More

    ಉದ್ಯಮ ಆರಂಭಕ್ಕೆ ಉಪಾಯ, ಕೌಶಲ ಮುಖ್ಯ

    ಕೊಪ್ಪಳ: ಸ್ವಂತ ಉದ್ಯಮ ಆರಂಭಿಸಲು ಹಣವೇ ಎಲ್ಲದಕ್ಕೂ ಮುಖ್ಯವಲ್ಲ ಎಂದು ರಿಫಾ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿಸ್ (ಆರ್‌ಸಿಸಿಐ) ರಾಜ್ಯ ಅಧ್ಯಕ್ಷ ಸೈ.ಮುಮ್ತಾಜ್ ಮನ್ಸೂರಿ ಹೇಳಿದರು.

    ನಗರದ ಶಾದಿ ಮಹಲ್‌ನಲ್ಲಿ ರಿಫಾ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿಸ್ ಜಿಲ್ಲಾ ಘಟಕ ಸೋಮವಾರ ಏರ್ಪಡಿಸಿದ್ದ ಉದ್ಯೋಗ ಮತ್ತು ಸರ್ಕಾರಿ ಸೌಲಭ್ಯಗಳ ಕುರಿತ ಕಾರ್ಯಾಗಾರದ ಅಧ್ಯಕ್ಷತೆವಹಿಸಿ ಮಾತನಾಡಿದರು. ಹಣವಿಲ್ಲವೆಂಬ ಕಾರಣಕ್ಕೆ ಅನೇಕರು ಉದ್ಯಮ ಆರಂಭಿಸಲು ಹಿಂದೇಟು ಹಾಕುತ್ತಾರೆ. ಇದು ತಪ್ಪು. ಉದ್ಯಮ ಆರಂಭಕ್ಕೆ ಉಪಾಯ ಮುಖ್ಯ. ಉತ್ತಮ ಉಪಾಯವಿದ್ದರೆ ಹಣದ ಮೂಲ ಸಿಗಲಿದೆ.

    ವಸ್ತು ಮಾರಾಟ ಮಾಡಲು ಕೌಶಲ ಬೇಕು. ಜತೆಗೆ ಖರೀದಿದಾರನಿಗೆ ಅರ್ಥಮಾಡಿಸುವ ಸಾಮರ್ಥ್ಯ ಹೊಂದಿರಬೇಕು. ಯಾವುದೇ ಧರ್ಮ, ಜಾತಿ ಎಂದೆಣಿಸದೆ ಎಲ್ಲರೂ ಧೈರ್ಯದಿಂದ ಉದ್ಯಮ ಆರಂಭಕ್ಕೆ ಮುಂದಾಗಬೇಕು ಎಂದರು.

    ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ವೀರೇಂದ್ರ ಕುಮಾರ್ ಮಾತನಾಡಿ, ಬ್ಯಾಂಕ್‌ಗಳು ದುರುದ್ದೇಶದಿಂದ ಸಾಲ ನೀಡಲು ಹಿಂದೆ ಸರಿಯುವುದಿಲ್ಲ. ಇನ್ನೊಬ್ಬರ ಹಣವನ್ನು ಮತ್ತೊಬ್ಬರಿಗೆ ನೀಡುವಾಗ ಕನಿಷ್ಠ ಭದ್ರತೆ ಬೇಕು. ಸಾಲಗಾರ ತನ್ನ ಯೋಜನೆ ಬಗ್ಗೆ ಸ್ಪಷ್ಟತೆ, ಹಣದ ಬಳಕೆ, ಮರು ಪಾವತಿಗೆ ವಿಶ್ವಾಸರ್ಹನಾಗಿರಬೇಕು ಎಂದರು.

    ಜಿಲ್ಲಾ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಜಿಲ್ಲಾ ಅಧಿಕಾರಿ ಕೆ.ವೀರೇಶ, ಹ್ಯಾಂಡ್‌ಲೂಮ್ ಮತ್ತು ಟೆಕ್ಸಟೈಲ್ ಇಲಾಖೆ ಉಪನಿರ್ದೇಶಕಿ ಭಾರತಿ ಬಿದಿರಿಮಠ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಸುರೇಶ ಕೊಕರೆ ವಿವಿಧ ವಿಷಯಗಳ ಕುರಿತು ತರಬೇತಿ ನೀಡಿದರು.

    ಅಫ್ತಾಬ್ ಹುಸೇನ್ ಕುಷ್ಟಗಿ, ಶಾಹಬುದ್ದೀನ್ ಸಾಬ್, ಮೌಲಾನಾ ಮಹ್ಮದ್ ಯಾಹಯಾ ನಬೀಲ್ ಉಮ್ರಿ, ಜಿಲ್ಲಾಧ್ಯಕ್ಷ ಶಾಹೀದ್ ಹುಸೇನ್ ತಹಶೀಲ್ದಾರ, ಮಹಮ್ಮದ್ ಖಲೀಮ್ ಖಾನ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts