More

    ತಮಿಳು ‘ಮಾಸ್ಟರ್’ ಬಿಡುಗಡೆ ದಿನಾಂಕ ನಿಗದಿ; ಯಾರೂ ಮಾಡದ ಸಾಹಸಕ್ಕೆ ಕೈ ಹಾಕಿದ ಚಿತ್ರತಂಡ

    ಚೆನ್ನೈ: ತಮಿಳು ಸ್ಟಾರ್ ನಟ ವಿಜಯ್ ಮತ್ತು ವಿಜಯ್ ಸೇತುಪತಿ ನಟಿಸಿರುವ ಮಾಸ್ಟರ್ ಸಿನಿಮಾ ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಆಗಬೇಕಿತ್ತು. ಅದಾದ ಬಳಿಕ ದೀಪಾವಳಿ, ಕ್ರಿಸ್​ಮಸ್​ ಹೀಗೆ ಬಗೆಬಗೆ ಹಲವು ದಿನಾಂಕಗಳು ಅದಲುಬದಲಾದವು. ಇದೀಗ ಕೊನೆಗೂ ಚಿತ್ರತಂಡ ಅಧಿಕೃತವಾಗಿ ಸಿನಿಮಾ ಬಿಡುಗಡೆಗೆ ದಿನಾಂಕವನ್ನು ಘೋಷಣೆ ಮಾಡಿದೆ.

    ಇದನ್ನೂ ಓದಿ: ಕೇರಳದ ಲತಿಕಾ ಮನೆಗೆ ಸುದೀಪ್ ಭೇಟಿ; 15 ವರ್ಷದ ಹಿಂದಿನ ‘ಆಟೋಗ್ರಾಫ್​’ ದಿನಗಳನ್ನು ನೆನೆದ ಕಿಚ್ಚ

    ಹೌದು. ಲೋಕೇಶ್​ ಕಣಗರಾಜ್ ನಿರ್ದೇಶನದ ಮಾಸ್ಟರ್ ಸಿನಿಮಾ ಪೊಂಗಲ್​ ಪ್ರಯುಕ್ತ ಜ. 13ರಂದು ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. ಈವರೆಗೂ ಸಣ್ಣಪುಟ್ಟ ಸಿನಿಮಾಗಳು ರಿಲೀಸ್​ ಆಗಿದ್ದರೂ, ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆಯುವಲ್ಲಿ ಆ ಸಿನಿಮಾಗಳು ಸೋತಿದ್ದವು. ಇದೀಗ ಕಾಲಿವುಡ್​ನಲ್ಲಿ ದೊಡ್ಡ ಮಟ್ಟದ ಹೈಪ್ ಕ್ರಿಯೇಟ್ ಮಾಡಿರುವ ಮಾಸ್ಟರ್ ಸಿನಿಮಾ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರುವ ಸಾಹಸಕ್ಕಿಳಿದಿದೆ.

    ಇದನ್ನೂ ಓದಿ: ಸೌತ್​ ನಿರ್ಮಾಪಕರ ಸಿನಿಮಾದಲ್ಲಿ ಯಶ್​?; ಜನವರಿ 8ರ ಬರ್ತ್​ಡೇಗೆ ಅಚ್ಚರಿಯ ಮಾಹಿತಿ

    ಈ ಮೊದಲು ಈ ಸಿನಿಮಾ ಕನ್ನಡದಲ್ಲೂ ಡಬ್ ಆಗಿ ತೆರೆಕಾಣಲಿದೆ ಎಂದೇ ಹೇಳಲಾಗಿತ್ತು. ಆದರೆ, ಇದೀಗ ಅಧಿಕೃತ ಬಿಡುಗಡೆ ಪೋಸ್ಟರ್ ರಿಲೀಸ್ ಆಗಿದ್ದು, ಅದರಲ್ಲಿ ತೆಲುಗು ಮತ್ತು ಹಿಂದಿಗಷ್ಟೇ ಪ್ರಾಮುಖ್ಯತೆ ನೀಡಲಾಗಿದೆ. ಈ ನಡುವೆ ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ತಮಿಳುನಾಡು ಸಿಎಂ ಜತೆಗೂ ತಂಡ ಭೇಟಿಯಾಗಿ ಮಾತುಕತೆ ನಡೆಸಿದೆಯಂತೆ. ಶೇ. 50ರಷ್ಟಿರುವ ಆಸನದ ವ್ಯವಸ್ಥೆಯನ್ನು ಶೇ. 100 ಮಾಡುವಂತೆ ಬೇಡಿಕೆ ಇಟ್ಟಿದ್ದಾರಂತೆ.

    ಒಟ್ಟಿನಲ್ಲಿ ಇಡೀ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಬಜೆಟ್​ನ ಸಿನಿಮಾವೊಂದು ಕರೊನಾ ಬಳಿಕ ಬಿಡುಗಡೆ ಆಗುತ್ತಿರುವುದು ಇದೇ ಮೊದಲು. ಈ ಸಿನಿಮಾ ಬಳಿಕ ಅದ್ಯಾವ ರೀತಿ ಬೇರೆ ಬೇರೆ ಸಿನಿಮಾಗಳ ಆಗಮನವಾಗಲಿದೆ ಎಂಬುದನ್ನು ಕಾದುನೋಡಬೇಕಿದೆ. (ಏಜೆನ್ಸೀಸ್​)

    ಶಾಹಿದ್​ ಕಪೂರ್- ವಿಜಯ್​ ಸೇತುಪತಿ ಕಾಂಬಿನೇಷನ್​ ವೆಬ್​ಸಿರೀಸ್​ಗೆ ಶೀರ್ಷಿಕೆ ಅಂತಿಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts