ಕೊಂಡ್ಲಹಳ್ಳಿ: ಕರೊನಾ ವೈರಸ್ ನಿಯಂತ್ರಣಕ್ಕಾಗಿ ಆರೋಗ್ಯ, ಪೊಲೀಸ್ ಇತರ ಇಲಾಖೆ ಸಿಬ್ಬಂದಿಗಳು ನಿರಂತರ ಸೇವೆ ಸಲ್ಲಿಸುವುದು ಅನಿವಾರ್ಯವಾಗಿದೆ.
ಲಾಕ್‌ಡೌನ್ ಕಾರಣ ನೀಡಿ ರಜೆ ತೆಗೆದುಕೊಳ್ಳಲಾಗದ ಈ ಸಿಬ್ಬಂದಿಗೂ ಹಲವು ತೊಂದರೆ ಆಗಿದ್ದು ಮುಖ್ಯವಾಗಿ ಸಾರಿಗೆ ವ್ಯವಸ್ಥೆ. ಈ ಸೇವೆ ಸ್ಥಗಿತಗೊಂಡಿದ್ದರಿಂದ ಬಿ.ಜಿ.ಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಡಿ.ಗ್ರೂಪ್ ನೌಕರ ಬಸವರಾಜ್ ಐದು ಕಿಮೀ ದೂರದ ಕೊಂಡ್ಲಹಳ್ಳಿಯಿಂದ ಸೈಕಲ್ ಮೂಲಕ ಬಿ.ಜಿ.ಕೆರೆ ಆರೋಗ್ಯ ಕೇಂದ್ರಕ್ಕೆ ಬರುವ ಅನಿವಾರ್ಯತೆ ಸೃಷ್ಟಿಯಾಗಿದೆ.
ಇದು ಇವರೊಬ್ಬರ ಸಮಸ್ಯೆಯಲ್ಲ. ಕೋವಿಡ್-19 ವಿರುದ್ಧದ ಸೇವೆಯಲ್ಲಿ ತೊಡಗಿದವರ ಸಮಸ್ಯೆಯಾಗಿದೆ.