More

    ಉದ್ವೇಗದಿಂದ ಬೊಗಳುತ್ತಾ ಸಾಗಿದ ಶ್ವಾನ ಹಿಂಬಾಲಿಸಿದ ರಕ್ಷಣಾಗಾರರಿಗೆ ಕಾದಿತ್ತು ಶಾಕ್​!

    ಕೊಚ್ಚಿ: ಸುಮಾರು 70 ಮಂದಿಯನ್ನು ಬಲಿ ಪಡೆದುಕೊಂಡ ಇಡುಕ್ಕಿ ಭೂಕುಸಿತದಲ್ಲಿ ಮಣ್ಣಿನಡಿ ಸಿಲುಕಿದ್ದ 2 ವರ್ಷದ ಮಗುವಿನ ಮೃತದೇಹವೂ ಎರಡು ದಿನಗಳ ಕಾರ್ಯಾಚರಣೆ ಬಳಿಕ ಪತ್ತೆಯಾಗಿದೆ. ಕೂವಿ ಹೆಸರಿನ ಶ್ವಾನವೂ ಮೃತದೇಹವನ್ನು ಪತ್ತೆ ಮಾಡಿದೆ.

    ಆಗಸ್ಟ್​ 6ರಂದು ರಾಜಮಲೈನಲ್ಲಿ ಸಂಭವಿಸಿದ ಭೂಕೂಸಿತದಲ್ಲಿ ಟೀ ತೋಟದ ಕೆಲಸಗಾರರು ಸೇರಿದಂತೆ ಅವರು ವಾಸಿಸುತ್ತಿದ್ದ ಮನೆಗಳು ಭೂಸಮಾಧಿಯಾದವು. ಕಳೆದ 8 ದಿನಗಳಿಂದ ಶೋಧ ಕಾರ್ಯ ನಡೆಯುತ್ತಿದ್ದು, ಶುಕ್ರವಾರ ಕಾರ್ಯಾಚರಣೆ ನಡೆಯುವಾಗ ಶ್ವಾನ ಕೂವಿ ಮತ್ತು ಇನ್ನೆರಡು ನಾಯಿಗಳು ತುಂಬಾ ಆವೇಗದಿಂದ ಘಟನಾ ಸ್ಥಳದಲ್ಲಿ ಓಡಾಡುತ್ತಾ ತಮ್ಮ ಮನೆಯ ಮಾಲೀಕನ ಮೃತದೇಹ ಮತ್ತು ಮನೆಯ ಅವಶೇಷಗಳನ್ನು ಪತ್ತೆ ಮಾಡಿದ್ದವು.

    ಅದೇ ಜಾಗದಲ್ಲಿ ಮಗು ಧನುಷ್ಕಾ ಮೃತದೇಹವು ಸಹ ಪತ್ತೆಯಾಗಿತ್ತು. ಪೆಟ್ಟಿಮುಡಿಯಿಂದ ನಾಲ್ಕು ಕಿ.ಮೀ ದೂರವಿರುವ ಗ್ರ್ಯಾವೆಲ್​ ನದಿ ದಡ ಸಿಮೆಟ್​ ಹೆಸರಿನ ಸೇತುವೆ ಕೆಳಗಿನ ಮರದ ಬಳಿ ಮಗುವಿನ ದೇಹ ಸಿಕ್ಕಿತ್ತು. ಮೃತದೇಹದಿಂದ ಬರುತ್ತಿದ್ದ ವಾಸನೆಯನ್ನು ಗ್ರಹಿಸಿ ನದಿಯತ್ತ ಬೊಗಳಿ ಸಾಗಿದ ಶ್ವಾನವನ್ನು ರಕ್ಷಣಾಗಾರರು ಹಿಂಬಾಲಿಸಿದಾಗ ಮಗುವಿನ ದೇಹ ಪತ್ತೆಯಾಗಿದೆ. ಇದಕ್ಕೂ ಮುನ್ನವೇ ಧನುಷ್ಕಾ ತಂದೆ ಪ್ರಾಥೀಶ್​ ಮೃತದೇಹ ಸಿಕ್ಕಿದೆ. ಆದರೆ, ಮಗುವಿನ ತಾಯಿ ಮತ್ತು ಒಡಹುಟ್ಟಿದವರ ದೇಹಗಳು ನಾಪತ್ತೆಯಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ.

    ಇಲ್ಲಿಯವರೆಗೂ ಮಣ್ಣಿನಡಿ ಸಿಲುಕಿದ್ದ 55 ಮೃತದೇಹಗಳನ್ನು ಪತ್ತೆ ಮಾಡಲಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ. (ಏಜೆನ್ಸೀಸ್​)

    ಹಿಮದಡಿ ಹುದುಗಿಹೋಗಿದ್ದ ಯೋಧನ ಶವ 8 ತಿಂಗಳ ನಂತರ ಪತ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts