More

    ಆರೈಕೆದಾರರಿಗೆ ಉದ್ಯೋಗ ನೀಡುವಂತೆ ಒತ್ತಾಯಿಸಿ ಮನವಿ

    ಕೊಪ್ಪಳ: ತೀವ್ರ ಪ್ರಮಾಣದ ಅಂಗವಿಕಲರ ಆರೈಕೆದಾರರು ಸಂಕಷ್ಟದಲ್ಲಿದ್ದು ಸರ್ಕಾರ ನೆರವಿಗೆ ಧಾವಿಸಬೇಕೆಂದು ಒತ್ತಾಯಿಸಿ ಭಾಗ್ಯನಗರದ ವಿಶ್ವಚೇತನ ಆರೈಕೆದಾರರ ಸಂಸ್ಥೆ ನೇತೃತ್ವದಲ್ಲಿ ಆರೈಕೆದಾರರು ನಗರದ ನಗರಸಭೆ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

    ಶೇ.90ಕ್ಕಿಂತ ಹೆಚ್ಚಿನ ಪ್ರಮಾಣದ ವಿಕಲಚೇತನರಿಗೆ ಆರೈಕೆದಾರರು ಅವಶ್ಯವಾಗಿ ಬೇಕು. ತಾಯಿ, ಅಜ್ಜಿಯಂದಿರು ಇಂಥವರನ್ನು ನೋಡಿಕೊಳ್ಳುತ್ತಿದ್ದಾರೆ. 24ಗಂಟೆಯೂ ಸೇವೆ ಅವಶ್ಯವಿರುವ ಕಾರಣ ಬೇರೆ ಕೆಲಸ ಮಾಡಲಾಗುತ್ತಿಲ್ಲ. ಇದರಿಂದ ಕುಟುಂಬ ನಿರ್ವಹಣೆ ಸವಾಲಾಗಿ ಪರಿಣಮಿಸುತ್ತಿದೆ. ಸರ್ಕಾರಿಂದ ನಮಗೆ ಯಾವೊಂದು ಸೌಲಭ್ಯ ದೊರೆಯುತ್ತಿಲ್ಲ. ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಸರ್ಕಾರ ಯೋಜನೆ ರೂಪಿಸುತ್ತಿಲ್ಲವೆಂದು ಆರೋಪಿಸಿದರು.

    ತೀವ್ರ ಅಂಗವಿಕಲರಿಗಾಗಿ ಡೇ ಕೇರ್ ಸೆಂಟರ್ ಆರಂಭಿಸಬೇಕು. ಅಂಗವಿಕಲರ ಶೇ.5 ನಿಧಿ ಸಮರ್ಪಕವಾಗಿ ಬಳಕೆ ಮಾಡಬೇಕು. ಸಲಕರಣೆ, ವೈದ್ಯಕೀಯ ವೆಚ್ಚ ಮರುಪಾವತಿ ಮಾಡಬೇಕು. ನರೇಗಾದಲ್ಲಿ ಆರೈಕೆ ಸೇವೆ ಪರಿಗಣಿಸಿ ವರ್ಷದಲ್ಲಿ ಕನಿಷ್ಠ 50 ದಿನ ಕೂಲಿ ನೀಡಬೇಕು. ಪೋಷಣೆ, ಪ್ರಯಾಣಭತ್ಯೆ ನೀಡಬೇಕು. ಸಾಧನ, ಸಲಕರಣೆಗಳನ್ನು ಸಕಾಲಕ್ಕೆ ಪೂರೈಸಬೇಕು. ಮಾಸಾಶನ ವಿತರಣೆಯಲ್ಲಿನ ಲೋಪ ಸರಿಪಡಿಸಿ ಪ್ರತಿ ತಿಂಗಳು ಬರುವಂತೆ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts