More

    ಬಸವಣ್ಣನ ಐಕ್ಯಸ್ಥಳ ದರ್ಶನಕ್ಕೆ ಅವಕಾಶ

    ಕೂಡಲಸಂಗಮ: ದುರಸ್ತಿ ಕಾರ್ಯದ ನಿಮಿತ್ತ 17 ತಿಂಗಳಿಂದ ಬಸವಣ್ಣನ ಐಕ್ಯ ಮಂಟಪ ಪ್ರವೇಶ ನಿಷೇಧಿಸಿದ್ದ ಮಂಡಳಿ ಶನಿವಾರದಿಂದ ದರ್ಶನಕ್ಕೆ ಅವಕಾಶ ಕಲ್ಪಿಸಿತು. ಸಾವಿರಕ್ಕೂ ಅಧಿಕ ಭಕ್ತರು ಬಸವಣ್ಣನ ಐಕ್ಯಸ್ಥಳದ ದರ್ಶನ ಪಡೆದು, ಕೃಷ್ಣಾ, ಮಲಪ್ರಭಾ ನದಿ ತುಂಬಿ ಹರಿಯುವ ದೃಶ್ಯ ನೋಡಿ ಸಂಭ್ರಮಿಸಿದರು.

    87 ಲಕ್ಷ ರೂ. ವೆಚ್ಚದಲ್ಲಿ 6 ತಿಂಗಳಲ್ಲಿ ಮುಗಿಯಬೇಕಾಗಿದ್ದ ಕಾಮಗಾರಿ ಅಧಿಕಾರಿಗಳ ನಿರ್ಲಕ್ಷೃ, ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಇನ್ನೂ ಪೂರ್ಣಗೊಂಡಿಲ್ಲ. ಭಕ್ತರ ಒತ್ತಡಕ್ಕೆ ಮಣಿದ ಅಧಿಕಾರಿಗಳು ಶನಿವಾರ ಸದಿಲ್ಲದೆ ಪ್ರವೇಶಕ್ಕೆ ಅವಕಾಶ ಕಲ್ಪಿಸಿದರು.

    ಐಕ್ಯ ಮಂಟಪದ ಕೆಲವು ಭಾಗದಲ್ಲಿ ಇನ್ನೂ ಟೈಲ್ಸ್‌ಗಳನ್ನು ಅಳವಡಿಸಿಲ್ಲ. ಕೆಲವು ಕಡೆ ಇನ್ನೂ ನೀರು ಬಸಿಯುತ್ತಿದೆ. ಹೊರ ಭಾಗದ ಕಾಮಗಾರಿ ಪೂರ್ಣಗೊಂಡಿಲ್ಲ. ಎಲ್ಲ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸಬೇಕು ಎಂದು ಕೂಡಲಸಂಗಮ ಗ್ರಾಮಸ್ಥರು ಹಾಗೂ ಭಕ್ತರು ಒತ್ತಾಯಿಸಿದ್ದಾರೆ.

    ಭಕ್ತರ ಅನುಕೂಲಕ್ಕಾಗಿ ಶನಿವಾರದಿಂದ ಬಸವಣ್ಣ ಐಕ್ಯ ಸ್ಥಳದ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ಪ್ರವೇಶ ಇರುತ್ತದೆ. ಆಲಮಟ್ಟಿ ಪುನರ್ವಸತಿ ಇಲಾಖೆಯಿಂದ ಕಾಮಗಾರಿಯನ್ನು ಇನ್ನೂ ಹಸ್ತಾಂತರಿಸಿಕೊಂಡಿಲ್ಲ. ಪರಿಶೀಲನೆ ನಂತರ ಹಸ್ತಾಂತರ ಮಾಡಿಕೊಳ್ಳಲಾಗುವುದು.
    ಎಂ.ಗಂಗಪ್ಪ, ಆಯುಕ್ತರು, ಕೂಡಲಸಂಗಮ ಅಭಿವೃದ್ಧಿ ಮಂಡಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts