More

    ಹನುಮಮಾಲಾ ನಿಮಿತ್ತ ವಿವಿಧ ಸಮಿತಿ ರಚನೆ

    ಕೊಪ್ಪಳ: ಗಂಗಾವತಿಯ ಅಂಜನಾದ್ರಿ ಬೆಟ್ಟದಲ್ಲಿ ಡಿ.4,5 ರಂದು ನಡೆಯಲಿರುವ ಹನುಮಮಾಲಾ ಕಾರ್ಯಕ್ರಮದ ಸಿದ್ಧತೆಗಾಗಿ ಈಗಾಗಲೇ ಹಲವಾರು ಸುತ್ತಿನ ಸಭೆಗಳನ್ನು ನಡೆಸಿರುವ ಜಿಲ್ಲಾಧಿಕಾರಿ ಎಂ.ಸುಂದರೇಶಬಾಬು ವಿವಿಧ ಸಮಿತಿ ರಚಿಸಿ ಆದೇಶ ಹೊರಡಿಸಿದ್ದಾರೆ.

    ಆಂಜನೇಯಸ್ವಾಮಿ ದೇವಸ್ಥಾನದ ಆಡಳಿತಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮೂಲ ಸೌಕರ್ಯ ಸಮಿತಿ ರಚಿಸಲಾಗಿದೆ. ಆಹಾರ ಹಾಗೂ ನಾಗರಿಕರ ಸರಬರಾಜು ಇಲಾಖೆ ಉಪನಿರ್ದೇಶಕರು ಆಹಾರ ಸಮಿತಿ, ಲೋಕೋಪಯೋಗಿ ಇಲಾಖೆ ಕೊಪ್ಪಳ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ರಸ್ತೆ ನಿರ್ವಹಣಾ ಸಮಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಆರೋಗ್ಯ ಸಮಿತಿ, ಕೊಪ್ಪಳ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಸ್ವಚ್ಛತಾ ಸಮಿತಿ, ಕನಕಗಿರಿ ತಾಪಂ ಇಒ ಪ್ರಸಾದ ವಿತರಣಾ ಸಮಿತಿ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಸಾರಿಗೆ ಸಮಿತಿ, ಕಲಬುರ್ಗಿವಿದ್ಯುತ್ ಸರಬರಾಜು ಕಂಪನಿ ಗಂಗಾವತಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ವಿದ್ಯುತ್ ಸಮಿತಿ, ಗಂಗಾವತಿ ಪೊಲೀಸ್ ಉಪ ಅಧೀಕ್ಷಕರ ಭದ್ರತಾ ಸಮಿತಿ, ಜಿಲ್ಲಾ ವಾರ್ತಾಧಿಕಾರಿ ಪ್ರಚಾರ ಮತ್ತು ಮಾಧ್ಯಮ ಸಮಿತಿ, ಗಂಗಾವತಿ ತಹಸೀಲ್ದಾರ್ ಶಿಷ್ಟಾಚಾರ ಸಮಿತಿ, ಕೊಪ್ಪಳ ಅಬಕಾರಿ ಉಪ ಅಧೀಕ್ಷಕರ ಅಬಕಾರಿ ಸಮಿತಿ, ಉಪ ಕೊಪ್ಪಳ ಅರಣ್ಯ ಸಂರಕ್ಷಣಾಧಿಕಾರಿಗಳ ಅರಣ್ಯ ಸಮಿತಿ ಮತ್ತು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಸಹಾಯವಾಣಿ ಕೇಂದ್ರ ಸಮಿತಿ ರಚಿಸಲಾಗಿದ್ದು, ಸಮಿತಿಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಸಹ ಸದಸ್ಯರನ್ನಾಗಿ ನಿಯೋಜನೆ ಮಾಡಲಾಗಿದೆ.

    ಹನುಮಮಾಲಾ ಕಾರ್ಯಕ್ರಮಕ್ಕಾಗಿ ರಚಿಸಲ್ಪಟ್ಟ ಆಯಾ ಸಮಿತಿಗಳ ಅಧ್ಯಕ್ಷರು ಸಮರ್ಪಕ ನಿರ್ವಹಣೆಗಾಗಿ ಅಗತ್ಯವೆನಿಸಿದಲ್ಲಿ ತಮ್ಮ ಅಧೀನ ಕಚೇರಿ ಸಿಬ್ಬಂದಿಯನ್ನು ಕರ್ತವ್ಯಕ್ಕಾಗಿ ನಿಯೋಜನೆ ಮಾಡಿಕೊಳ್ಳಬಹುದಾಗಿದೆ. 14 ಸಮಿತಿಗಳ ಹೊರತಾಗಿ ಅಗತ್ಯವಿದ್ದಲ್ಲಿ ಹೆಚ್ಚುವರಿ ಸಮಿತಿ ರಚನೆ ಮಾಡುವ ಹಾಗೂ ಸಮಿತಿಗಳಲ್ಲಿ ಮಾರ್ಪಾಡು ಹಾಗೂ ಎಲ್ಲಾ ಸಮಿತಿಗಳು ಉಪವಿಭಾಗಾಧಿಕಾರಿಗಳ ಮೇಲುಸ್ತುವಾರಿಯಲ್ಲಿ ಕಾರ್ಯನಿರ್ವಹಿಸಬೇಕು.

    ಸಾರ್ವಜನಿಕರಿಗೆ, ಭಕ್ತಾದಿಗಳಿಗೆ ಯಾವುದೇ ತರಹದ ಅನನುಕೂಲವಾಗದಂತೆ ನಿಯೋಜಿತ ಎಲ್ಲಾ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು. ನಿಯೋಜಿತ ಅಧಿಕಾರಿಗಳು ಕರ್ತವ್ಯ ನಿರ್ವಹಣೆಯಲ್ಲಿ ಯಾವುದೇ ತರಹದ ಲೋಪ ವೆಸಗಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts