More

    ಮಾದರಿ ಗ್ರಾಮ ಅಭಿಯಾನಕ್ಕೆ ಚಾಲನೆ ನಾಳೆ

    ಅಡವಿಹಳ್ಳಿಯಲ್ಲಿ ಭೂಮಿಪೂಜೆ ನೆರವೇರಿಸಲಿರುವ ಗವಿಶ್ರೀಗಳು

    ಕೊಪ್ಪಳ: ಗವಿಮಠ ಜಾತ್ರೆ ಅಂಗವಾಗಿ ಗವಿಶ್ರೀಗಳು ನೀಡಿದ ಭರವಸೆಯಂತೆ ಈಗಾಗಲೇ ಎರಡು ಸಾಮಾಜಿಕ ಕಾರ್ಯಗಳಿಗೆ ಚಾಲನೆ ದೊರೆತಿದ್ದು, ಕುಕನೂರು ತಾಲೂಕಿನ ಅಡವಿಹಳ್ಳಿ ಮಾದರಿ ಗ್ರಾಮ ಅಭಿಯಾನದ ಅಂಗವಾಗಿ ಭೂಮಿ ಪೂಜಾ ಕಾರ್ಯಕ್ರಮ ಇದ್ದು, ಫೆ.27ರ ಬೆಳಗ್ಗೆ 10 ಗಂಟೆಗೆ ಭೂಮಿಪೂಜೆಯನ್ನು ಶ್ರೀಗಳು ನೆರವೇರಿಸಲಿದ್ದಾರೆ.

    ಪ್ರತಿ ವರ್ಷ ಜಾತ್ರೆ ಅಂಗವಾಗಿ ಒಂದಿಲ್ಲೊಂದು ಸಾಮಾಜಿಕ ಕಾರ್ಯ ಮಾಡುವ ಮೂಲಕ ಶ್ರೀಗಳು ಸಾಮಾಜಿಕ ಕ್ರಾಂತಿ ಮಾಡುತ್ತಿದ್ದಾರೆ. ಈ ವರ್ಷ ಕೋವಿಡ್ ಕಾರಣ ರಥೋತ್ಸವ ಸರಳವಾಗಿ ನಡೆಸಲಾಗಿದೆ. ಆದರೂ, ಮೂರು ಮುಖ್ಯ ಸಾಮಾಜಿಕ ಕಾರ್ಯಗಳನ್ನು ಶ್ರೀಗಳು ಹಮ್ಮಿಕೊಂಡಿದ್ದಾರೆ. ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು 24ಗಿ7 ಉಚಿತ ಗ್ರಂಥಾಲಯ ಆರಂಭಿಸಲಾಗಿದೆ. ಗಿಣಿಗೇರಿ ಕೆರೆ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಸದ್ಯ ಅಡವಿಹಳ್ಳಿ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಮುಂದಾಗಿದ್ದಾರೆ.

    ಗ್ರಾಮೋದ್ಧಾರ-ದೇಶೋದ್ಧಾರ, ಸಮೃದ್ಧ ಹಳ್ಳಿ ನಿರ್ಮಾಣಕ್ಕೆ ಒತ್ತು ಪಡಿಯೋಣ ಅಡವಿಹಳ್ಳಿ ದತ್ತು ಎಂಬ ಧ್ಯೇಯ ವಾಕ್ಯದೊಂದಿಗೆ ಯೋಜನೆ ಹಮ್ಮಿಕೊಳ್ಳಲಾಗಿದೆ. ಮುಕ್ಕುಂದ ಸ್ಟೀಲ್ಸ್ ಹಾಗೂ ಸರ್ವೋದಯ ಸಮಗ್ರ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸಹಭಾಗಿತ್ವದಲ್ಲಿ ಯೋಜನೆ ಅನುಷ್ಠಾನಗೊಳ್ಳಲಿದೆ. ಮಾದರಿ ಗ್ರಾಮದ ಕಾರ್ಯಕ್ರಮದನ್ವಯ ಅಡವಿಹಳ್ಳಿಯಲ್ಲಿ ಮೂಲಸೌಲಭ್ಯ, ಆರೋಗ್ಯ, ಶಿಕ್ಷಣ, ಸಾವಯವ ಕೃಷಿ, ಮಹಿಳಾ ಸಬಲೀಕರಣ, ಯುವ ಜನತೆಗೆ ಬೇಕಾಗುವ ಕೌಶಲ ತರಬೇತಿ ಆಯೋಜನೆ, ಹೊಗೆ ಮುಕ್ತ ಗ್ರಾಮ, ಸೋಲಾರ್ ಶಕ್ತಿಯ ಬಳಕೆ, ಹೈನುಗಾರಿಕೆ, ಕೆರೆ ನಿರ್ಮಾಣ, ಸ್ಮಾರ್ಟ್‌ಕ್ಲಾಸ್ ನಿರ್ಮಾಣ, ರಸ್ತೆ, ಚರಂಡಿ, ಮನೆಗಳ ದುರಸ್ತಿ, ಧಾರ್ಮಿಕ ಕೇಂದ್ರಗಳ ದುರಸ್ತಿ ಹಾಗೂ ಆಧುನಿಕ ಅಭಿವೃದ್ಧಿಯ ಸಂಪರ್ಕ ಸಾಧನಗಳನ್ನು ಒದಗಿಸುವ ಸುಮಾರು 50 ವಿವಿಧ ಯೋಜನೆಗಳನ್ನು ರೂಪಿಸಲಾಗಿದೆ. ಗವಿಶ್ರೀಗಳ ನೇತೃತ್ವದಲ್ಲಿ ವಿವಿಧ ಅಧಿಕಾರಿಗಳು, ಮುಖಂಡರು, ವಿವಿಧ ಗ್ರಾಮಸ್ಥರು ಭಾಗಿಯಾಗಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts