More

    ಕೊಪಣ ಜಿಲ್ಲೆಯಲ್ಲಿ ಈದುಲ್ ಫಿತ್ರ್ ಸಂಭ್ರಮ: ಶುಭಾಶಯ ಕೋರಿದ ಗಣ್ಯರು

    ಕೊಪ್ಪಳ: ನಗರ ಸೇರಿ ಜಿಲ್ಲಾದ್ಯಂತ ಶನಿವಾರ ಪವಿತ್ರ ಈದುಲ್ ಫಿತ್ರ್ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

    ವಿವಿಧ ಗ್ರಾಮಗಳಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ

    ಈದ್ಗಾ ಮೈದಾನ, ಹುಲಿಕೆರೆ ಬಳಿಯ ಮಸೀದಿ ಹಾಗೂ ಭಾಗ್ಯನಗರ ಸೇರಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಈ ಬಾರಿ ಬಿಸಿಲಿನ ಧಗೆಯಲ್ಲಿಯೇ ಹಬ್ಬ ಆಚರಿಸುವಂತಾಗಿದೆ. ತಿಂಗಳ ಕಾಲ ಉಪವಾಸ ವ್ರತ ಆಚರಿಸಿದ ಬಳಿಕ ಈದುಲ್ ಫಿತ್ರ್ ಸಂಭ್ರಮದಿಂದ ಆಚರಿಸಲಾಯಿತು.

    ಕೊಪ್ಪಳದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಕಲ್ಪಿಸಲಾಗಿತ್ತು. ರಸ್ತೆಗೆ ಮೈದಾನ ಹೊಂದಿಕೊಂಡಿದ್ದ ಕಾರಣ ರಸ್ತೆಗೆ ಬ್ಯಾರಿಕೇಡ್ ಅಳವಡಿಸಿ ಅನುಕೂಲ ಕಲ್ಪಿಸಲಾಗಿತ್ತು. ಜನಸಂಖ್ಯೆ ಹೆಚ್ಚಿದ್ದರಿಂದ ಮೈದಾನ ತುಂಬಿ, ರಸ್ತೆ ಮೇಲೆ ಕುಳಿತು ಕೆಲವರು ಪ್ರಾರ್ಥನೆ ಸಲ್ಲಿಸಿದರು. ಧರ್ಮಗುರುಗಳು ಪ್ರಾರ್ಥನೆ ಬೋಧಿಸಿದ ನಂತರ ನಮಾಜ್ ಮುಕ್ತಾಯಗೊಳಿಸಲಾಯಿತು.


    ಇದನ್ನೂ ಓದಿ: ಇಂದು ರಂಜಾನ್ ಸಂಭ್ರಮ; ಸಾಮರಸ್ಯ, ಸಹಬಾಳ್ವೆಯ ಪರ್ವ

    ಚುನಾವಣೆ ಕಾರಣ ರಾಜಕೀಯ ನಾಯಕರ ದಂಡೇ ಪ್ರಾರ್ಥನೆಯಲ್ಲಿ ನೆರೆದಿತ್ತು. ನೀತಿ ಸಂಹಿತೆ ಉಲ್ಲಂಘನೆ ನಿಗಾವಹಿಸಲು ಚುನಾವಣಾ ಅಧಿಕಾರಿಗಳು ಸ್ಥಳದಲ್ಲಿ ಬೀಡು ಬಿಟ್ಟಿದ್ದು ಕಂಡುಬಂತು. ಚಿಣ್ಣರು ಬಣ್ಣ ಬಣ್ಣದ ಬಟ್ಟೆ ತೊಟ್ಟು ನಗೆ ಬೀರಿದರು.

    ಸಂಸದ ಸಂಗಣ್ಣ ಕರಡಿ, ಶಾಸಕ ರಾಘವೇಂದ್ರ ಹಿಟ್ನಾಳ್, ಜೆಡಿಎಸ್ ಅಭ್ಯರ್ಥಿ ಸಿ.ವಿ.ಚಂದ್ರಶೇಖರ್, ಅಮರೇಶ ಕರಡಿ, ಜೆಡಿಎಸ್ ಜಿಲ್ಲಾಧ್ಯಕ್ಷ ವೀರೇಶ ಮಹಾಂತಯ್ಯಮಠ, ರಾಜಶೇಖರ್ ಹಿಟ್ನಾಳ್, ಶಿವಣ್ಣ ಭೂಮಕ್ಕನವರ ಇತರರು ಮುಸ್ಲಿಮರಿಗೆ ಶುಭಾಶಯ ಕೋರಿದರು. ಮುಖಂಡರಾದ ರಾಜಶೇಖರ್ ಆಡೂರು, ಎಂ.ಕಾಟನ್ ಪಾಷಾ, ಅಮ್ಜದ್ ಪಟೇಲ್, ಮಾನ್ವಿ ಪಾಷಾ, ಅಕ್ಬರ್ ಪಾಷಾ ಪಲ್ಟನ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts