More

  ನ್ಯಾಯಾಧೀಶರ ಸೂಚನೆ ಮೇರೆಗೆ ವಸತಿ ನಿಲಯದ ಅಧಿಕಾರಿಗಳ ವಿರುದ್ಧ ಕ್ರಮ

  ಕೊಪ್ಪಳ:ನಗರದ ವಿವಿಧ ವಸತಿ ನಿಲಯಗಳಲ್ಲಿ ಕರ್ತವ್ಯ ಲೋಪ ಎಸಗಿದ ನಾಲ್ವರು ಅಧಿಕಾರಿಗಳ ವಿರುದ್ಧ ತಾಲೂಕು ಹಿಂದುಳಿದ ವರ್ಗಗಳ ಅಧಿಕಾರಿ ಕ್ರಮ ಜರುಗಿಸಿ ಆದೇಶಿಸಿದ್ದಾರೆ.

  ಜಿಲ್ಲಾ ಪ್ರಧಾನ ನ್ಯಾಯಾಧೀಶ ಚಂದ್ರಶೇಖರ್​ ಸಿ. ನ.19ರಂದು ವಿವಿಧ ವಸತಿ ನಿಲಯಗಳಿಗೆ ಭೇಟಿ ನೀಡಿದಾಗ ಕರ್ತವ್ಯಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸೂಚಿಸಿದ್ದರು. ಅವ್ಯವಸ್ಥೆ ಕಂಡು ತರಾಟೆ ತೆಗೆದುಕೊಂಡಿದ್ದರು. ನಗರದ ಮೆಟ್ರಿಕ್​ ನಂತರದ ಬಾಲಕರ ವಸತಿ ನಿಲಯದ (ಎಚ್​ಸಿಐ 2177) ಅಡುಗೆ ನೌಕರ ಸಣ್ಣರಾಜಪ್ಪ ಕರ್ತವ್ಯ ರ್ನಿಲಕ್ಷ$್ಯತನ ತೋರಿದ ಕಾರಣ ಬಾಲಕರ ವಸತಿ ನಿಲಯ (ಎಚ್​ಸಿಐ&2181)ಕ್ಕೆ ನಿಯೋಜನೆಗೊಳಿಸಲಾಗಿದೆ.

  ನ್ಯಾಯಾಧೀಶ ಚಂದ್ರಶೇಖರ ಸಿ. ವಸತಿ ನಿಲಯಕ್ಕೆ ಭೇಟಿ ನೀಡಿದಾಗ ಮಾರುತಿ ಎಂಬ ವಿದ್ಯಾರ್ಥಿ ಅಡುಗೆ ನೌಕರನ ವಿರುದ್ಧ ದೂರು ಸಲ್ಲಿಸಿದ್ದ. ತನ್ನ ಮೇಲೆ ಹಲ್ಲೆ ಮಾಡಿರುವುದಾಗಿ ಆರೋಪಿಸಿದ್ದ. ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಧೀಶರು ನೌಕರನ ವಿರುದ್ಧ ಕ್ರಮಕ್ಕೆ ಸೂಚಿಸಿದ್ದರು. ಇದರ ಬೆನ್ನಲ್ಲೇ ನೌಕರನಿಗೆ ಕಾರಣ ಕೇಳಿ ನೋಟಿಸ್​ ಜಾರಿಗೊಳಿಸಿದ್ದು, ನಿಯೋಜನೆ ಮಾಡಲಾಗಿದೆ.

  ಇನ್ನು ಕಲ್ಯಾಣ ನಗರದ ಮೂರು ವಸತಿ ನಿಲಯಗಳಲ್ಲಿನ ಅವ್ಯವಸ್ಥೆ ಹಾಗೂ ಸಿಬ್ಬಂದಿ ಕರ್ತವ್ಯ ಲೋಕ ಕುರಿತು ನ್ಯಾಯಾಧೀಶರು ಮೇಲಧಿಕಾರಿಗಳ ಗಮನ ಸೆಳೆದಿದ್ದರು. ಈ ಸಂಬಂಧ ನಿಲಯ ಪಾಲಕ ಶಿವಪ್ಪ ಎಚ್​, ಮೇಲ್ವಿಚಾರಕರಾದ ತ್ರಿಮೂರ್ತಿ ಉದ್ಗಟ್ಟಿ, ರಾಮಕೃಷ್ಣ ಜೋಗಿನ್​ ಎಂಬುವವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಡಿಸಿ ಕಚೇರಿಗೆ ನಿಯೋಜಿಸಲಾಗಿದೆ.

  ನಿಲಯ ಪಾಲಕರಾದ ವಿರೇಶ್ವರ ಎಂ, ಉಮೇಶ್​ ಶಿರೂರ, ಮೇಲ್ವಿಚಾರಕರಾದ ಚಂದ್ರಕಾಂತ ನಾಯ್ಕ ಅವರಿಗೆ ಹೆಚ್ಚುವರಿ ಪ್ರಭಾರವಹಿಸಿ ಆದೇಶಿಸಲಾಗಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts