ಶಾಹಿದ್​ ಕಪೂರ್- ವಿಜಯ್​ ಸೇತುಪತಿ ಕಾಂಬಿನೇಷನ್​ ವೆಬ್​ಸಿರೀಸ್​ಗೆ ಶೀರ್ಷಿಕೆ ಅಂತಿಮ

ಮುಂಬೈ: ಸೌತ್​ ಸ್ಟಾರ್ ವಿಜಯ್​ ಸೇತುಪತಿ ಮತ್ತು ಬಾಲಿವುಡ್​ ನಟ ಶಾಹೀದ್ ಕಪೂರ್​ ಇಬ್ಬರೂ ಒಟ್ಟಿಗೆ ತೆರೆಹಂಚಿಕೊಳ್ಳಲಿದ್ದಾರೆ. ಹಾಗೆಂದ ಮಾತ್ರಕ್ಕೆ ಇದ್ಯಾವುದೋ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದುಕೊಳ್ಳಬೇಡಿ. ಬದಲಿಗೆ ವೆಬ್​ಸಿರೀಸ್​ನಲ್ಲಿ ಇವರಿಬ್ಬರು ಮೊದಲ ಬಾರಿಗೆ ಎದುರಾಗಲಿದ್ದಾರೆ. ಇದನ್ನೂ ಓದಿ: 2024ಕ್ಕೆ ಆಂಧ್ರದ ಮುಖ್ಯಮಂತ್ರಿ ಆಗ್ತಾರಾ ಜ್ಯೂ ಎನ್​ಟಿಆರ್​? ಈಗಾಗಲೇ ಈ ಇಬ್ಬರು ಸ್ಟಾರ್ ನಟರು ನಟಿಸಲಿರುವುದು ಸುದ್ದಿಯಾಗಿತ್ತಾದರೂ, ಆ ವೆಬ್​ಸಿರೀಸ್​ನ ಶೀರ್ಷಿಕೆ ಏನಾಗಿರಲಿದೆ ಎಂಬುದು ಬಹಿರಂಗವಾಗಿರಲಿಲ್ಲ. ಇದೀಗ ಆ ಕುತೂಹಲಕ್ಕೂ ಉತ್ತರ ಸಿಕ್ಕಿದೆ. ವೆಬ್​ಸರಣಿಗೆ ‘ಗವಾರ್’ ಎಂಬ ಶೀರ್ಷಿಕೆ ಇಡಲಾಗಿದೆ. … Continue reading ಶಾಹಿದ್​ ಕಪೂರ್- ವಿಜಯ್​ ಸೇತುಪತಿ ಕಾಂಬಿನೇಷನ್​ ವೆಬ್​ಸಿರೀಸ್​ಗೆ ಶೀರ್ಷಿಕೆ ಅಂತಿಮ