಿಆರ್ ತಯಾರಿಯನ್ನೂ ಮಾಡಿಸಲಾಗಿತ್ತು. ಈ ಯೋಜನೆ ಹುಟ್ಟು ಹಾಕಿದ್ದೇ ನಾವು. ಆದರೆ, ಕೆಲವರು ಇದನ್ನು ತಮಗಷ್ಟೇ ಸೀಮಿತ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಶಿವಾರಜ ತಂಗಡಗಿ ಕುಟುಕಿದರು.

    ಶಾಸಕ ರಾಘವೇಂದ್ರ ಹಿಟ್ನಾಳ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಜುಲ್ಲುಕಾದ್ರಿ, ಜಿಪಂ ಸದಸ್ಯ ಎಸ್.ಬಿ.ನಾಗರಳ್ಳಿ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾಟನ್ ಪಾಷಾ, ನಗರಸಭೆ ಸದಸ್ಯರಾದ ಮುತ್ತು ಕುಷ್ಟಗಿ, ಅಕ್ಬರ್ ಪಾಷಾ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts