More

    ಚೆಕ್‌ಡ್ಯಾಂಗಳ ಕಲ್ಲುಗಳು ಕಣ್ಮರೆ

    ಕೊಂಡ್ಲಹಳ್ಳಿ: ಚೆಕ್‌ಡ್ಯಾಂಗಳು ಮಳೆನೀರು ತಡೆಹಿಡಿದು ನೀರು ಇಂಗಿಸಲು ಉತ್ತಮ ಮಾರ್ಗವಾಗಿವೆ. ಇಂತಹ ಚೆಕ್‌ಡ್ಯಾಂಗಳನ್ನು ದುಷ್ಕರ್ಮಿಗಳು ಹಾಳು ಮಾಡುತ್ತಿದ್ದು, ಇವುಗಳಿಗೆ ಹಾಕಿದ ಕಲ್ಲುಗಳು ಮಾಯವಾಗುತ್ತಿವೆ.

    ಚೆಕ್‌ಡ್ಯಾಂಗಳ ನೀರು ಸರಾಗವಾಗಿ ಹರಿದು ಹೋಗಲೆಂದು ಕಾಡುಕಲ್ಲು ಬಳಸಲಾಗುತ್ತದೆ. ಮಳೆಗಾಲದಲ್ಲಿ ಕೆಲವು ಕಲ್ಲುಗಳು ನೀರಿನ ರಭಸಕ್ಕೆ ಕುಸಿದುಬಿದ್ದಿರುತ್ತವೆ. ಅವುಗಳು ಈಗ ಆ ಸ್ಥಳದಲ್ಲೇ ಮಾಯವಾಗುತ್ತಿವೆ.

    ತಡೆಗೋಡೆಯಲ್ಲಿ ಅಳಿದುಳಿದ ಕಲ್ಲುಗಳನ್ನು ದುಷ್ಕರ್ಮಿಗಳು ಕಿತ್ತುಕೊಂಡು ಹೋಗಿ ಮನೆ ಕಟ್ಟಡ ಕೆಲಸಗಳಿಗೆ ಬಳಸುತ್ತಿದ್ದಾರೆ. ಈಗ ಮಳೆಗಾಲ ಬೇರೆ ಆರಂಭವಾಗುತ್ತಿದ್ದು, ಹೆಚ್ಚಿನ ನೀರು ಸಂಗ್ರಹಕ್ಕಾಗಿ ಉಳಿಸುವಂತ ಕಾರ್ಯವಾಗಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts