More

    ಬೆಳೆ ವಿಮೆ ಲೋಪದೋಷ ಸರಿಪಡಿಸಿ

    ಕೊಪ್ಪಳ: ಎರಡು ವರ್ಷದಿಂದ ಬೆಳೆ ವಿಮೆ ಪ್ರೀಮಿಯಂ ಪಾವತಿಸಿದರೂ ವಿಮಾ ಮೊತ್ತ ಬರುತ್ತಿಲ್ಲ. ಈ ಕುರಿತು ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ರೈತರು ಶನಿವಾರ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್‌ಗೆ ಮನವಿ ಸಲ್ಲಿಸಿದರು.

    ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ 2019 ಹಾಗೂ 2020 ರಲ್ಲಿ ಪ್ರೀಮಿಯಂ ಪಾವತಿಸಿದ್ದೇವೆ. ಆದರೆ, ವಿಮಾ ಕಂಪನಿಯವರು ಬೆಳೆ ನಮೂದು ಮಾಡಿಕೊಳ್ಳುವಲ್ಲಿ ಲೋಪದೋಷ ಎಸಗಿದ್ದಾರೆ. ನಾವು ಬೆಳೆದಿರುವ ಬೆಳೆಯ ಬದಲಿಗೆ ಬೇರೆ ಬೆಳೆ ದಾಖಲಿಸಿಕೊಂಡಿದ್ದಾರೆ. ಹೀಗಾಗಿ ಅರ್ಹರಿಗೆ ಸಿಗಬೇಕಾದ ವಿಮಾ ಮೊತ್ತ ಬೇರೆಯವರ ಪಾಲಾಗಿದೆ ಎಂದು ಆರೋಪಿಸಿದರು.

    ಕೆಲ ಹೋಬಳಿಗಳಲ್ಲಿ ಎಲ್ಲ ರೈತರಿಗೂ ವಿಮಾ ಮೊತ್ತ ಬಂದಿದೆ. ಇನ್ನು ಕೆಲವೆಡೆ ಒಬ್ಬರಿಗೂ ಹಣ ಬಂದಿಲ್ಲ. ಬೆಳೆ ನಷ್ಟವಾದರೂ ವಿಮೆ ಹಣ ಬರದಿದ್ದರೆ ಮತ್ತಷ್ಟು ಕಷ್ಟವಾಗಲಿದೆ. ಜಿಲ್ಲೆಯಲ್ಲಿ ವಿಮಾ ಮೊತ್ತ ಪಾವತಿಸಿರುವ ಪಟ್ಟಿಯನ್ನು ಮರು ಪರಿಶೀಲನೆಗೆ ಒಳಪಡಿಸಬೇಕು. ವಾಸ್ತವದಲ್ಲಿ ನಷ್ಟಕ್ಕೀಡಾಗಿರುವ ರೈತರ ಖಾತೆಗೆ ವಿಮೆ ಹಣ ಬರುವಂತೆ ಮಾಡಬೇಕು ಎಂದು ಒತ್ತಾಯಿಸಿದರು. ಅಂದಪ್ಪ ಕೋಳೂರು, ಪತ್ರೆಪ್ಪ ಕಮತರ, ಭರಮಪ್ಪ ಹುಲ್ಲೂರು, ಅಕ್ಕಮಹಾದೇವಿ, ಯಲ್ಲಪ್ಪ ಬಾಬರಿ ಮತ್ತು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts