More

    ಅ.25ರಂದು ಸಾಲ ಸಂಪರ್ಕ ಕಾರ್ಯಕ್ರಮ

    ಕೊಪ್ಪಳ: ಸ್ವಾತಂತ್ರೃದ ಅಮೃತ ಮಹೋತ್ಸವ ಅಂಗವಾಗಿ ಜಿಲ್ಲಾ ಲೀಡ್ ಬ್ಯಾಂಕ್ ಹಾಗೂ ರಾಜ್ಯ ಬ್ಯಾಂಕರ್ಸ್ ಸಮಿತಿ ಸಹಯೋಗದಲ್ಲಿ ನಗರದ ತಾಲೂಕು ಕ್ರೀಡಾಂಗಣದಲ್ಲಿ ಅ.25ರಂದು ಸಾಲ ಸಂಪರ್ಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ರೇವಣಸಿದ್ದಪ್ಪ ಭೋಲಾ ಹೇಳಿದರು.

    ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಗ್ರಾಹಕರಿಗೆ ಬ್ಯಾಂಕಿನಲ್ಲಿರುವ ಸಾಲ ಸೌಲಭ್ಯ, ಸರ್ಕಾರಿ ಯೋಜನೆಗಳಿಗೆ ದೊರೆಯುವ ಸಾಲಗಳ ಮಾಹಿತಿ ತಿಳಿಸಲು ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ಕೃಷಿ, ಕೈಗಾರಿಕೆ, ಶೈಕ್ಷಣಿಕ, ಗೃಹ, ವಾಹನ, ವೈಯಕ್ತಿಕ, ಮುದ್ರಾ, ಪಿಎಂ ಸ್ವನಿಧಿ, ಪಿಎಂಇಜಿಪಿ, ಪಿಎಂಎಫ್‌ಎಂಇ ಸೇರಿದಂತೆ ಇತರ ಸಾಲಗಳ ಮಾಹಿತಿ ದೊರೆಯಲಿದೆ. ಜನಧನ್, ಜನ್ ಸುರಕ್ಷಾ, ಜೀವನ್ ಜ್ಯೋತಿ ಸುರಕ್ಷಾ ಬಿಮಾ ಸೇರಿದಂತೆ ಇತರ ಯೋಜನೆಗಳ ಅರಿವು ಮೂಡಿಸಲಾಗುವುದು. ಆರ್‌ಸೆಟ್‌ನಿಂದ ನೀಡುವ ವಿವಿಧ ಸ್ವಯಂ ಉದ್ಯೋಗಾಧಾರಿತ ತರಬೇತಿಗಳ ಮಾಹಿತಿ ನೀಡಲಾಗುವುದು. ಗ್ರಾಹಕರು ಕಾರ್ಯಕ್ರಮದ ಸದುಪಯೋಗ ಪಡೆಯಬೇಕು ಎಂದರು.

    ಈಗಾಗಲೇ ಅರ್ಜಿ ಸಲ್ಲಿಸಿರುವ ಅರ್ಹರಿಗೆ ಸಾಲ ಮಂಜೂರು ಮಾಡಲಾಗುವುದು. ಕಾರ್ಯಕ್ರಮದಲ್ಲಿ 20ಕ್ಕೂ ಅಧಿಕ ರಾಷ್ಟ್ರೀಕೃತ ಬ್ಯಾಂಕ್ ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ. ಪ್ರತ್ಯೇಕ ಕೌಂಟರ್ ತೆರೆಯಲಿದ್ದು, ಬ್ಯಾಂಕ್ ಪ್ರತಿನಿಧಿಗಳು ಮಾಹಿತಿ ಹಂಚಿಕೊಳ್ಳಲಿದ್ದಾರೆ. ಬೆಳಗ್ಗೆ 10ರಿಂದ ಮಧ್ಯಾಹ್ನ ಎರಡರವರೆಗೆ ಕಾರ್ಯಕ್ರಮ ನಡೆಯಲಿದೆ. ಸಂಸದ ಸಂಗಣ್ಣ ಕರಡಿ, ಡಿಸಿ ಎಸ್.ವಿಕಾಸ್ ಕಿಶೋರ್, ಜಿಪಂ ಸಿಇಒ ಫೌಜಿಯಾ ತರನ್ನುಮ್, ಎಸ್‌ಬಿಐ ಮಹಾಪ್ರಬಂಧಕ ರವಿ ರಂಜನ್, ಕೆನರಾ, ಯುನಿಯನ್ ಬ್ಯಾಂಕ್ ಪ್ರತಿನಿಧಿಗಳು ಸೇರಿದಂತೆ ಇತರರು ಭಾಗಿಯಾಗಲಿದ್ದಾರೆ ಎಂದು ರೇವಣಸಿದ್ದಪ್ಪ ಭೋಲಾ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts