More

    ರಾಜ್ಯಾದ್ಯಂತ ವಚನ ಜಾತ್ರೆಗೆ ಚಿಂತನೆ : ಸಚಿವ ತಂಗಡಗಿ ಹೇಳಿಕೆ

    ಕೊಪ್ಪಳ: ಬಸವಣ್ಣ ಅವರ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಪ್ರತಿ ಜಿಲ್ಲೆಯಲ್ಲಿ ವಚನ ಜಾತ್ರೆ ಆಯೋಜಿಸಬೇಕು. ವರ್ಷದಲ್ಲಿ ಒಂದು ದಿನ ಬಸವೇಶ್ವರರು, ಅವರ ಚಿಂತನೆ, ವಚನಗಳ ಚರ್ಚೆ ನಡೆಯಬೇಕು. ಇದಕ್ಕೆ ಅನುದಾನ ನೀಡುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿರುವೆ ಎಂದು ಕನ್ನಡ ಮತ್ತು ಸಂಸತಿ, ಹಿಂದುಳಿದ ವರ್ಗಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

    ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್​ನಲ್ಲಿ ಜಿಲ್ಲಾಡಳಿತ, ಜಿಪಂ ಮತ್ತು ಕನ್ನಡ ಮತ್ತು ಸಂಸತಿ ಇಲಾಖೆಯಿಂದ ಶನಿವಾರ ಹಮ್ಮಿಕೊಂಡಿದ್ದ ರಾಜ್ಯದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣ ಭಾವಚಿತ್ರ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಹಿಂದೆ ಅನೇಕರು ಸರ್ಕಾರ ನಡೆಸಿದ್ದಾರೆ. ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕನೆಂದು ಘೋಷಿಸಲು ಸಿದ್ದರಾಮಯ್ಯ ಬರಬೇಕಾಯಿತು. ಎಲ್ಲರೂ ವಚನಗಳ ಬಗ್ಗೆ ಮಾತನಾಡುತ್ತಾರೆ. ಆದರೆ, ಅದರಂತೆ ನಡೆದುಕೊಳ್ಳುವುದು ಕಷ್ಟ. ಸಿದ್ದರಾಮಯ್ಯ ಅದರಂತೆ ನಡೆಯುತ್ತಿದ್ದಾರೆ. ಬಸವಣ್ಣ 12ನೇ ಶತಮಾನದಲ್ಲಿ ಸಮಾನತೆ ಸಾರಿದ್ದು ಸಾಮಾನ್ಯ ಕೆಲಸವಲ್ಲ. ಬಸವಾದಿ ಶರಣರು ವಚನಗಳ ಮೂಲಕ ಸಮಾಜ ಸುಧಾರಿಸುವ ಕೆಲಸ ಮಾಡಿದರು. ಅನುಭವ ಮಂಟಪವೇ ಇಂದಿನ ಸಂಸತ್ತು ಹುಟ್ಟಲು ಪ್ರೇರಣೆ. ಬಸವಣ್ಣನಂತೆ ಅಂಬೇಡ್ಕರ್​ ಅವರು ಸಮಾನತೆ ಸಾರಿದರು ಎಂದರು.

    ರಾಜ್ಯಾದ್ಯಂತ ವಚನ ಜಾತ್ರೆಗೆ ಚಿಂತನೆ : ಸಚಿವ ತಂಗಡಗಿ ಹೇಳಿಕೆ

    ಕ್ರಾಂತಿ ಮಾಡುವುದು ಸುಲಭವಲ್ಲ. ಹಿಂದೆ ಕಲಬುರ್ಗಿಯಲ್ಲಿ ಶ್ರೀಗಳು ಅನುಭವ ಮಂಟಪ ಎಂಬ ಕಾರ್ಯಕ್ರಮ ಮಾಡಿದಾಗ ರಾಮ ವಿಲಾಸ್​ ಪಾಸ್ವಾನ್​ ಅವರು ಬಸವಣ್ಣನ ತತ್ವ ಪಾಲಿಸುವಂತೆ ನೆರೆದ ಶ್ರೀಗಳಿಗೆ ಮನವಿ ಮಾಡಿದರು. ಆಗ ಇಲಕಲ್​ ಮಹಾಂತ ಶ್ರೀಗಳು ಎಸ್ಸಿ ವರ್ಗದವನಿಗೆ ಸಂಸ್ಕೃತಿ ಕಲಿಸಿ ಪೀಠಾಧಿಪತಿ ಮಾಡುವ ಮಾತುಕೊಟ್ಟು ಅದರಂತೆ ನಡೆದುಕೊಂಡರು. ಇದಕ್ಕೆ ಹಲವರು ವಿರೋಧಿಸಿದರು. ಬಸವಣ್ಣನನ್ನು ಅನುಸರಿಸುವುದು ಸುಲಭವಲ್ಲ. ಅವರನ್ನು ರಾಜ್ಯದ ಸಾಂಸತಿಕ ನಾಯಕನೆಂದು ಘೋಷಿಸಿದ ಅವಧಿಯಲ್ಲಿ ನಾನು ಸಚಿವನಾಗಿದ್ದದ್ದು ನನ್ನ ಪುಣ್ಯ ಎಂದು ಹರ್ಷಪಟ್ಟರು.

    ರಾಜೇಶ ಸಸಿಮಠ ವಿಶೇಷ ಉಪನ್ಯಾಸ ನೀಡಿದರು. ಡಿಸಿ ನಲಿನ್​ ಅತುಲ್​, ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ, ಎಸ್ಪಿ ಯಶೋದಾ ವಂಟಗೋಡಿ, ಎಡಿಸಿ ಸಾವಿತ್ರಿ ಕಡಿ, ಎಸಿ ಕ್ಯಾ.ಮಹೇಶ ಮಾಲಗಿತ್ತಿ, ಬಸವರಾಜ ಬಳ್ಳೊಳ್ಳಿ ಇತರರಿದ್ದರು.

    ಪೌರ ಕಾರ್ಮಿಕರಿಗೆ ಸೇವಾ ಕಾಯಂ ಪತ್ರ ವಿತರಣೆ
    ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರಿಗೆ ಸೇವಾ ಕಾಯಂ ಪತ್ರ ವಿತರಿಸಲಾಯಿತು. ವೇದಿಕೆ ಮೇಲೆ ಸಾಂಕೇತಿಕವಾಗಿ 6 ಜನರಿಗೆ ಸಚಿವ ಶಿವರಾಜ ತಂಗಡಗಿ ಪತ್ರ ವಿತರಿಸಿದರು. ಕೊಪ್ಪಳ ನಗರಸಭೆಯ 18, ಕುಷ್ಟಗಿ 15, ಕಾರಟಗಿ 19, ಕನಕಗಿರಿ 12, ಕುಕನೂರು 8, ತಾವರಗೇರಾ13 ಒಟ್ಟು 85 ಪೌರಕಾರ್ಮಿಕರಿಗೆ ಆದೇಶ ಪತ್ರ ನೀಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts