More

    ದೇವರು ನಿರಾಕಾರ ನಿರ್ಗುಣದವನು

    ಕೂಡಲಸಂಗಮ: ಶಿವ ಬೇರೆ, ದೇವ ಬೇರೆ. ಶಿವ ಗಂಗೆ ಗೌರಿ ವಲ್ಲಭ, ಕೈಲಾಸಾಧಿಪತಿ. ಆದರೆ, ದೇವರು ನಿರಾಕಾರ, ನಿರ್ಗುಣನಾದವನು. ಅವನು ಪಶು ಪಕ್ಷಿ ಆಕಾರದವನಲ್ಲ. ನಾವು ಹರನನ್ನು ಗೌರವಿಸುತ್ತೇವೆ, ದೇವನನ್ನು ಮಾತ್ರ ಪೂಜೆಸುತ್ತೇವೆ ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ಪೀಠಾಧ್ಯೆಕ್ಷೆ ಜಗದ್ಗುರು ಮಾತೆ ಗಂಗಾದೇವಿ ಹೇಳಿದರು.

    ಕೂಡಲಸಂಗಮದಲ್ಲಿ ನಡೆದ 33ನೇ ಶರಣ ಮೇಳದ ಸಾಮೂಹಿಕ ಇಷ್ಟಲಿಂಗಾರ್ಚನೆ ಹಾಗೂ ಸಮಾರೋಪ ಸಮಾರಂಭದಲ್ಲಿ ಮಂಗಳವಾರ ರಾತ್ರಿ ಮಾತನಾಡಿ, ಲಿಂಗಾಯತ ಧರ್ಮಕ್ಕೆ ಯೋಗಿ ಶಿವನ ಕೊಡುಗೆ ಇದೆ. ಅಷ್ಟಾವರಣಗಳಲ್ಲಿ ಮೂರು ವಿಭೂತಿ, ರುದ್ರಾಕ್ಷಿ, ಮಂತ್ರ ಶಿವನಿಂದ ಬಂದಿವೆ. ಐದು ಬಸವಣ್ಣನವರೇ ಕೊಟ್ಟಿದ್ದಾರೆ ಎಂದರು.

    ಸಮಾರಂಭದಲ್ಲಿ ಮಾಹಾದೇಶ್ವರ ಸ್ವಾಮೀಜಿ, ಬಸವಕುಮಾರ ಸ್ವಾಮೀಜಿ, ಬಸವಪ್ರಭು ಸ್ವಾಮೀಜಿ, ಪ್ರಭುಲಿಂಗ ಸ್ವಾಮೀಜಿ, ಸಿದ್ಧರಾಮೇಶ್ವರ ಸ್ವಾಮೀಜಿ, ಚನ್ನಬಸವಾನಂದ ಸ್ವಾಮೀಜಿ, ಮಾತೆ ಜ್ಞಾನೇಶ್ವರಿ, ಮಾತೆ ದಾನೇಶ್ವರಿ, ಮಾತೆ ಸತ್ಯಾದೇವಿ ಇದ್ದರು.

    ಬಸವ ಪಥ ಸಂಚಲನ
    ಬಸವೇಶ್ವರ ಐಕ್ಯ ಮಂಟಪ ಮುಂಭಾಗದಿಂದ ಬಸವ ಧರ್ಮ ಪೀಠದ ಮಹಾಮನೆಯವರೆಗೆ ಬೃಹತ್ ಪಥ ಸಂಚಲನ ಸಮಾರಂಭ ನಡೆಯಿತು. ವಿವಿಧ ರಾಜ್ಯದಿಂದ ಆಗಮಿಸಿದ್ದ ಸಾವಿರಾರು ಶರಣ ಶರಣೆಯರು ವಚನಗಳಿಗೆ ಜಯಕಾರ, ವಚನಗಳನ್ನು ಹಾಡಿ ನಲಿದರು. ಪಥ ಸಂಚಲನದಲ್ಲಿ ಆನೆಯ ಮೇಲೆ ಬಸವಣ್ಣನವರ ಮೂರ್ತಿ ವಚನ ಸಾಹಿತ್ಯದ ಕಟ್ಟು ಹಾಗೂ ಮಂಜುನಾಥ ಬಂಡಿ ನಿರ್ಮಿಸಿದ ವಿಶ್ವದ ಅತಿ ಉದ್ದದ ಧರ್ಮ ಧ್ವಜದ ಮೆರವಣಿಗೆ ಎಲ್ಲರನ್ನು ಆಕರ್ಷಿಸಿತು.

    ಶರಣ ಮೇಳದ ನಿರ್ಣಯಗಳು
    ಗುಲಬರ್ಗಾ ವಿಶ್ವವಿದ್ಯಾಲಕ್ಕೆ ಬಸವಣ್ಣನವರ ಹೆಸರಿಡಬೇಕು. ಧಾರವಾಡದಲ್ಲಿ ಡಾ. ಮಾತೆ ಮಹಾದೇವಿ ಅಧ್ಯಯನ ಪೀಠವನ್ನು ಸರ್ಕಾರ ಸ್ಥಾಪಿಸಬೇಕು. ಹೊಸಪೇಟೆಯಿಂದ ಕೂಡಲಸಂಗಮದ ಮೂಲಕ ಆಲಮಟ್ಟಿಗೆ ಸಂಪರ್ಕ ಕಲ್ಪಿಸುವ ರೈಲ್ವೆ ಮಾರ್ಗ ನಿರ್ಮಿಸಬೇಕು. ಕೂಡಲಸಂಗಮದಲ್ಲಿ ಡಾ.ಮಾತೆ ಮಹಾದೇವಿ ದಾಸೋಹ ಭವನ ನಿರ್ಮಿಸಬೇಕು. ಹುನಗುಂದ ಮತಕ್ಷೇತ್ರಕ್ಕೆ ಕೂಡಲಸಂಗಮ ಮತಕ್ಷೇತ್ರ ಎಂದು ನಾಮಕರಣ ಮಾಡಬೇಕು. ಬಸವ ಧರ್ಮ ಪೀಠದ ವತಿಯಿಂದ ಎಲ್ಲ ಬಸವ ಮಂಟಪಗಳಲ್ಲಿ ಪ್ರತಿ ತಿಂಗಳು ಉಚಿತ ಇಷ್ಟಲಿಂಗ ದೀಕ್ಷೆ ಅಭಿಯಾನ ಹಮ್ಮಿಕೊಳ್ಳುವುದು. ಮೇ ತಿಂಗಳಲ್ಲಿ ಹೈದರಾಬಾದ್‌ನಲ್ಲಿ ಲಿಂಗಾಯತ ರ‌್ಯಾಲಿ ಹಮ್ಮಿಕೊಳ್ಳಾಗುವುದು ಎಂದು ಮಾತೆ ಗಂಗಾದೇವಿ ನಿರ್ಣಗಳನ್ನು ಪ್ರಕಟಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts